ಕಳೆದ ಎರಡು ವಾರಗಳಿಂದ ಕುತೂಹಲಕಾರಿಯಾಗಿ ನಡೆದಿದ್ದ ಏಷ್ಯಾಕಪ್ ಪಂದ್ಯ ಇದೀಗ ಫೈನಲ್ ಹಂತಕ್ಕೆ ಬಂದು ತಲುಪಿದೆ. ಏಷ್ಯಾಕಪ್ ನಿಂದ ಭಾರತ ಔಟ್ ಆಗಿದ್ದು, ಸದ್ಯ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಫೈನಲ್ ನಲ್ಲಿ ಹೋರಾಡಲಿವೆ. ದುಬೈನ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ಅಂದರೆ ಸೆಪ್ಟೆಂಬರ್ 11 ರಂದು ಏಷ್ಯಾ ಕಪ್ 2022 ರ ಫೈನಲ್ ಮ್ಯಾಚ್ ನಡೆಯಲಿದೆ.
ಇದನ್ನೂ ಓದಿ: Virender Sehwag : ತೆಂಡೂಲ್ಕರ್ ಶತಕಗಳ ದಾಖಲೆ ಮುರಿತಾರೆ ಕೊಹ್ಲಿ : ಭವಿಷ್ಯ ನುಡಿದ ಸೆಹ್ವಾಗ್
ಸೆಪ್ಟೆಂಬರ್ 9ರಂದು ನಡೆದ ಪಂದ್ಯಾಟದಲ್ಲಿ ಶ್ರೀಲಂಕಾ ಪಾಕಿಸ್ತಾನವನ್ನು ಐದು ವಿಕೆಟ್ ಗಳಿಂದ ಸೋಲಿಸಿತ್ತು. ಇನ್ನು ನಾಳೆ ನಡೆಯಲಿರುವ ಪಂದ್ಯಾಟದಲ್ಲಿ ಯಾವ ತಂಡ ಗೆಲುವನ್ನು ಸಾಧಿಸಲಿದೆ ಎಂದು ಕಾದು ನೋಡಬೇಕಿದೆ.
ಬ್ಯಾಟಿಂಗ್ ಪವರ್‌ಪ್ಲೇ ಸಮಯದಲ್ಲಿ ಪಾಕಿಸ್ತಾನದ ವೇಗದ ವಿರುದ್ಧ ಶ್ರೀಲಂಕಾದ ಅಗ್ರ ಕ್ರಮಾಂಕವು ಮೂರು ವಿಕೆಟ್ ನಷ್ಟಕ್ಕೆ ಕೇವಲ 29 ರನ್ ಗಳಿಸಿದ್ದವು. ನಿಸ್ಸಾಂಕ ಅವರು 48 ಎಸೆತಗಳಲ್ಲಿ ಅಜೇಯ 55 ರನ್ ಗಳಿಸಿ ಮೂರು ಓವರ್‌ಗಳು ಉಳಿದಿರುವಂತೆಯೇ 5 ವಿಕೆಟ್ ನಷ್ಟಕ್ಕೆ 124 ಕ್ಕೆ ತಲುಪಲು ಸಹಾಯ ಮಾಡಿದರು. ನಂತರ ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು 19.1 ಓವರ್‌ಗಳಲ್ಲಿ 121 ರನ್ ಗಳಿಸಿ ಆಲೌಟ್ ಆಯಿತು.
ಪಾಕಿಸ್ತಾನವು 58 ರನ್‌ಗಳಿಗೆ ತನ್ನ ಅಂತಿಮ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಬಾಬರ್ ಅಜಮ್ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವಿನ ಭರವಸೆಯನ್ನು ನೀಡಿದರು. ಆದರೆ ವಿಫಲವಾಗಿದೆ.
ಪಂದ್ಯದ ವೇಳಾಪಟ್ಟಿ:
ಪಾಕಿಸ್ತಾನ vs ಶ್ರೀಲಂಕಾ (ಏಷ್ಯಾ ಕಪ್ 2022 ಫೈನಲ್)
ದಿನಾಂಕ ಮತ್ತು ಸಮಯ: ಭಾನುವಾರ, ಸೆಪ್ಟೆಂಬರ್ 11 ಸಂಜೆ 7:30 ಕ್ಕೆ (IST)
ಸ್ಥಳ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣ
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್‌ಸ್ಟಾರ್
ಪಾಕಿಸ್ತಾನ-ಶ್ರೀಲಂಕಾ ಸಂಭಾವ್ಯ ಆಟಗಾರರ ಪಟ್ಟಿ:
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್ (ವಿ.ಕೀ), ಬಾಬರ್ ಅಜಮ್ (ಕ್ಯಾ), ಫಖರ್ ಜಮಾನ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಉಸ್ಮಾನ್ ಖಾದಿರ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ಹಸನ್ ಅಲಿ
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿ.ಕೀ), ಧನಂಜಯ ಡಿ ಸಿಲ್ವಾ, ದನುಷ್ಕ ಗುಣತಿಲಕ, ಭಾನುಕಾ ರಾಜಪಕ್ಸೆ, ದಸುನ್ ಶನಕ (ಕ್ಯಾ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಪ್ರಮೋದ್ ಮಧುಶನ್, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ
ಪಿಚ್ ವರದಿ:
ದುಬೈ ಕ್ರಿಕೆಟ್ ಸ್ಟೇಡಿಯಂನ ಪಿಚ್ ನಲ್ಲಿ ಸುಮಾರು 160-170 ರ ಸರಾಸರಿಯಲ್ಲಿ ಪಂದ್ಯಗಳು ನಡೆಯುತ್ತವೆ. ಇನ್ನು ಈ ಪಿಚ್ ಆಕ್ರಮಣಕಾರಿ ಬ್ಯಾಟಿಂಗ್‌ಗೆ ನಿಖರವಾಗಿ ಸೂಕ್ತವಲ್ಲ. ಇಲ್ಲಿ ಸಣ್ಣ, ನೇರ ಬೌಂಡರಿಗಳಿಂದ ಬ್ಯಾಟರ್‌ಗಳು ಪ್ರಯೋಜನ ಪಡೆಯುತ್ತಾರೆ. ಕೆಲವು ಚಲನೆ ಮತ್ತು ಹೆಚ್ಚಿನ ಬೌನ್ಸ್ ಗಳನ್ನು ಇಲ್ಲಿ ನಿರೀಕ್ಷಿಸಬಹುದು. ಸ್ಪಿನ್ನರ್‌ಗಳಿಗೆ ಈ ಪಿಚ್ ನಲ್ಲಿ ಕಡಿಮೆ ಬೆಂಬಲವಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.