Benefits Of Flowers: ಈ ಹೂವುಗಳು ನೋಡಲು ಸುಂದರವಾಗಿರುವುದು ಮಾತ್ರವಲ್ಲ ಕೆಲವು ರೋಗಗಳಿಗೆ ರಾಮಬಾಣವಾಗಿದೆ.
Benefits Of Flowers: ಸಾಮಾನ್ಯವಾಗಿ ಅಲಂಕಾರ, ಪೂಜೆ ಅಥವಾ ಯಾವುದೇ ಸಮಾರಂಭಗಳಲ್ಲಿ ಹೂವುಗಳನ್ನು ಬಳಸುತ್ತೇವೆ. ಆದರೆ, ಅನೇಕ ಹೂವುಗಳು ಔಷಧೀಯ ಗುಣಗಳಿಂದ ತುಂಬಿರುತ್ತವೆ. ಈ ಗುಣಗಳ ಮೂಲಕ ಅನೇಕ ರೋಗಗಳನ್ನು ಗುಣಪಡಿಸುತ್ತವೆ. ಈ ಹೂವುಗಳು ನೋಡಲು ಸುಂದರವಾಗಿರುವುದು ಮಾತ್ರವಲ್ಲ ಕೆಲವು ರೋಗಗಳಿಗೆ ರಾಮಬಾಣವಾಗಿದೆ. ಅವುಗಳನ್ನು ಸೇವಿಸಿದರೆ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಲ್ಯಾವೆಂಡರ್ ಬಹಳ ಪರಿಮಳಯುಕ್ತ ಹೂವು. ಅದನ್ನು ಸೇವಿಸಿದರೆ, ಸ್ನಾಯುವಿನ ಒತ್ತಡವನ್ನು ತೆಗೆದುಹಾಕಬಹುದು ಮತ್ತು ಸೋಂಕಿನಿಂದ ಕೂಡಾ ಇದು ನಮ್ಮನ್ನು ರಕ್ಷಿಸುತ್ತದೆ. ಈ ಹೂವು ನಮ್ಮ ಕೂದಲಿಣ ಆರೋಗ್ಯಕ್ಕೂ ಪ್ರಯೋಜನಕಾರಿ.
ದಾಸವಾಳದ ಹೂವನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಬಹುದು. ಗರ್ಭಿಣಿಯರಿಗೂ ಇದು ಪ್ರಯೋಜನಕಾರಿಯಾಗಿದೆ. ಈ ಹೂವಿನಲ್ಲಿ ಆಂಟಿ-ಆಕ್ಸಿಡೆಂಟ್ ಗುಣಗಳಿದ್ದು, ಇದರ ಮೂಲಕ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
ಗೊಂಡೆ ಹೂವು ಅಥವಾ ಚೆಂಡು ಹೂವು ಸಾಮಾನ್ಯವಾಗಿ ಚಳಿಗಾಲದಲ್ಲಿ ಬೆಳೆಯುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಗುಲಾಬಿಯಲ್ಲಿ ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳು ಕಂಡುಬರುತ್ತವೆ, ಜೊತೆಗೆ ಇದು ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ. ಇದರ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸದಾ ಪುಷ್ಪಾ ಹೂವುಗಳು ಮಧುಮೇಹ ರೋಗಿಗಳಿಗೆ ವರದಾನವೇ ಸರಿ. ಈ ಹೂವುಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಕಂಡುಬರುತ್ತವೆ. ಈ ಹೂವುಗಳನ್ನು ಒಂದು ಕಪ್ ನೀರಿನಲ್ಲಿ ಕುದಿಸಿ ಫಿಲ್ಟರ್ ಮಾಡಿ, ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವು ನಿಯಂತ್ರಣದಲ್ಲಿರುತ್ತದೆ.