ಅಭಿನಯ ಚಕ್ರವರ್ತಿ ಸುದೀಪ್ ಬರ್ತ್‌ ಡೇ: ಕರುನಾಡ ಚಕ್ರವರ್ತಿ‌ ಶಿವಣ್ಣ ಸಾಥ್..!‌

Written by - Malathesha M | Edited by - Manjunath N | Last Updated : Aug 27, 2022, 03:19 PM IST
  • ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಹಿನ್ನೆಲೆ ಇಂದು ಸಂಜೆ 6ಕ್ಕೆ 'ಸಿಡಿಪಿ' ರಿಲೀಸ್‌ ಆಗಲಿದ್ದು, ಕನ್ನಡಿಗರ ಪಾಲಿನ ಪ್ರೀತಿಯ ನಟ ಶಿವಣ್ಣ ಅವರು 'ಸಿಡಿಪಿ'ಯನ್ನ ರಿಲೀಸ್‌ ಮಾಡಲಿದ್ದಾರೆ.
ಅಭಿನಯ ಚಕ್ರವರ್ತಿ ಸುದೀಪ್ ಬರ್ತ್‌ ಡೇ: ಕರುನಾಡ ಚಕ್ರವರ್ತಿ‌ ಶಿವಣ್ಣ ಸಾಥ್..!‌ title=

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ 'ವಿಕ್ರಾಂತ್‌ ರೋಣ' ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಈಗಾಗಲೇ ಬಾಕ್ಸ್‌ ಆಫಿಸ್‌ನಲ್ಲಿ ₹210 ಕೋಟಿ ಕಲೆಕ್ಷನ್‌ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್‌ ಸೇರಲು ದಾಪುಗಾಲು ಇಡುತ್ತಿದೆ. ಈ ಹೊತ್ತಲ್ಲೇ ಅಭಿಮಾನಿಗಳಿಗೆ ಡಬಲ್‌ ಧಮಾಖ ಸಿಕ್ಕಿದೆ. ಸೆಪ್ಟಂಬರ್‌ 2ರಂದು ಅದ್ಧೂರಿಯಾಗಿ ಕಿಚ್ಚ ಸುದೀಪ್‌ ಅವರ ಬರ್ತ್‌ ಡೇ ಆಚರಿಸಲು ಅಭಿಮಾನಿ ಬಳಗ ಸಜ್ಜಾಗಿದ್ದು, ಸಂಭ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಸಾಥ್‌ ನೀಡಿದ್ದಾರೆ.

ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಹಿನ್ನೆಲೆ ಇಂದು ಸಂಜೆ 6ಕ್ಕೆ 'ಸಿಡಿಪಿ' ರಿಲೀಸ್‌ ಆಗಲಿದ್ದು, ಕನ್ನಡಿಗರ ಪಾಲಿನ ಪ್ರೀತಿಯ ನಟ ಶಿವಣ್ಣ ಅವರು 'ಸಿಡಿಪಿ'ಯನ್ನ ರಿಲೀಸ್‌ ಮಾಡಲಿದ್ದಾರೆ. ಶಿವಣ್ಣ & ಕಿಚ್ಚ ಸುದೀಪ್‌ ಸ್ನೇಹ ತುಂಬಾ ಗಟ್ಟಿ. ಈ ಸ್ನೇಹ ಸಂಬಂಧ ಸದಾ ಹಸಿರಾಗಿರಲಿ ಎಂಬುದೇ ಅಭಿಮಾನಿಗಳ ಆಶಯ. ಹೀಗೆ ಇಬ್ಬರ ನಡುವೆ ಮದುರ ಸ್ನೇಹದ ಜೊತೆಗೆ ಉತ್ತಮ ಒಡನಾಟ ಕೂಡ ಇದೆ. ಈಗ ಕಿಚ್ಚ ಸುದೀಪ್‌ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಶಿವಣ್ಣ ಕೂಡ ಸಾಥ್‌ ನೀಡುತ್ತಿದ್ದಾರೆ.

 'ಸಿಡಿಪಿ' ರಿಲೀಸ್

ಈಗಾಗಲೇ ಕಿಚ್ಚ ಸುದೀಪ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಹಲವು ಗಿಫ್ಟ್‌ ಸಿಕ್ಕಾಗಿದೆ. ಅದರಲ್ಲಿ 'ಸಿಡಿಪಿ' ಸರ್ಪ್ರೈಸ್‌ ಕೂಡ ಒಂದಾಗಿದ್ದು, ಅಭಿನಯ ಚಕ್ರವರ್ತಿಗೆ ಗೌರವ ಸಲ್ಲಿಸಲು ಕೋಟ್ಯಂತರ ಫ್ಯಾನ್ಸ್ ಒಗ್ಗೂಡುತ್ತಿದ್ದಾರೆ.‌ ಈ ಬಾರಿ 'ವಿಕ್ರಾಂತ್‌ ರೋಣ' ಥೀಮ್‌ ಜೊತೆಗೆ ಸುದೀಪ್‌ ಅವರ ಹುಟ್ಟುಹಬ್ಬ ಆಚರಿಸಲು ಕನ್ನಡಿಗರು ಸಜ್ಜಾಗಿದ್ದು, ಕನ್ನಡ ಚಿತ್ರರಂಗದ ಸ್ಟಾರ್ಸ್‌ ಕೂಡ ಈ ಸಂಭ್ರಮಾಚರಣೆಯ ಭಾಗವಾಗುತ್ತಿದ್ದಾರೆ. ಜೊತೆಗೆ ಕಿಚ್ಚ ಸುದೀಪ್‌ ಅವರ ಬಾಲಿವುಡ್‌ ಸ್ನೇಹಿತರು & ಟಾಲಿವುಡ್‌ ಮತ್ತು ಕಾಲಿವುಡ್‌ ಫ್ರೆಂಡ್ಸ್‌ ಕೂಡ ಈ ಸೆಲೆಬ್ರೇಷನ್‌ಗೆ ಸಾಥ್‌ ನೀಡಲಿದ್ದಾರೆ.

ಇದನ್ನೂ ಓದಿ: ಓದೆಲಾ ರೇಲ್ವೇ ಸ್ಟೇಷನ್’ನಲ್ಲಿ ಕನ್ನಡದ ಸಿಂಹ ಘರ್ಜನೆ…ವಸಿಷ್ಠ ಅಭಿನಯಕ್ಕೆ ತೆಲುಗು ಪ್ರೇಕ್ಷಕ ಫಿದಾ

 ZEE5 ಸರ್ಪ್ರೈಸ್

'ವಿಕ್ರಾಂತ್‌ ರೋಣ' ರಿಲೀಸ್‌ ಆಗಿ 1 ತಿಂಗಳು ಕಂಪ್ಲೀಟ್ ಆಗಿದೆ. ಈ ಹೊತ್ತಲ್ಲೇ ಕೋಟಿ ಕೋಟಿ ಕನ್ನಡಿಗರಿಗೆ ಸಿಹಿಸುದ್ದಿ ಸಿಕ್ಕಿದೆ. ಸೆ.2ರ ಶುಕ್ರವಾರ ಕಿಚ್ಚ ಸುದೀಪ್ 49ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಶುಭ ಸಂದರ್ಭದಲ್ಲಿ‌ ZEE5 ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದೆ.‌ ಸೆಪ್ಟೆಂಬರ್ 2ರಿಂದಲೇ ZEE5ನಲ್ಲಿ ‘ವಿಕ್ರಾಂತ್ ರೋಣ’ ಸ್ಟ್ರೀಮಿಂಗ್ ಆಗಲಿದೆ. ಸಾವಿರಾರು ಬಿಗ್ ಸ್ಕ್ರೀನ್‌ನಲ್ಲಿ 3D ‘ವಿಕ್ರಾಂತ್ ರೋಣ’ ಕಣ್ತುಂಬಿಕೊಂಡಿದ್ದ ಅಭಿಮಾನಿಗಳಿಗೆ ಇದೀಗ ಮತ್ತೊಂದು ಗ್ರೇಟ್‌ ನ್ಯೂಸ್‌ ಸಿಕ್ಕಿದೆ. ಇದೇ ಪ್ರೋಮೋದಲ್ಲಿ  'ZEE5' ಸಂಸ್ಥೆ 'ವಿಕ್ರಾಂತ್‌ ರೋಣ' ಗಳಿಸಿರುವ ಒಟ್ಟು ಮೊತ್ತ ಎಷ್ಟೆಂಬ ವಿಚಾರನ್ನು ಸ್ಪಷ್ಟಪಡಿಸಿದೆ.

ಒಟ್ಟಾರೆ ಹೇಳುವುದಾದರೆ ಈ ಬಾರಿ ಕಿಚ್ಚ ಸುದೀಪ್‌ ಅಭಿಮಾನಿ ಬಳಗಕ್ಕೆ ಗಿಫ್ಟ್‌ ಮೇಲೆ ಗಿಫ್ಟ್‌ ಸಿಗುತ್ತಿದೆ. ಒಂದು ಕಡೆ ‘ವಿಕ್ರಾಂತ್ ರೋಣ’ ಸಿನಿಮಾ ಬಿಗ್‌ ಹಿಟ್‌ ಆಗುವುದರ ಜೊತೆ, ಸುದೀಪ್‌ ಅವರ ಮತ್ತಷ್ಟು ಹೊಸ ಸಿನಿಮಾಗಳು  ಸೆಪ್ಟೆಂಬರ್‌ 2ರಂದು ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೋಟಿ ಕೋಟಿ ಫ್ಯಾನ್ಸ್‌ ಈ ಘಳಿಗೆಗಾಗಿ ಕಾಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News