Budh Vakri 2022: 72 ಗಂಟೆಗಳ ನಂತರ ಬದಲಾಗಲಿದೆ ಈ ರಾಶಿಯವರ ಅದೃಷ್ಟ

Budh Vakri 2022: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧ ಗ್ರಹವು ಸೆಪ್ಟೆಂಬರ್ 10 ರಂದು ತನ್ನ ವಕ್ರ ಚಲನೆಯನ್ನು ಆರಂಭಿಸಲಿದೆ. ವಕ್ರಿ ಬುಧನು ಕೆಲವು ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಲವು ಪ್ರಯೋಜನಗಳನ್ನು ನೀಡಲಿದ್ದಾನೆ. ಇನ್ನು 72 ಗಂಟೆಗಳ ನಂತರ ವಕ್ರಿ ಬುಧ ಯಾರಿಗೆ ಅದೃಷ್ಟವನ್ನು ಕರುಣಿಸಲಿದ್ದಾನೆ ಎಂದು ತಿಳಿಯಿರಿ.

Written by - Yashaswini V | Last Updated : Sep 7, 2022, 11:06 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ಮತ್ತು ಕನ್ಯಾ ರಾಶಿಯನ್ನು ಬುಧ ಗ್ರಹ ಆಳುತ್ತದೆ.
  • ಸೆಪ್ಟೆಂಬರ್ 10 ರಂದು ಬುಧ ಗ್ರಹವು ಕನ್ಯಾರಾಶಿಯಲ್ಲಿ ಹಿಮ್ಮೆಟ್ಟಲಿದೆ.
  • ಬುಧನ ಹಿಮ್ಮುಖ ಚಲನೆಯು ಹಲವು ರಾಶಿಯವರಿಗೆ ಅನುಕೂಲಕರವಾಗಿದೆ
Budh Vakri 2022: 72 ಗಂಟೆಗಳ ನಂತರ ಬದಲಾಗಲಿದೆ ಈ ರಾಶಿಯವರ ಅದೃಷ್ಟ  title=
Budh vakri

ವಕ್ರಿ ಬುಧ ಪರಿಣಾಮ: ಪ್ರತಿಯೊಂದು ಗ್ರಹವೂ ಒಂದು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತದೆ ಎಂದು ವೈದಿಕ ಜ್ಯೋತಿಷ್ಯ ತಿಳಿಸುತ್ತದೆ. ಬುಧ ಗ್ರಹವು ಸೆಪ್ಟೆಂಬರ್ 10 ರಂದು ಕನ್ಯಾರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಲಿದೆ. ಬುಧನ ಈ ಬದಲಾವಣೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ವಕ್ರಿ ಬುಧನು ಕೆಲವು ರಾಶಿಯವರಿಗೆ ಈ ಸಮಯದಲ್ಲಿ ವೃತ್ತಿ, ವ್ಯವಹಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಲವು ಪ್ರಯೋಜನಗಳನ್ನು ನೀಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿಯೋಣ...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ಮತ್ತು ಕನ್ಯಾ ರಾಶಿಯನ್ನು ಬುಧ ಗ್ರಹ ಆಳುತ್ತದೆ. ಅಲ್ಲದೆ, ಕನ್ಯಾರಾಶಿಯು ಬುಧದ ಉತ್ಕೃಷ್ಟ ಚಿಹ್ನೆ. ಅಂತಹ ಪರಿಸ್ಥಿತಿಯಲ್ಲಿ, ಈ ರಾಶಿಚಕ್ರದಲ್ಲಿ ಬುಧದ ಹಿಮ್ಮೆಟ್ಟುವಿಕೆಯಿಂದಾಗಿ, ಈ ರಾಶಿಚಕ್ರ ಚಿಹ್ನೆಗಳು ವಿಶೇಷವಾಗಿ ಪ್ರಯೋಜನವನ್ನು ಪಡೆಯುತ್ತವೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- ಬುಧಾದಿತ್ಯ ಯೋಗ: ಸೂರ್ಯ, ಶುಕ್ರ, ಬುಧ ಸಂಕ್ರಮಣದಿಂದ ಯಾರಿಗೆ ಲಾಭ

ಇನ್ನು ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾರೀ ಅದೃಷ್ಟ ಕರುಣಿಸಲಿದ್ದಾನೆ ವಕ್ರಿ ಬುಧ :
ಕನ್ಯಾ ರಾಶಿ:

ಸೆಪ್ಟೆಂಬರ್ 10 ರಂದು ಬುಧ ಗ್ರಹವು ಕನ್ಯಾರಾಶಿಯಲ್ಲಿ ಹಿಮ್ಮೆಟ್ಟಲಿದೆ. ಆದ್ದರಿಂದ, ಈ ರಾಶಿಚಕ್ರದ ಜನರು ಅದರ ವಿಶೇಷ ಪ್ರಯೋಜನಗಳನ್ನು ಪಡೆಯಲಿದ್ದಾರೆ. ವಕ್ರಿ ಬುಧನು ಕನ್ಯಾ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭಾರೀ ಪ್ರಗತಿ ನೀಡಲಿದ್ದಾನೆ. ಈ ಸಂದರ್ಭದಲ್ಲಿ ಅವರು ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರಲಿದ್ದಾರೆ. ಸಮಾಜದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಲಿದೆ. ಬುಸಿನೆಸ್ ಪ್ರವಾಸವು ಈ ಸಮಯದಲ್ಲಿ ಲಾಭದಾಯಕವಾಗಿದೆ. 

ಧನು ರಾಶಿ: 
ಬುಧನ ಹಿಮ್ಮುಖ ಚಲನೆಯ ಈ ಸಂದರ್ಭದಲ್ಲಿ ಧನು ರಾಶಿಯವರಿಗೆ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಂಬಂಧ ಸುಧಾರಿಸಲಿದೆ.  ವ್ಯವಹಾರದಲ್ಲಿ ಯಶಸ್ಸನ್ನು ಪಡೆಯಲು ಉತ್ತಮ ಸಮಯ. ಹಣ ಕೂಡಿಡಲು ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಯಾವುದೇ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.  ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುವುದು. 

ಇದನ್ನೂ ಓದಿ- ರಾಹುವಿನ ಅನುಗ್ರಹದಿಂದ ಇದ್ದಕ್ಕಿದ್ದಂತೆ ಸಿರಿವಂತರಾಗುತ್ತಾರೆ ಈ ದಿನಾಂಕದಲ್ಲಿ ಜನಿಸಿದವರು

ಮಕರ ರಾಶಿ:
ಬುಧನ ಹಿಮ್ಮುಖ ಚಲನೆಯು ಮಕರ ರಾಶಿಯವರಿಗೆ ತುಂಬಾ ಅನುಕೂಲಕರವಾಗಿದೆ. ಎಲ್ಲ ಕೆಲಸಗಳಲ್ಲಿಯೂ ಅದೃಷ್ಟ ಕೈ ಹಿಡಿಯಲಿದ್ದು ಕೌಟುಂಬಿಕ ಸಂತೋಷ ಹೆಚ್ಚಾಗಲಿದೆ. ಹಠಾತ್ ಧನ ಲಾಭ ಸಾಧ್ಯತೆ ಇದ್ದು, ಇಷ್ಟು ದಿನಗಳ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲಿವೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News