ನವದೆಹಲಿ : ದೇಶದಲ್ಲಿ ದೀರ್ಘಕಾಲದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ. ಸರ್ಕಾರಿ ತೈಲ ಕಂಪನಿಗಳು ಸುಮಾರು ಎರಡು ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಸಿಎನ್‌ಜಿ ಬೆಲೆಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿದೆ. ಈಗ ಕೆಲವು ಸ್ಥಳಗಳಲ್ಲಿ, ಸಿಎನ್‌ಜಿ ಬೆಲೆಯು ಪೆಟ್ರೋಲ್ ಬೆಲೆಗೆ ಸಮನಾಗಿದ್ದರೆ, ಕೆಲವೆಡೆ ಪೆಟ್ರೋಲ್ ಗಿಂತಲೂ ಸಿಎನ್‌ಜಿ ಬೆಲೆ ದುಬಾರಿಯಾಗಿದೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಸಿಎನ್‌ಜಿ ಅಗ್ಗವಾಗಿತ್ತು. ಆದರೆ ಈಗ ಸಿಎನ್‌ಜಿ ಕೂಡ ಇಲ್ಲಿ ಜನರಿಗೆ ದುಬಾರಿಯಾಗಿದೆ.
ಸಿಎನ್‌ಜಿ ಬೆಲೆ ಏರಿಕೆ :
ಬೆಲೆ ಏರಿಕೆ ಬಿಸಿ ಜನಸಾಮಾನ್ಯರನ್ನು ಬೆನ್ನು ಬಿಡುವಂತೆ ಕಾಣುವುದಿಲ್ಲ. ಕೆಲವೆಡೆ ಸಿಎನ್ ಜಿ ಬೆಲೆ ಏರಿಕೆಯಿಂದ ಜನರ ಬಜೆಟ್ ಕಗ್ಗಂಟಾಗುತ್ತಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪೆಟ್ರೋಲ್ ಬೆಲೆ 96.57 ರೂ. ಆಗಿದ್ದು, ಡೀಸೆಲ್ ಇಲ್ಲಿ 89.76 ರೂ.ಗೆ ಲಭ್ಯವಿದೆ. ಆದರೆ, ಇಲ್ಲಿ ಸಿಎನ್‌ಜಿ ಬೆಲೆ ಏರಿಕೆಯಾಗಿದೆ. ಗ್ರೀನ್ ಗ್ಯಾಸ್ ಲಿಮಿಟೆಡ್ (ಜಿಜಿಎಲ್) ಭಾನುವಾರ ಲಕ್ನೋ ಮತ್ತು ಉನ್ನಾವೊದಲ್ಲಿ ಸಿಎನ್‌ಜಿ ಬೆಲೆಯನ್ನು ಕೆಜಿಗೆ 5.3 ರೂ. ಯಷ್ಟು ಏರಿಕೆ ಮಾಡಿದೆ.
ಇದನ್ನೂ ಓದಿ : Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆಗೆ ಬಂಪರ್ ಧಾರಣೆ
ಹೆಚ್ಚು ಹಣ ಪಾವತಿಸಬೇಕಾಗುತ್ತದೆ :
ಇದರೊಂದಿಗೆ ಆಗಸ್ಟ್ 1ರ ಮಂಗಳವಾರದಿಂದ ರಾಜಧಾನಿ ಲಕ್ನೋದಲ್ಲಿ ಸಿಎನ್‌ಜಿಗೆ ಜನರು ಕೆಜಿಗೆ 96.10 ರೂ. ನೀಡಬೇಕಾಗಿದೆ. ಇದಲ್ಲದೇ ಉನ್ನಾವೊದಲ್ಲಿ ಪ್ರತಿ ಕೆಜಿಗೆ 97.55 ರೂ. ಪಾವತಿಸಬೇಕಾಗುತ್ತದೆ. ಈ ಹಣಕಾಸು ವರ್ಷದಲ್ಲಿ ಇದು ಮೂರನೇ ಬಾರಿ ಸಿಎನ್‌ಜಿ ಬೆಲೆ ಏರಿಕೆಯಾಗುತ್ತಿರುವುದು.
ಈ ಮೊದಲು ಕೂಡಾ ಸಿಎನ್‌ಜಿ ಬೆಲೆ ಏರಿಕೆಯಾಗಿತ್ತು :
ಈ ವರ್ಷದ ಮಾರ್ಚ್‌ನಿಂದ ಸಿಎನ್‌ಜಿ ಬೆಲೆ ಏರಿಕೆಯಾಗುತ್ತಿದೆ. ಈ ಹಿಂದೆ ಜುಲೈನಲ್ಲಿ ಸಿಎನ್‌ಜಿ ಬೆಲೆ ಲಕ್ನೋದಲ್ಲಿ ಕೆಜಿಗೆ 90.80 ರೂ. ಮತ್ತು ಉನ್ನಾವೊದಲ್ಲಿ 92.25 ರೂ. ಆಗಿತ್ತು. ಈ ಹಿಂದೆ ಮೇ ತಿಂಗಳಲ್ಲಿ ಜಿಜಿಎಲ್ ಸಿಎನ್‌ಜಿ ಬೆಲೆಯನ್ನು 2 ರೂ ಹೆಚ್ಚಳ ಮಾಡಿತ್ತು.
ಇದನ್ನೂ ಓದಿ : ಐಟಿಆರ್ ಇ-ವೆರಿಫೈ ಪ್ರಕ್ರಿಯೆಯನ್ನು 30 ದಿನಗಳೊಳಗೆ ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.