ಅನುಪಮ್ ಖೇರ್ ರ 519ನೇ ಚಿತ್ರ ಶಿವ ಶಾಸ್ತ್ರಿ ಬಲ್ಬೋವಾದ ಫಸ್ಟ್ ಲುಕ್ ರಿಲೀಸ್

Anupam Kher : ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯದ ಶಿವ ಶಾಸ್ತ್ರಿ ಬಲ್ಬೋವಾ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

Written by - Chetana Devarmani | Last Updated : Sep 9, 2022, 01:12 PM IST
  • ಬಾಲಿವುಡ್ ನಟ ಅನುಪಮ್ ಖೇರ್
  • ಅನುಪಮ್ ಖೇರ್ ರ 519ನೇ ಚಿತ್ರ
  • ಶಿವ ಶಾಸ್ತ್ರಿ ಬಲ್ಬೋವಾದ ಫಸ್ಟ್ ಲುಕ್ ರಿಲೀಸ್
ಅನುಪಮ್ ಖೇರ್ ರ 519ನೇ ಚಿತ್ರ ಶಿವ ಶಾಸ್ತ್ರಿ ಬಲ್ಬೋವಾದ ಫಸ್ಟ್ ಲುಕ್ ರಿಲೀಸ್  title=
ಅನುಪಮ್ ಖೇರ್

Anupam Kher : ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯದ ಶಿವ ಶಾಸ್ತ್ರಿ ಬಲ್ಬೋವಾ ಎಂಬ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶಿವ ಶಾಸ್ತ್ರಿ ಬಲ್ಬೋವಾ ಸಿನಿಮಾವು "ಅಮೆರಿಕದಲ್ಲಿನ ಒಂದು ಸಣ್ಣ ಪಟ್ಟಣದಲ್ಲಿ ಭಾರತೀಯ ಬದುಕುಳಿಯುವಿಕೆಯ ಆಕರ್ಷಕ ಕಥೆ" ಎಂದು ಬಿಂಬಿಸಲಾಗಿದೆ. ಅನುಪಮ್ ಖೇರ್ ಅವರು ಒಬ್ಬ ಮಹಿಳೆ ಮತ್ತು ನಾಯಿಯೊಂದಿಗೆ ರಸ್ತೆ ಬದಿಯಲ್ಲಿ ನಿಂತು ಲಿಫ್ಟ್ ಗಾಗಿ ನಿಂತಿರುವಂತೆ ಫಸ್ಟ್ ಲುಕ್ ಅನ್ನು ಚಿತ್ರಿಸಲಾಗಿದೆ. 

ಇದನ್ನೂ ಓದಿ: Amala Paul : ಅಮಲಾ ಪೌಲ್‌ 2ನೇ ಮದುವೆ? ಲಿಪ್‌ಲಾಕ್‌ ಫೋಟೋ ವೈರಲ್‌!

 

 

ಖ್ಯಾತ ಭಾರತೀಯ ಅಮೇರಿಕನ್ ನಿರ್ದೇಶಕ ಅಜಯನ್ ವೇಣುಗೋಪಾಲನ್ ಈ ಸಿನಿಮಾ ನಿರ್ದೇಶಿಸುತ್ತಿದ್ದು, ಕಿಶೋರ್ ವರೈತ್ ಮತ್ತು ಯುಎಫ್ ಐ ಮೋಷನ್ ಪಿಕ್ಚರ್ಸ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಈ ಸಿನಿಮಾದಲ್ಲಿ ಅನುಪಮ್ ಖೇರ್ ಹಾಗೂ ನೀನಾ ಗುಪ್ತಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನರ್ಗಿಸ್ ಫಕ್ರಿ ಕೂಡ ಅಭಿನಯಿಸಿದ್ದಾರೆ.  ಇದು  ಅನುಪಮ್ ಖೇರ್ ಅವರ 519ನೇ ಚಿತ್ರ. 

ಇದನ್ನೂ ಓದಿ: All OK New Song: ಸಮುದ್ರದಲೆಗಳ ಮೇಲೆ ಚುಟು ಚುಟು ಚೆಲುವೆ, ಸಿಂಗಾಪುರದಲ್ಲಿ ಕನ್ನಡದ ಕಂಪು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News