ನವದೆಹಲಿ: ಮುಂಬರುವ T20 ವಿಶ್ವಕಪ್ ಮತ್ತು ODI ವಿಶ್ವಕಪ್ನೊಂದಿಗೆ ಟೀಂ ಇಂಡಿಯಾ ಬಲಿಷ್ಠವಾಗಬೇಕಿದೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಪ್ರಸ್ತುತ ಸಮಯವು ತುಂಬಾ ಕಠಿಣವಾಗಿದೆ ಎಂದು ಭಾರತದ ಮಾಜಿ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಮತ್ತು ಹಿರಿಯ ಆಯ್ಕೆ ಸಮಿತಿಯ ಮಾಜಿ ಸದಸ್ಯ ಸಬಾ ಕರೀಮ್ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಭಾರತ ತಂಡ ಏಷ್ಯಾಕಪ್ನಿಂದ ನಿರ್ಗಮಿಸಬೇಕಾಯಿತು.
ದ್ರಾವಿಡ್ ಬಗ್ಗೆ ಸಬಾ ಕರೀಮ್ ಹೇಳಿದ್ದೇನು..?
ಭಾರತ ಏಷ್ಯಾಕಪ್ನಿಂದ ಹೊರಬಿದ್ದ ತಕ್ಷಣ ರಾಹುಲ್ ದ್ರಾವಿಡ್ ಅವರನ್ನು ಗುರಿಯಾಗಿಸಿ ಭಾರತದ ಮಾಜಿ ಆಯ್ಕೆಗಾರ ಸಬಾ ಕರೀಮ್ ವಾಗ್ದಾಳಿ ನಡೆಸಿದ್ದಾರೆ. ‘ದ್ರಾವಿಡ್ಗೆ ಸಮಯವು ಕಷ್ಟಕರವಾಗಿರುತ್ತದೆ ಎಂದು ತಿಳಿದಿದ್ದರೂ ತಮ್ಮ ಸಿದ್ಧತೆಗಳಲ್ಲಿ ನಿರತರಾಗಿದ್ದಾರೆ. ಆದರೆ ಇದುವರೆಗೆ ಉತ್ತಮ ತಂಡವನ್ನು ನಿರ್ಮಿಸಲು ಅವರಿಗೆ ಸಾಧ್ಯವಾಗಿಲ್ಲ. ಹಾಗಾಗಿ ದ್ರಾವಿಡ್ಗೆ ಇದು ಬಿಕ್ಕಟ್ಟಿನ ಕಾಲ. ಹೀಗಾಗಿ ದ್ರಾವಿಡ್ಗೆ ಹನಿಮೂನ್ ಅವಧಿ ಮುಗಿದಿದೆ’ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: The KING IS BACK: ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ‘ವೀರ’ನಿಗೆ ಪ್ರಶಂಸೆಗಳ ಮಹಾಪೂರ
ಟಿ-20 ವಿಶ್ವಕಪ್ ಬಗ್ಗೆ ಕರೀಮ್ ಸಲಹೆ
ಮುಂದಿನ ವರ್ಷ ಟಿ-20 ವಿಶ್ವಕಪ್ ಜೊತೆಗೆ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ. ಈ 2 ದೊಡ್ಡ ಐಸಿಸಿ ಈವೆಂಟ್ಗಳಲ್ಲಿ ಭಾರತ ಗೆಲ್ಲಲು ಸಾಧ್ಯವಾದರೆ ಮಾತ್ರ ಟೀಂ ಇಂಡಿಯಾಕ್ಕೆ ನೀಡಿದ ಇನ್ಪುಟ್ಗಳಿಂದ ರಾಹುಲ್ ದ್ರಾವಿಡ್ ಮಾತ್ರ ತೃಪ್ತರಾಗುತ್ತಾರೆ. ಈ ನಿಟ್ಟಿನಲ್ಲಿ ನಾವು ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಈ ವರ್ಷದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನ ಮತ್ತು ದ್ರಾವಿಡ್ ಅವರ ತರಬೇತಿಯಡಿ ಅಸ್ಥಿರ ಫಲಿತಾಂಶಗಳ’ ಬಗ್ಗೆಯೂ ಹೇಳಿದ್ದಾರೆ.
ದೊಡ್ಡ ಸವಾಲುಗಳಿವೆ
ಸದ್ಯ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಎದುರು ದೊಡ್ಡ ಸವಾಲುಗಳಿಗೆ. ಈ ಸವಾಲುಗಳನ್ನು ಹೇಗೆ ಎದುರಿಸಬೇಕು ಅನ್ನೋದರ ಬಗ್ಗೆ ಯೋಚಿಸಬೇಕಾಗಿದೆ. ಏಷ್ಯಾಕಪ್ ಗೆಲ್ಲುವ ನೆಚ್ಚಿನ ತಂಡವೆನಿಸಿಕೊಂಡಿದ್ದ ಟೀಂ ಇಂಡಿಯಾ ಸತತ 2 ಸೋಲು ಕಾಣಲು ಕಾರಣವೇನು? ಅನ್ನೋದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಅಂತಾ ಸಬಾ ಕರೀಮ್ ಹೇಳಿದ್ದಾರೆ.
ಇದನ್ನೂ ಓದಿ: Asia Cup 2022: ಏಷ್ಯಾಕಪ್ ನಿಂದ ಔಟಾದ ಭಾರತ: ಕೋಚ್ ದ್ರಾವಿಡ್ ತಂಡದ ಬಗ್ಗೆ ಏನಂದ್ರು ಗೊತ್ತಾ?
ಏಷ್ಯಾಕಪ್ನಲ್ಲಿ ಟೀಂ ಇಂಡಿಯಾಗೆ ಮುಖಭಂಗ
ಏಷ್ಯಾಕಪ್ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಭಾರತ ತಂಡ ಮುಖಭಂಗ ಅನುಭವಿಸಿದೆ. ಈ ಕಾರಣಕ್ಕೆ ಟೀಂ ಇಂಡಿಯಾ ಏಷ್ಯಾಕಪ್ನಿಂದ ಹೊರಬೀಳಬೇಕಾಯಿತು. ಏಷ್ಯಾಕಪ್ನಲ್ಲಿ ಭಾರತ ತಂಡದ ಬೌಲರ್ಗಳು ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದು, ಇದರಿಂದ ತಂಡವು ಸೋಲು ಎದುರಿಸಬೇಕಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.