Sun Transit 2022: ಈ ವರ್ಷದ ಆಗಸ್ಟ್ 17 ರಂದು ಸಿಂಹ ಸಂಕ್ರಮಣ ಸಂಭವಿಸಲಿದೆ. ಗ್ರಹಗಳ ರಾಜ ಸೂರ್ಯ ಪ್ರತಿವರ್ಷ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಆಗಸ್ಟ್ 17ರಂದು ಬೆಳಗ್ಗೆ 7.14ಕ್ಕೆ ಸೂರ್ಯದೇವ ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ದಿನ ಸೂರ್ಯದೇವನ ಜೊತೆಗೆ ಶ್ರೀವಿಷ್ಣು ಹಾಗೂ ನರಸಿಂಹ ದೇವರ ಪೂಜೆಗೆ ವಿಶೇಷ ಮಹತ್ವವಿದೆ. ಸ್ನಾನ-ದಾನಗಳ ಜೊತೆಗೆ ಈ ದಿನ ತುಪ್ಪ ಸೇವನೆಗೆ ವ್ಶೇಶ ಮಹತ್ವವಿರುತ್ತದೆ.
ಸಿಂಹ ಸಂಕ್ರಾಂತಿಯ ಮಹತ್ವ
ದಕ್ಷಿಣ ಭಾರತದಲ್ಲಿ ಸಿಂಹ ಸಂಕ್ರಾಂತಿಯನ್ನು ವಿಶೇಷ ಪರ್ವದ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಪವಿತ್ರ ನದಿಯಲ್ಲಿ ಮಿಂದೆದ್ದು ಸೂರ್ಯನಿಗೆ ಪೂಜೆ ಸಲ್ಲಿಸಿದರೆ ವ್ಯಕ್ತಿಗೆ ಬಲ, ಯಶಸ್ಸು, ವೈಭವ ಹಾಗೂ ಧನಪ್ರಾಪ್ತಿಯಾಗುತ್ತದೆ. ಸಿಂಹ ಸಂಕ್ರಮಣದ ಅವಧಿಯಲ್ಲಿ ಸಂಪೂರ್ಣ ಶ್ರದ್ಧಾ-ಭಕ್ತಿಯಿಂದ ಶ್ರೀವಿಷ್ಣು ಹಾಗೂ ನರಸಿಂಹ ದೇವರ ಉಪಾಸನೆಯನ್ನು ಕೈಗೊಂಡರೆ, ಪಾಪ ಕರ್ಮಗಳಿಂದ ಮುಕ್ತಿ ಸಿಗುತ್ತದೆ. ಜೊತೆಗೆ ಈ ದಿನ ವಿಧಿವತ್ತಾಗಿ ಸೂರ್ಯದೇವರಿಗೆ ಅರ್ಘ್ಯವನ್ನು ನೀಡಿದರೆ, ಗಂಭೀರ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯೂ ಕೂಡ ಇದೆ. ಸಿಂಹ ಸಂಕ್ರಾಂತಿಯ ದಿನ ಪೂಜೆ, ಪುನಸ್ಕಾರಗಳನ್ನು ಮಾಡುವುದರ ಜೊತೆಗೆ ನಿರ್ಗತಿಕರಿಗೆ ದಾನ ನೀಡುವುದರಿಂದ ಸೂರ್ಯದೇವನ ವಿಶೇಷ ಆಶೀರ್ವಾದ ಲಭಿಸುತ್ತದೆ.
ಸಿಂಹ ಸಂಕ್ರಮಣದ ದಿನ ತುಪ್ಪವನ್ನು ಏಕೆ ಸೇವಿಸುತ್ತಾರೆ?
>> ಸಿಂಹ ಸಂಕ್ರಮಣದ ದಿನ ತುಪ್ಪ ಸೇವನೆಯ ವಿಶೇಷ ಸಂಪ್ರದಾಯವಿದೆ. ಇದೆ ಕಾರಣದಿಂದ ಇದನ್ನು ತುಪ್ಪದ ಸಂಕ್ರಮಣ ಎಂದು ಕೂಡ ಕರೆಯಲಾಗುತ್ತದೆ. ಹಸುವಿನ ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿನ ಹಸುವಿನ ತುಪ್ಪದ ಸೇವನೆಯು ತುಂಬಾ ಲಾಭಕಾರಿ ಎಂದು ಭಾವಿಸಲಾಗುತ್ತದೆ.
>> ಧಾರ್ಮಿಕ ನಂಬಿಕೆಗಳ ಪ್ರಕಾರ ಸಿಂಹ ಸಂಕ್ರಮಣದ ದಿನ ಹಸುವಿನ ತುಪ್ಪ ಸೇವಿಸುವುದರಿಂದ ಜಾತಕದಲ್ಲಿನ ರಾಹು-ಕೇತುಗಳ ಅಶುಭ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು.
ಇದನ್ನೂ ಓದಿ-ಜನ್ಮಾಷ್ಟಮಿ ದಿನದಂದು ರಾಶಿಗನುಗುಣವಾಗಿ ಈ ಕೆಲಸ ಮಾಡಿದರೆ ಜೀವನಪೂರ್ತಿ ಸಂತೋಷವನ್ನೇ ಕರುಣಿಸುತ್ತಾನೆ ಶ್ರೀಕೃಷ್ಣ
>> ಸಿಂಹ ಸಂಕ್ರಮಣದ ದಿನ ಹಸುವಿನ ತುಪ್ಪ ಸೇವಿಸುವುದರಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ, ಶಕ್ತಿ ಹಾಗೂ ಬುದ್ಧಿಯ ವಿಕಾಸವಾಗುತ್ತದೆ. ಈ ದಿನ ತುಪ್ಪವನ್ನು ಸೇವಿಸದೆ ಇರುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಬಸವನ ಹುಳುವಾಗಿ ಜನ್ಮ ತಳೆಯುತ್ತಾನೆ ಎಂಬುದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.