ಭಾರತವನ್ನು ಹಾಡಿ ಹೊಗಳಿದ ಪಾಕ್ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್

Imran Khan Praise India Again:  ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಶ್ಲಾಘಿಸಿದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ವಿಡಿಯೋವನ್ನು ಶೇರ್ ಮಾಡಿದ್ದಾರೆ. 

Written by - Ranjitha R K | Last Updated : Aug 15, 2022, 09:20 AM IST
  • ಭಾರತದ ನೀತಿಯನ್ನು ಹೊಗಳಿದ ಇಮ್ರಾನ್ ಖಾನ್
  • ಭಾರತ ವಿದೇಶಾಂಗ ಸಚಿವರ ವಿಡಿಯೋ ಹಂಚಿಕೊಂಡ ಪಾಕ್ ಮಾಜಿ ಪ್ರಧಾನಿ
  • ಪಾಕ್ ಅಮೆರಿಕಾಕ್ಕೆ ಸಂಪೂರ್ಣ ತಲೆ ಬಾಗಿದೆ - ಇಮ್ರಾನ್ ಖಾನ್
ಭಾರತವನ್ನು ಹಾಡಿ ಹೊಗಳಿದ ಪಾಕ್ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್  title=
Imran Khan Praise India Again (file photo)

Imran Khan Praise India Again: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತೊಮ್ಮೆ ಭಾರತವನ್ನು ಹೊಗಳಿದ್ದಾರೆ. ಶನಿವಾರ, ಇಮ್ರಾನ್ ಖಾನ್,  ಸ್ಲೋವಾಕಿಯಾದಲ್ಲಿ ನಡೆದ ರ‍್ಯಾಲಿಯಲ್ಲಿ ಭಾರತದ ವಿದೇಶಾಂಗ ನೀತಿಯನ್ನು ಹೊಗಳಿದ್ದಾರೆ.  ಮಾತ್ರವಲ್ಲ, ಭಾರತದ ವಿದೇಶಾಂಗ ಸಚಿವರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.   ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸುವ ಕುರಿತು ಕೇಳಿದ ಪ್ರಶ್ನೆಗಳಿಗೆ ಜೈಶಂಕರ್ ಉತ್ತರಿಸುತ್ತಿರುಯ್ವ ವಿಡಿಯೋ ಇದಾಗಿದೆ. ಈ ವೀಡಿಯೋ ತೋರಿಸುವ ಮೂಲಕ ಇದು ನಿಜವಾದ ಸ್ವತಂತ್ರ ದೇಶ ಎಂದು ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಎರಡೂ ಒಟ್ಟಿಗೆ ಸ್ವತಂತ್ರವಾದವು, ಆದರೆ ಇಂದು ಪಾಕಿಸ್ತಾನವು ಭಾರತಕ್ಕಿಂತ ಹಿಂದುಳಿದಿದೆ.  ಭಾರತ ತನ್ನ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸುತ್ತದೆ.  ಆದರೆ ಪಾಕಿಸ್ತಾನದಲ್ಲಿ ಹಾಗಲ್ಲ ಎಂದಿದ್ದಾರೆ. 

ಇಮ್ರಾನ್  ಹೇಳಿಕೆ ಇದು : 
ರಷ್ಯಾ-ಉಕ್ರೇನ್ ಯುದ್ಧದ ನಂತರ ಅಮೆರಿಕ ರಷ್ಯಾದ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿತ್ತು.  ರಷ್ಯಾದ ತೈಲವನ್ನು ಇತರ ದೇಶಗಳು ಖರೀದಿಸದಿರುವ ಬಗ್ಗೆಯೂ  ಹೇಳಿತ್ತು. ಆದರೆ ಭಾರತ ಅದಕ್ಕೆ ಒಪ್ಪಲಿಲ್ಲ. ಭಾರತವು ರಷ್ಯಾದಿಂದ ಅಗ್ಗದ ಬೆಲೆಗೆ ತೈಲವನ್ನು ಖರೀದಿಸಿತು. ಈ ರೀತಿ ಮಾಡುವ ಮೂಲಕ ಅಮೆರಿಕದ ಮಾತನ್ನು ನಿರ್ಲಕ್ಷಿಸಿದೆ.  ಆದರೂ ಇನ್ನೂ ಎರಡು  ಇನ್ನೂ  ದೇಶಗಳ ನಡುವಿನ ಸಂಬಂಧಗಳು ಉತ್ತಮವಾಗಿವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ : ಭಾರತವನ್ನು ಹೊಗಳಿದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್

ಆ ವಿಡಿಯೋದಲ್ಲಿ ಏನಿದೆ ? :
ಇಮ್ರಾನ್ ಖಾನ್ ಶೇರ್ ಮಾಡಿದ ವಿಡಿಯೋದಲ್ಲಿ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಲ್ಲಿ ದೇಶದ ಹಿತಾಸಕ್ತಿಗಾಗಿ ಈ ಯುದ್ಧದಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಕೇಳಲಾಗುತ್ತದೆ. ಈ ಪ್ರಶ್ನೆಗೆ ಉತ್ತರಿಸಿದ ಜೈ ಶಂಕರ್ 'ರಷ್ಯಾದಿಂದ ಗ್ಯಾಸ್ ಖರೀದಿಸುವುದೆಂದರೆ ಯುದ್ಧದಲ್ಲಿ ಹಣ ಹೂಡಿಕೆ ಮಾಡಿದಂತೆ ಆಗುವುದಿಲ್ಲವೇ ಎಂದು ಉತ್ತರಿಸಿದ್ದಾರೆ. ಕೇವಲ ಭಾರತದ ಹಣ ಮತ್ತು ಭಾರತ ಖರೀದಿಸುವ ತೈಲ ಮಾತ್ರ ಯುದ್ದಕ್ಕೆ ಮಾಡುವ ಫಂಡಿಂಗ್  ಆಗುವುದೇ ಎಂದು ಕೇಳಿದ್ದಾರೆ. ಯುರೋಪ್ ದೇಶಗಳಿಗೆ ಹೋಗುತ್ತಿರುವ ಗ್ಯಾಸ್ ಯುದ್ದಕ್ಕೆ ಫಂಡಿಂಗ್ ಆಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಐರೋಪ್ಯ, ಪಾಶ್ಚಿಮಾತ್ಯ ದೇಶಗಳು ಮತ್ತು ಅಮೆರಿಕಾಗೆ ಉಕ್ರೇನ್ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ , ಇರಾನ್ ಮತ್ತು ವೆನೆಜುವೆಲಾದ ತೈಲವನ್ನು ಮಾರುಕಟ್ಟೆ ಪ್ರವೇಶಿಸಲು ಏಕೆ ಅನುಮತಿಸುವುದಿಲ್ಲ. ನಮ್ಮ ಎಲ್ಲಾ ಇತರ ತೈಲ ಮೂಲಗಳನ್ನು ಮುಚ್ಚಲಾಗಿದೆ. ಇಷ್ಟಾದ ಮೇಲೂ ರಷ್ಯಾದ ಮಾರುಕಟ್ಟೆಯಿಂದ ತೈಲ ಖರೀದಿಸದಂತೆ ಹೇಳಿದರೆ ಹೇಗೆ ಎನ್ನುವುದು ಜೈ ಶಂಕರ್ ಉತ್ತರವಾಗಿತ್ತು. 

ಅಮೆರಿಕದ ಮುಂದೆ ತಲೆಬಾಗಿದ ಪಾಕ್ :  
ಈಗಿನ ಪಾಕಿಸ್ತಾನ ಸರ್ಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಜನರಿಗೆ ಹೇಳಿದ್ದಾರೆ. ಪಾಕ್ ಸಂಪೂರ್ಣವಾಗಿ ಅಮೆರಿಕಕ್ಕೆ ತಲೆಬಾಗಿದೆ. ನಾನು ಅಂತಹ ಗುಲಾಮಗಿರಿಯನ್ನು ವಿರೋಧಿಸುತ್ತೇನೆ ಎಂದಿದ್ದಾರೆ.  ಒಂದು ಕಡೆ ದೇಶವು ಹಣದುಬ್ಬರವನ್ನು ಎದುರಿಸುತ್ತಿದೆ. ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ  ಏರುತ್ತಿದೆ.  ಆದರೂ, ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಅಮೆರಿಕದ ಗುಲಾಮಗಿರಿ ಬಿಟ್ಟು ದೇಶದ ಹಿತದೃಷ್ಟಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದಿ ಇಮ್ರಾನ್ ಖಾನ್ ಹೇಳಿದ್ದಾರೆ.  

ಇದನ್ನೂ ಓದಿ : Egypt Church Fire: ಈಜಿಪ್ಟ್ ನ ಚರ್ಚ್ ನಲ್ಲಿ ಭೀಕರ ಅಗ್ನಿ ಆಕಸ್ಮಿಕ, 41 ಜನರ ದುರ್ಮರಣ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News