Viral Video: ಘಟಸರ್ಪವೊಂದು ವ್ಯಕ್ತಿಯೊಬ್ಬನ ಅಂಗಿಯೋಳಗೆ ನುಗ್ಗಿದೆ. ತನ್ನ ಶರ್ಟ್ನೊಳಗೆ ಏನೋ ನುಗ್ಗಿದ ಅಂತಾ ತಿಳಿದ ಆತ ಭಯದಿಂದ ದಡಕ್ಕೆ ಓಡಿ ಬಂದಿದ್ದಾನೆ. ತನ್ನ ಅಂಗಿ ಎತ್ತಿ ತನ್ನ ಸೊಂಟದ ಸುತ್ತಲೂ ಅಲುಗಾಡಿಸಿದ್ದಾನೆ. ಈ ವೇಳೆ ಕೆಳಗೆ ಬಿದ್ದದ್ದ ಹಾವನ್ನು ಕಂಡು ದೂರ ಓಡಿ ಹೋಗಿದ್ದಾನೆ.
Swimming Benefits: ಪ್ರತಿನಿತ್ಯ ಮೂವತ್ತು ನಿಮಿಷಗಳ ಕಾಲ ಈಜುವುದರಿಂದ ಆರೋಗ್ಯದ ಯೋಗಕ್ಷೇಮಕ್ಕೆ ಉತ್ತಮ ಪ್ರಯೋಜನಗಳನ್ನು ನೀಡುತ್ತವೆ. ಕಡಿಮೆ-ಪ್ರಭಾವದ ಈಜು ಕಾಯಿಲೆಗಳು ಅಥವಾ ಜಂಟಿ ಸಮಸ್ಯೆಗಳಿರುವ ಜನರಿಗೆ ಉತ್ತಮ ತಾಲೀಮು ಆಗಿದೆ. ಇದರು ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
Suratkal students Missing Case: ಮೃತ ವಿದ್ಯಾರ್ಥಿಗಳನ್ನು ಸುರತ್ಕಲ್ನ ಅಗರಮೇಲ್ ನಿವಾಸಿ ಚಂದ್ರಕಾಂತ ಎಂಬವರ ಪುತ್ರ ಯಶ್ವಿತ್(15), ಹಳೆಯಂಗಡಿ ತೋಕೂರು ನಿವಾಸಿ ವಸಂತ ಎಂಬುವರ ಪುತ್ರ ರಾಘವೇಂದ್ರ (15), ಸುರತ್ಕಲ್ನ ಗುಡ್ಡೆಕೊಪ್ಲ ನಿವಾಸಿ ವಿಶ್ವನಾಥ ಎಂಬುವರ ಪುತ್ರ ನಿರೂಪ(15) ಮತ್ತು ಚಿತ್ರಾಪುರ ನಿವಾಸಿ ದೇವದಾಸ್ ಎಂಬುವರ ಪುತ್ರ ಅನ್ವಿತ್(15) ಎಂದು ಗುರುತಿಸಲಾಗಿದೆ.
ಶಿರಸಿ ತಾಲೂಕಿನ ಮುಂಡಗೋಡ ಸಮೀಪದ ಹಳ್ಳಿಯಿಂದ ಬಂದಿದ್ದ 12 ಜನ ಯುವಕರ ಗುಂಪಿನಲ್ಲಿ ಆರೇಳು ಜನ ಈಜಾಡಲು ಹೋಗಿದ್ದರು. ಈ ವೇಳೆ ಈಜುವಾಗ ಜಲಾಶಯದ ಮಣ್ಣಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ಹರಿಯಾಣದ 73 ವರ್ಷದ ಅಜ್ಜಿಯೊಬ್ಬರು ನದಿಗೆ ಹಾರೋ ಮೂಲಕ ಸಾಹಸ ಪ್ರದರ್ಶಿಸಿದ್ದಾರೆ.. ಗಂಗಾ ನದಿಗೆ 40 ಅಡಿ ಎತ್ತರದಿಂದ ಹಾರಿದ್ದಾರೆ. ಓಂವತಿ ಅನ್ನೋ ಅಜ್ಜಿ ಈ ಸಾಹಸ ಮಾಡಿದ್ದು, ನಾನು ಮಾಡಿದಂತೆ ಯಾರೂ ಮಾಡೋದಕ್ಕೆ ಪ್ರಯತ್ನಿಸಬೇಡಿ.. ನಾನು ಚಿಕ್ಕಂದಿನಿಂದಲೂ ಈಜುತ್ತಿದ್ದೇನೆ ಎಂದಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಈಜಲು ಹೋಗಿ ಕೆರೆಯಲ್ಲಿ ಮುಳುಗಿ ಮೂವರು ಯುವಕರ ನೀರು ಪಾಲಾಗಿರುವ ಘಟನೆ ನಾಗಾವಾರ ಬಳಿಯ ಸಾರಾಯಿ ಪಾಳ್ಯದ ದೊಡ್ಡಗುಬ್ಬಿ ಕೆರೆಯಲ್ಲಿ ನಡೆದಿದೆ. ದೊಡ್ಡಗುಬ್ಬಿ ಕೆರೆಗೆ ಈಜಲು ಬಂದಿದ್ದ ಐವರು ಯುವಕರಲ್ಲಿ ಮೂರು ಜನ ಯುವಕರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಬದುಕುಳಿದಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಡಿ.ಕೆ. ಶಿವಕುಮಾರ್ ಮತ್ತು ಸುಧಾಕರ್ ಮೊದಲಿಂದಲೂ ಎಣ್ಣೆ-ಸೀಗೆಕಾಯಿ ಇದ್ದಂತೆ. ಇಬ್ಬರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಶಿಷ್ಯರಾಗಿದ್ದರೂ, ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ಅವರ ಸಂಬಂಧ ಅಷ್ಟಕ್ಕಷ್ಟೇ. ಡಿ.ಕೆ. ಶಿವಕುಮಾರ್ ಪ್ರತಿನಿಧಿಸು ಕನಕಪುರಕ್ಕೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜನ್ನು ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಕೊಂಡೊಯ್ದ ಮೇಲೆ ಇವರಿಬ್ಬರ ನಡುವಿನ ಗುದ್ದಾಟ ಇನ್ನಷ್ಟು ಹೆಚ್ಚಾಗಿತ್ತು.
ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜನರಿಗೆ ಸ್ಪಂದಿಸುವ ಕೆಲಸ ಆಗುತ್ತಿಲ್ಲ ಎಂದು ಮೂದಲಿಸಿ ಬಿಜೆಪಿಗೆ ಹಾರಿ ಬಂದಿದ್ದ ಸುಧಾಕರ್ ಈಗ ಸ್ವತಃ ಸಚಿವರಾಗಿದ್ದಾರೆ. ಸ್ವತಃ ವೈದ್ಯರಾಗಿರುವ ಕಾರಣಕ್ಕೆ ಇವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಂಥ ಮಹತ್ವದ ಖಾತೆಯನ್ನೇ ಕೊಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.