CWG 2022 Swimming: ಸೆಮಿಸ್‌ಗೆ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ & ಕುಶಾಗ್ರ ರಾವತ್ ಔಟ್!

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತದ ಈಜುಪಟು ಶ್ರೀಹರಿ ನಟರಾಜ್ ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

Written by - Puttaraj K Alur | Last Updated : Jul 29, 2022, 07:23 PM IST
  • ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಸೆಮಿಸ್‍ಗೆ ಶ್ರೀಹರಿ ನಟರಾಜ್
  • 54.68 ಸೆ.ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಅರ್ಹತೆ ಪಡೆದ ಯುವ ಈಜುಪಟು
  • ನಿರಾಸೆ ಮೂಡಿಸಿದ ಸಜನ್ ಪ್ರಕಾಶ್ ಮತ್ತು ಕುಶಾಗ್ರ ರಾವತ್ ಔಟ್
CWG 2022 Swimming: ಸೆಮಿಸ್‌ಗೆ ಶ್ರೀಹರಿ ನಟರಾಜ್, ಸಜನ್ ಪ್ರಕಾಶ್ & ಕುಶಾಗ್ರ ರಾವತ್ ಔಟ್!  title=
Commonwealth Games 2022

ನವದೆಹಲಿ: ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಶುಕ್ರವಾರ ಭಾರತದ ಈಜುಪಟು ಶ್ರೀಹರಿ ನಟರಾಜ್ 54.68 ಸೆ.ಗಳಲ್ಲಿ ಗುರಿ ತಲುಪಿ ಸೆಮಿಫೈನಲ್‌ಗೆ ಅರ್ಹತೆ ಪಡೆದರು.

ಬೆಂಗಳೂರಿನ 21 ವರ್ಷದ ಈ ಯುವ ಈಜುಪಟು ತನ್ನ ಹೀಟ್‌ನಲ್ಲಿ 3ನೇ ಮತ್ತು ಒಟ್ಟಾರೆ 5ನೇ ವೇಗದ ಈಜುಗಾರನಾಗಿ ಹೊರಹೊಮ್ಮಿದರು. ಅವರು ತಮ್ಮ ವೈಯಕ್ತಿಕ ಅತ್ಯುತ್ತಮ ದಾಖಲೆಯಾದ 53.77 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರೆ ಹೀಟ್ಸ್‌ನಲ್ಲಿ ಅಗ್ರಸ್ಥಾನ ಪಡೆಯುತ್ತಿದ್ದರು. ವಿಶ್ವದ ಅತ್ಯಂತ ವೇಗದ ಈಜುಗಾರ ದಕ್ಷಿಣ ಆಫ್ರಿಕಾದ ಪೀಟರ್ ಕೊಯೆಟ್ಜೆ ಅವರು 53.91 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆದರೆ, ಭಾರತೀಯ ಅನುಭವಿ ಈಜುಪಟು ಸಜನ್ ಪ್ರಕಾಶ್ ಮತ್ತು ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕುಶಾಗ್ರಾ ರಾವತ್ ಸೆಮಿಫೈನಲ್‌ಗೆ ಮುನ್ನಡೆಯಲು ವಿಫಲರಾಗಿ ನಿರಾಸೆ ಮೂಡಿಸಿದರು.

ಇದನ್ನೂ ಓದಿ: Commonwealth Games 2022: ಪ್ರೀ ಕ್ವಾರ್ಟರ್ ಗೆ ಲಗ್ಗೆ ಇಟ್ಟ ಭಾರತದ ಬಾಕ್ಸರ್ ಶಿವ ಥಾಪಾ

ಪ್ರಕಾಶ್ ಪುರುಷರ 50 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ (25.01 ಸೆ) 18ನೇ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಅತ್ಯುತ್ತಮ 16 ಅಥ್ಲೀಟ್‌ಗಳು ಸೆಮಿಸ್‌ಗೆ ಮುನ್ನಡೆದರು. ಪುರುಷರ 400 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕುಶಾಗ್ರಾ ಸಹ 3:57.45 ಸೆಕೆಂಡ್‌ಗಳಲ್ಲಿ ಕ್ರಮಿಸಿ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಪ್ರಕಾಶ್ ಮತ್ತು ಕುಶಾಗ್ರ ಇಬ್ಬರಿಗೂ ಸ್ಪರ್ಧೆಯಲ್ಲಿ ಇನ್ನೂ ಅವಕಾಶವಿದ್ದು, ಇತರ ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ.

ಪ್ರಕಾಶ್ ಪುರುಷರ 100 ಮೀ ಮತ್ತು 200 ಮೀಟರ್ ಬಟರ್‌ಫ್ಲೈನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿಯಲಿದ್ದು, ಕುಶಾಗ್ರಾ ಪುರುಷರ 1500 ಮೀ ಫ್ರೀಸ್ಟೈಲ್ ಮತ್ತು 200 ಮೀ ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: Pro Kabaddi League: ಬೆಂಗಳೂರು ತಂಡದಿಂದ ಪವನ್ ಕುಮಾರ್ ಶೆರಾವತ್ ಔಟ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News