ಉದಯಿಸುವ ಬುಧ ಈ ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಅದೃಷ್ಟ

Budh Grah ka Uday 2022:ಅಸ್ತವಾಗಿರುವ ಬುಧ ಜುಲೈ 29, 2022 ರಂದು ಮತ್ತೆ ಉದಯಿಸಲಿದೆ. ಉದಯಿಸಲಿರುವ ಬುಧ ಗ್ರಹ ಮೂರು ರಾಶಿಯವರ ಅದೃಷ್ಟವನ್ನೇ ಬದಲಿಸಲಿದ್ದಾನೆ. 

Written by - Ranjitha R K | Last Updated : Jul 25, 2022, 02:14 PM IST
  • ಗ್ರಹವು ಯಾವಾಗ ಅಸ್ತವಾಗುತ್ತದೆ ?
  • 3 ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.
  • ಗ್ರಹ ಅಸ್ತವಾದಾಗ ಅದರ ಶಕ್ತಿಗಳು ದುರ್ಬಲಗೊಳ್ಳುತ್ತವೆ
 ಉದಯಿಸುವ ಬುಧ ಈ ಮೂರು ರಾಶಿಯವರಿಗೆ ಕರುಣಿಸಲಿದ್ದಾನೆ ಅದೃಷ್ಟ  title=
Budha gochara effect(file photo)

ಬೆಂಗಳೂರು : Budh Grah ka Uday 2022 : ಜ್ಯೋತಿಷ್ಯದಲ್ಲಿ ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಕರೆಯಲಾಗುತ್ತದೆ.  ಬುಧ  ಬಹಳ ಚಿಕ್ಕ ಗ್ರಹ. ಆದರೆ ಬುಧ ಗ್ರಹದ ಸ್ಥಾನದಲ್ಲಿ ಆಗುವ ಸಣ್ಣ ಬದಲಾವಣೆ ಕೂಡಾ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಜುಲೈ 17, 2022 ರಂದು, ಬುಧ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸಿದ್ದು, ಬುಧ ಈ ಸಮಯದಲ್ಲಿ ಅಸ್ತವಾಗಿದೆ. ಹೀಗೆ ಅಸ್ತವಾಗಿರುವ ಬುಧ ಜುಲೈ 29, 2022 ರಂದು ಮತ್ತೆ ಉದಯಿಸಲಿದೆ. ಉದಯಿಸಲಿರುವ ಬುಧ ಗ್ರಹ ಮೂರು ರಾಶಿಯವರ ಅದೃಷ್ಟವನ್ನೇ ಬದಲಿಸಲಿದ್ದಾನೆ. 

ಗ್ರಹವು ಯಾವಾಗ  ಅಸ್ತವಾಗುತ್ತದೆ ? :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹವು ಸೂರ್ಯನ ಹತ್ತಿರ ಬಂದಾಗ, ಅಸ್ತವಾಗುತ್ತದೆ. ಹೀಗೆ ಗ್ರಹ ಅಸ್ತವಾದಾಗ ಅದರ ಶಕ್ತಿಗಳು ದುರ್ಬಲಗೊಳ್ಳುತ್ತವೆ ಮತ್ತು ಅಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ. ಜುಲೈ 29 ರಂದು ಬುಧವು ಉದಯಿಸಿದ ತಕ್ಷಣ, 3 ರಾಶಿಯವರು ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ.  

ಇದನ್ನೂ ಓದಿ : ಅದೃಷ್ಟದ ಸಂಕೇತ ಕೈಯಲ್ಲಿರುವ ಈ ರೇಖೆ .! ಪ್ರಾಪ್ತಿಯಾಗುವುದು ಅಪಾರ ಸಂಪತ್ತು ಮತ್ತು ಗೌರವ

ಮಿಥುನ: ಬುಧಗ್ರಹದ ಉದಯವು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡಲಿದೆ.  ಇದ್ದಕ್ಕಿದ್ದಂತೆ ಆದಾಯದ ಮೂಲ ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ವ್ಯಾಪಾರಿಗಳಿಗೆ ವಿಶೇಷವಾಗಿ ಲಾಭವಾಗಲಿದೆ. ಈ ರಾಶಿಯ ಜನರು ತಮ್ಮ ಮಾತಿನ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಮಾರ್ಕೆಟಿಂಗ್, ವಕೀಲರು, ಶಿಕ್ಷಕರು ಮುಂತಾದ ಮಾತನಾಡುವ ಕೆಲಸದಲ್ಲಿ ತೊಡಗಿಸಿಕೊಂಡಿರುವ ಜನರು ಪ್ರಯೋಜನ ಪಡೆಯುತ್ತಾರೆ. 

ಕನ್ಯಾ: ಬುಧಗ್ರಹದ ಉದಯವು ಕನ್ಯಾ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ನೀಡುತ್ತದೆ. ಅವರ ಆದಾಯ ಹೆಚ್ಚಾಗುತ್ತದೆ. ಪ್ರಗತಿ ಸಿಗಲಿದೆ. ಪ್ರೀತಿಯ ಜೀವನವೂ ಚೆನ್ನಾಗಿರುತ್ತದೆ. ಒಟ್ಟಾರೆಯಾಗಿ, ಈ ಸಮಯವು ತುಂಬಾ ಅನುಕೂಲಕರವಾಗಿರುತ್ತದೆ. ಷೇರು ಮಾರುಕಟ್ಟೆಯಲ್ಲಿ ಲಾಭವಾಗಬಹುದು. 

ಇದನ್ನೂ ಓದಿ : ಈ ಅಕ್ಷರದಿಂದ ಹೆಸರು ಆರಂಭವಾಗುವವರ ಮೇಲೆ ಜೀವನ ಪೂರ್ತಿ ಇರುತ್ತದೆ ಕುಬೇರನ ಆಶೀರ್ವಾದ

ತುಲಾ: ಬುಧಗ್ರಹದ ಉದಯವು ತುಲಾ ರಾಶಿಯವರ  ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಲಾಭವನ್ನು ತರಲಿದೆ.  ಹೊಸ ಕೆಲಸದ ಅವಕಾಶ ಸಿಗಬಹುದು. ಪ್ರಸ್ತುತ ಉದ್ಯೋಗದಲ್ಲಿ ಬಡ್ತಿ-ಇನ್ಕ್ರಿಮೆಂಟ್ ಪಡೆಯುವ ಸಂಪೂರ್ಣ ಅವಕಾಶಗಳಿವೆ. ಲಾಭ ಹೆಚ್ಚಾಗಲಿದೆ.

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News