ಹೈದರಾಬಾದ್ : ಖ್ಯಾತ ತೆಲುಗು ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌ಟಿ ರಾಮರಾವ್ (ಎನ್‌ಟಿಆರ್) ಅವರ ಪುತ್ರಿ ಉಮಾ ಮಹೇಶ್ವರಿ ಹೈದರಾಬಾದ್‌ನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಮಾ ಮಹೇಶ್ವರಿ ಅವರಿಗೆ 57 ವರ್ಷ ವಯಸ್ಸಾಗಿತ್ತು, ಅವರು ವಾಸವಿರುವ ಮನೆಯ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವರ ಪುತ್ರಿ ಹಾಗೂ ಅಳಿಯ ಬಾಗಿಲನ್ನು ಮುರಿದಿದ್ದಾರೆ, ಆಗ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗ ಪ್ರಕರಣವನ್ನು ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಿದ್ದು, ಪ್ರಾಥಮಿಕ ತನಿಖೆಗಳ ಪ್ರಕಾರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಶಂಕಿಸಿದ್ದಾರೆ.
ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?
ಉಮಾ ಮಹೇಶ್ವರಿ ಅವರು ಎನ್‌ಟಿಆರ್ ಅವರ ನಾಲ್ವರು ಪುತ್ರಿಯರಲ್ಲಿ ಕಿರಿಯರು, ಮಾಜಿ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ದಗ್ಗುಬಾಟಿ ಪುರಂದೇಶ್ವರಿ ಮತ್ತು ಟಿಡಿಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಪತ್ನಿ ನರಾ ಭುವನೇಶ್ವರಿ ಅವರ ಸಹೋದರಿಯರಾಗಿದ್ದಾರೆ.ಈಗ ಉಮಾ ಮಹೇಶ್ವರಿ ಅವರ ಸಹೋದರ ಜನಪ್ರಿಯ ಟಾಲಿವುಡ್ ನಟ ಮತ್ತು ಟಿಡಿಪಿ ಶಾಸಕ ಎನ್.ಬಾಲಕೃಷ್ಣ ಮತ್ತು ವಿದೇಶದಲ್ಲಿ ನೆಲೆಸಿರುವ ಇತರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಎನ್‌ಟಿಆರ್ ಅವರಿಗೆ 12 ಮಕ್ಕಳಿದ್ದರು ಅವರಲ್ಲಿ ಎಂಟು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು. ನಾಲ್ಕು ಹೆಣ್ಣು ಮಕ್ಕಳಲ್ಲಿ ಉಮಾ ಮಹೇಶ್ವರಿ ಕಿರಿಯವರಾಗಿದ್ದರು.ಇತ್ತೀಚೆಗಷ್ಟೇ ಅವರ ಮಗಳ ಮದುವೆಗೆ ಕುಟುಂಬಸ್ಥರು ಒಂದೆಡೆ ಸೇರಿದ್ದರು. ನಟ ಮತ್ತು ಮಾಜಿ ಸಚಿವ ಎನ್ ಹರಿಕೃಷ್ಣ ಸೇರಿದಂತೆ ಎನ್ಟಿಆರ್ ಅವರ ಮೂವರು ಪುತ್ರರು ಈಗಾಗಲೇ ನಿಧನರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.