ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ

 ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಿದಾಗ, ಅದು ರಾಶಿಚಕ್ರದ ಚಿಹ್ನೆಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತದೆ. 11 ತಿಂಗಳ ನಂತರ, ಸೂರ್ಯ ದೇವರು ತಮ್ಮ ಸ್ವಂತ ರಾಶಿಗೆ ಪ್ರವೆಶಿಸಲಿದ್ದಾನೆ. ಅದರ ಗರಿಷ್ಠ ಪರಿಣಾಮವು ವೃಷಭ ರಾಶಿಯ ಮೇಲೆ ಕಂಡುಬರುತ್ತದೆ.

Written by - Ranjitha R K | Last Updated : Aug 9, 2022, 01:49 PM IST
  • ಸಿಂಹ ರಾಶಿ ಪ್ರವೇಶಿಸಲಿರುವ ಸೂರ್ಯ
  • ವೃಷಭ ರಾಶಿಯವರಿಗೆ ಕಂಟಕ
  • ಎಚ್ಚರದಿಂದ ಇರಬೇಕು ಈ ರಾಶಿಯವರು
 ಹನ್ನೊಂದು ತಿಂಗಳ ನಂತರ ತನ್ನ ರಾಶಿ ಪ್ರವೇಶಿಸುತ್ತಿರುವ ಸೂರ್ಯ, ಈ ರಾಶಿಯವರಿಗೆ ಕಂಟಕ  title=
Sun transit effect (file photo)

ಬೆಂಗಳೂರು : 11 ತಿಂಗಳ ನಂತರ, ಗ್ರಹಗಳ ರಾಜ, ಸೂರ್ಯ ನಾರಾಯಣನು ಆಗಸ್ಟ್ 17 ರಂದು ಸಿಂಹ ರಾಶಿ ಪ್ರವೇಶಿಸುತ್ತಾನೆ. ನಂತರ ಒಂದು ತಿಂಗಳು ಇಲ್ಲೇ ಇರಲಿದ್ದಾನೆ ಸೂರ್ಯ.  ಗ್ರಹಗಳ ರಾಜಕುಮಾರ ಬುಧ ಕೂಡಾ ಈಗಾಗಲೇ ಸಿಂಹ ರಾಶಿಯಲ್ಲಿಯೇ ಇದ್ದಾನೆ. . ಬಾಹ್ಯಾಕಾಶದಲ್ಲಿ ನಡೆಯುತ್ತಿರುವ ಈ ಬದಲಾವಣೆಯು ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿದೆ. ಬಾಹ್ಯಾಕಾಶದಲ್ಲಿ ಗ್ರಹಗಳ ಬದಲಾವಣೆಗಳು ಪ್ರತ್ಯೇಕ ರಾಶಿಚಕ್ರ ಮತ್ತು ಗ್ರಹಗಳಿಗೆ ಅನುಸಾರವಾಗಿ ತಮ್ಮ ಫಲಿತಾಂಶಗಳನ್ನು ನೀಡುತ್ತವೆ. ಈ ಬದಲಾವಣೆಯು ವೃಷಭ ರಾಶಿಯವರಿಗೆ ಹೇಗೆ ಫಲ ನೀಡಲಿದೆ ತಿಳಿಯೋಣ.

ವೃಷಭ ರಾಶಿಯವರು ಶಾಂತ ಮನಸ್ಸಿನಿಂದ ಕೆಲಸ ಮಾಡಿ :
ವೃಷಭ ರಾಶಿಯವರಿಗೆ ಮಾನಸಿಕ ಗೊಂದಲವಿರುತ್ತದೆ. ಹಾಗಾಗಿ ಈ ಅವಧಿಯಲ್ಲಿ ತುಂಬಾ  ಸಮಾಧಾನಕರವಾದ ಮನಸ್ಸಿನಿಂದ ಕೆಲಸ ಮಾಡಬೇಕು. ಯಾವುದೇ ವಿಷಯವೇ ಇರಲಿ ಸಮಚಿತ್ತದಿಂದಲೇ ಮುಂದುವರೆಯಬೇಕು. ಈ ರಾಶಿಯ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ ಜನರು ನಿಯಮಿತವಾಗಿ ತಮ್ಮ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. 

ಇದನ್ನೂ ಓದಿ : Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ

ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಒಳ್ಳೆಯದು :  
ಸಂಸಾರದಲ್ಲಿಯೂ ಶಾಂತಿ ಕಾಪಾಡಬೇಕು. ಸಣ್ಣಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಬೇಕು. ಯಾವುದೇ ವಿಷಯದ ಬಗ್ಗೆ ಆಕ್ಷೇಪವಿದ್ದಲ್ಲಿ, ಬಹಳ ತಾಳ್ಮೆಯಿಂದ ಅದನ್ನು ಪರಿಹರಿಸಿಕೊಳ್ಳಿ. ಉದ್ವೇಗಕ್ಕೆ ಒಳಗಾಗಬೇಡಿ. ಸ್ಥಿರಾಸ್ತಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಬರುವ ಅನೇಕ ರೀತಿಯ ಸಮಸ್ಯೆಗಳನ್ನು ಜಾಗರೂಕತೆಯಿಂದ  ಪರಿಹರಿಸಿಕೊಳ್ಳಿ. ನಿಮ್ಮ ಸಂಗಾತಿಯನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಅವರ ನೋವು ನಲಿವಿನಲ್ಲಿ ಸಹಭಾಗಿಗಳಾಗಿ. 

ಸೌಕರ್ಯಗಳ ಕೊರತೆ , ಮಾನಹಾನಿ ಸಾಧ್ಯತೆ : 
 ಪ್ರಯಾಣದ ಸಮಯದಲ್ಲಿ ನಿಮ್ಮ ಔಷಧಿ ಮತ್ತು ಇತರ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬೇಕು, ಇಲ್ಲದಿದ್ದರೆ ಅನಾನುಕೂಲತೆಯನ್ನು ಎದುರಿಸಬೇಕಾಗುತ್ತದೆ. ಈ ತಿಂಗಳಲ್ಲಿ, ಸೌಕರ್ಯಗಳ ಕೊರತೆ ಇರುತ್ತದೆ. ಕೆಲವರು ನಿಮಗೆ ಅನಗತ್ಯವಾಗಿ ತೊಂದರೆ ಕೊಡಬಹುದು. ಅದು ಕಚೇರಿಯಾಗಿರಲಿ  ಅಥವಾ ಮನೆಯಾಗಿರಲಿ, ಅನಗತ್ಯವಾಗಿ ತೊಂದರೆ  ಕೊಡುವವರು ಇರುತ್ತಾರೆ. ನಿಮ್ಮ ವಿರುದ್ದ ಸುಳ್ಳು ದೂರುಗಳನ್ನು ನೀಡುವ ಮೂಲಕ ಕಿರುಕುಳ ನೀಡಬಹುದು. ಈ ಸಂದರ್ಭಗಳು ಖ್ಯಾತಿಯ ನಷ್ಟಕ್ಕೂ ಕಾರಣವಾಗಬಹುದು.
 
 ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕಿದ್ರೆ ನಿಮ್ಮ ಕೆಟ್ಟ ಸಮಯ ಶುರುವಾದಂತೆ

 

( ಸೂಚನೆ : ಇಲ್ಲಿ ನೀಡಲಾದ ಲೇಖನವು ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News