ಐಪಿಎಲ್‌ನಲ್ಲಿ 14 ಕೋಟಿಗೆ ಸೇಲ್‌ ಆಗಿದ್ದ ಎಂಎಸ್‌ ಧೋನಿ ಬಲಗೈ ಬಂಟ ಟೀಂ ಇಂಡಿಯಾಗೆ ಎಂಟ್ರಿ

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ದೀಪಕ್ ಚಹಾರ್ ಜಿಂಬಾಬ್ವೆ ಪ್ರವಾಸಕ್ಕೆ ಮರಳಿದ್ದಾರೆ. ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದಾಗಿ ಇಡೀ ಐಪಿಎಲ್‌ನಿಂದ ಹೊರಗುಳಿದಿದ್ದರು. ಕಳೆದ 6 ತಿಂಗಳಿಂದ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. 

Written by - Bhavishya Shetty | Last Updated : Aug 1, 2022, 01:57 PM IST
  • ಜಿಂಬಾಬ್ವೆ ಪ್ರವಾಸದಲ್ಲಿ ಭಾರತದ ಭಾಗವಾಗಲಿದ್ದಾರೆ ದೀಪಕ್‌ ಚಹಾರ್‌
  • ಸ್ಟಾರ್ ಆಲ್‌ರೌಂಡರ್ ದೀಪಕ್ ಚಹಾರ್ ಟೀಂ ಇಂಡಿಯಾಗೆ ಎಂಟ್ರಿ
  • ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು
ಐಪಿಎಲ್‌ನಲ್ಲಿ 14 ಕೋಟಿಗೆ ಸೇಲ್‌ ಆಗಿದ್ದ ಎಂಎಸ್‌ ಧೋನಿ ಬಲಗೈ ಬಂಟ ಟೀಂ ಇಂಡಿಯಾಗೆ ಎಂಟ್ರಿ title=
Deepak Chahar

ಜಿಂಬಾಬ್ವೆ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದಾರೆ. ಈ ಪ್ರವಾಸಕ್ಕೆ ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ಮಾಡಲಾಗಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಅವರಂತಹ ಅನುಭವಿ ಆಟಗಾರರಿಗೆ ಈ ಪ್ರವಾಸದಿಂದ ವಿಶ್ರಾಂತಿ ನೀಡಲಾಗಿದೆ. ಇನ್ನು 6 ತಿಂಗಳ ನಂತರ ಈ ಪ್ರವಾಸಕ್ಕೆಂದು ಸ್ಟಾರ್ ಆಟಗಾರ ತಂಡಕ್ಕೆ ಮರಳಿದ್ದಾರೆ. ಈ ಆಟಗಾರನನ್ನು ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ವಿಶೇಷ ಗೆಳೆಯ ಎಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ: ಈ ಸ್ಥಳದಲ್ಲಿ ಕೋತಿಗಳಿಗಾಗೇ ನಡೆಯುತ್ತೆ ವಿಶೇಷ ಉತ್ಸವ: ಮನಮೆಚ್ಚುವ ಫೋಟೋಗಳು ನೋಡಿ

ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ದೀಪಕ್ ಚಹಾರ್ ಜಿಂಬಾಬ್ವೆ ಪ್ರವಾಸಕ್ಕೆ ಮರಳಿದ್ದಾರೆ. ದೀಪಕ್ ಚಹಾರ್ ಗಾಯದ ಸಮಸ್ಯೆಯಿಂದಾಗಿ ಇಡೀ ಐಪಿಎಲ್‌ನಿಂದ ಹೊರಗುಳಿದಿದ್ದರು. ಕಳೆದ 6 ತಿಂಗಳಿಂದ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ದೀಪಕ್ ಚಹಾರ್ ಭಾರತಕ್ಕಾಗಿ ತನ್ನ ಕೊನೆಯ ಪಂದ್ಯವನ್ನು 20 ಫೆಬ್ರವರಿ 2022 ರಂದು ವೆಸ್ಟ್ ಇಂಡೀಸ್ ವಿರುದ್ಧ ಆಡಿದ್ದರು. ಚಹಾರ್ ಕಿಲ್ಲರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ.

ಇದನ್ನೂ ಓದಿ: ಶ್ರಾವಣದ ಮೂರನೇ ಸೋಮವಾರ ಈ ರೀತಿ ಪೂಜೆ ಮಾಡಿ: ಲಾಭ ದುಪ್ಪಟ್ಟಾಗುವುದು ಖಂಡಿತ

ದೀಪಕ್ ಚಹಾರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. ಐಪಿಎಲ್ 2021 ರಲ್ಲಿ ಒಟ್ಟು 15 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದರು. ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಗತ್ಯವಿದ್ದಾಗೆಲ್ಲಾ ತಂಡದ ವರ್ಚಸನ್ನು ಬದಲಾಯಿಸಬಲ್ಲ ತಾಕತ್ತು ಚಹಾರ್‌ಗೆ ಇದೆ. ಚಹರ್ ಐಪಿಎಲ್‌ನ 69 ಪಂದ್ಯಗಳಲ್ಲಿ 59 ವಿಕೆಟ್ ಪಡೆದಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು ಸಿಎಸ್‌ಕೆ ತಂಡವು 14 ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News