Mangalore : ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡ

ಮಂಗಳೂರಿನಲ್ಲಿ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡಕ್ಕೀಡಾದ ಘಟನೆ ನಡೆದಿದೆ.

Written by - Chetana Devarmani | Last Updated : Aug 7, 2022, 04:35 PM IST
  • ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡ
  • ಮಂಗಳೂರಿನಲ್ಲಿ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌
  • ಎಲ್ಲಾ 10 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರು
Mangalore : ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡ title=
ಬೋಟ್‌ ಅವಘಡ

ದಕ್ಷಿಣ ಕನ್ನಡ : ಮಂಗಳೂರಿನಲ್ಲಿ ಆಳ ಸಮುದ್ರದ ಮೀನುಗಾರಿಕೆ ತೆರಳಿದ್ದ ಬೋಟ್‌ ಅವಘಡಕ್ಕೀಡಾದ ಘಟನೆ ನಡೆದಿದೆ. ಆಳ ಸಮುದ್ರಕ್ಕೆ ಹೋದ ಮೀನುಗಾರಿಕಾ ಬೋಟ್‌ ತಳಭಾಗದಲ್ಲಿ ತೂತಾಗಿ ಮುಳುಗಡೆಯಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: BSF Soldier : ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು

ಅದರಲ್ಲಿದ್ದ ಎಲ್ಲಾ 10 ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೋಟ್ ಸಂಪೂರ್ಣ ಮುಳುಗಡೆಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಜೈ ಶ್ರೀರಾಮ್ ಎಂಬ ಹೆಸರಿನ ಕೃಷ್ಣ ಕುಮಾರ್ ಮಾಲಕತ್ವದ ಮೀನುಗಾರಿಕಾ ಬೋಟ್‌ ನಿನ್ನೆ ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದು, ಆಳ ಸಮುದ್ರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಏಕಾಏಕಿ ತೂತಾಗಿ ನೀರು ಒಳ ನುಗ್ಗಿತ್ತು.

ಈ ಸಂದರ್ಭದಲ್ಲಿ ದೋಣಿಯಲ್ಲಿದ್ದವರೂ ಆಸು-ಪಾಸಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರಿಕಾ ದೋಣಿಯವರಿಗೆ ಮಾಹಿತಿ ನೀಡಿದ್ದು, ಆ ಬೋಟ್ ನಲ್ಲಿದ್ದವರೂ ಅಪಘಾತಕ್ಕೆ ಸಿಲುಕಿದ್ದ ದೋಣಿಯಲ್ಲಿದ್ದವರನ್ನು ರಕ್ಷಿಸಿ ದಡಕ್ಕೆ  ಕರೆ ತಂದಿದ್ದಾರೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಕಳೆದ ಕೆಲವು ದಿನಗಳಿಂದ ಸಮುದ್ರದಲ್ಲಿ ಭಾರಿ ಗಾಳಿ ಬೀಸುತ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿದೆ.

ಇದನ್ನೂ ಓದಿ: RX Bike Birthday Celebration : ಭರ್ಜರಿಯಾಗಿ Rx ಬೈಕ್ ಹುಟ್ಟು ಹಬ್ಬ ಆಚರಿಸಿದ ಯುವಕ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News