Video : ಈ ಗೋವಾ ಕಾಂಗ್ರೆಸ್ ನಾಯಕ ದೇವರು - ದೇವತೆಗಳನ್ನು ಕೇಳಿ ಬಿಜೆಪಿ ಸೇರಿದ್ದಾನಂತೆ!

ಇದೀಗ ದಿಗಂಬರ್ ಕಾಮತ್ ಅವರು, ನಾನು ಬಿಜೆಪಿ ಸೇರಲು ದೇವರಲ್ಲಿ ಕೇಳಿ ಸೇರಿದ್ದೇನೆ ಎಂದು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಸುದ್ದಿ ಸಧ್ಯ ಸೂಚಿಲಾಮ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

Written by - Channabasava A Kashinakunti | Last Updated : Sep 15, 2022, 12:30 PM IST
  • ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್
  • ದಿಗಂಬರ್ ಕಾಮತ್ ಸೇರಿದಂತೆ 8 ಕಾಂಗ್ರೆಸ್ ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆ
  • ವಿಪಕ್ಷ ಸ್ಥಾನಕ್ಕೆ ಶಾಸಕರು ಯೋಗ್ಯರಲ್ಲ
Video : ಈ ಗೋವಾ ಕಾಂಗ್ರೆಸ್ ನಾಯಕ ದೇವರು - ದೇವತೆಗಳನ್ನು ಕೇಳಿ ಬಿಜೆಪಿ ಸೇರಿದ್ದಾನಂತೆ! title=

Goa Politics : ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಸೇರಿದಂತೆ ಎಂಟು ಕಾಂಗ್ರೆಸ್ ಶಾಸಕರು ಬುಧವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಹಿನ್ನಡೆ ಎಂದೇ ಪರಿಗಣಿಸಲಾಗಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಬಲ ಮೂರಕ್ಕೆ ಇಳಿದಿದೆ. ಬಿಜೆಪಿಗೆ ಸೇರ್ಪಡೆಗೊಂಡ ನಾಯಕರಲ್ಲಿ ಪ್ರಸ್ತುತ ವಿರೋಧ ಪಕ್ಷದ ನಾಯಕ ಮೈಕಲ್ ಲೋಬೋ ಕೂಡ ಸೇರಿದ್ದಾರೆ. ಇದೀಗ ದಿಗಂಬರ್ ಕಾಮತ್ ಅವರು, ನಾನು ಬಿಜೆಪಿ ಸೇರಲು ದೇವರಲ್ಲಿ ಕೇಳಿ ಸೇರಿದ್ದೇನೆ ಎಂದು ಕಾರಣವನ್ನು ಬಹಿರಂಗಪಡಿಸಿದ್ದಾರೆ. ಈ ಸುದ್ದಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಸುದ್ದಿ ಸಂಸ್ಥೆ ಎಎನ್‌ಐ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಮಾತನಾಡಿದ ಬಿಜೆಪಿ ಸೇರಿದ ಮಾಜಿ ಕಾಂಗ್ರೆಸ್ ಶಾಸಕ ದಿಗಂಬರ್ ಕಾಮತ್, ನಾನು ದೇವಸ್ಥಾನಕ್ಕೆ ಹೋದೆ, ಇದು (ಬಿಜೆಪಿ ಸೇರುವುದು) ನನ್ನ ಮನಸ್ಸಿನಲ್ಲಿದೆ, ನಾನು ಏನು ಮಾಡಬೇಕು ಎಂದು ದೇವರು ಮತ್ತು ದೇವತೆಗಳನ್ನು ಕೇಳಿದೆ ... ದೇವರು ಹೇಳಿದರು, ನೀವು ಮುಂದುವರಿಯಿರಿ, ಚಿಂತಿಸಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಉತ್ತರ ಭಾರತದಿಂದ ದಕ್ಷಿಣ ಭಾರತದವರೆಗಿನ ಹಲವು ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ

ಮಂದಿರ-ಮಸೀದಿಯಲ್ಲಿ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಿದ್ದ ಕಾಂಗ್ರೆಸ್ ನಾಯಕರು

ಕುತೂಹಲಕಾರಿ ವಿಚಾರವೆಂದರೆ, ಚುನಾವಣೆಗೆ ಮುಂಚಿತವಾಗಿ, ಗೋವಾ ಕಾಂಗ್ರೆಸ್ ನಾಯಕರು ದೇವಸ್ಥಾನಗಳು, ಮಸೀದಿಗಳು ಮತ್ತು ಚರ್ಚ್‌ಗಳಲ್ಲಿ ಪಕ್ಷಕ್ಕೆ ನಿಷ್ಠರಾಗಿರಲು ಪ್ರತಿಜ್ಞೆ ಮಾಡಿದ್ದರು. ಆದರೆ 7 ತಿಂಗಳೊಳಗೆ 11 ಕಾಂಗ್ರೆಸ್ ಶಾಸಕರ ಪೈಕಿ 8 ಮಂದಿ ಬಿಜೆಪಿ ಸೇರಿದ್ದಾರೆ. ಇನ್ನು ಬಿಜೆಪಿ ಸೇರುವ ಬಗ್ಗೆ ದಿಗಂಬರ ಕಾಮತ್ ಅವರು ಬಿಜೆಪಿ ಸೇರುವ ಮುನ್ನ ದೇವರಲ್ಲಿ ಕೇಳಿದ್ದೆ ಎಂದು ಹೇಳಿದ್ದು ಹೌದು ಎಂದಿದ್ದಾರೆ.

ನನಗೆ ದೇವರ ಮೇಲೆ ನಂಬಿಕೆ ಇದೆ, ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಚುನಾವಣೆಗೂ ಮುನ್ನ ಪ್ರಮಾಣ ವಚನ ಸ್ವೀಕರಿಸಿದ್ದಂತೂ ಸತ್ಯ ಎಂದು ಗೋವಾ ಮಾಜಿ ಸಿಎಂ ಹೇಳಿದ್ದಾರೆ. 2019ರಲ್ಲೂ ಕಾಂಗ್ರೆಸ್ ಶಾಸಕರು ಪಕ್ಷ ಬದಲಾಯಿಸಿದ್ದರು. ಈ ಕಾರಣಕ್ಕಾಗಿಯೇ ಗೋವಾ ಚುನಾವಣೆಗೂ ಮುನ್ನ ಕಾಂಗ್ರೆಸ್ ತನ್ನ ಶಾಸಕರಿಗೆ ಪ್ರಮಾಣ ವಚನ ನೀಡಿತ್ತು.

ವಿಪಕ್ಷ ಸ್ಥಾನಕ್ಕೆ ಶಾಸಕರು ಯೋಗ್ಯರಲ್ಲ

ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ ಮೂರಕ್ಕೆ ಇಳಿದ ನಂತರ ಈಗ ಯಾವ ರಾಜಕೀಯ ಪಕ್ಷಕ್ಕೂ ಪ್ರತಿಪಕ್ಷದ ಸ್ಥಾನ ಪಡೆಯುವ ಅರ್ಹ ಶಾಸಕರಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವ ಕಾಂಗ್ರೆಸ್ ಶಾಸಕರ ಪ್ರಸ್ತಾವನೆಯನ್ನು ಅವರು ಅನುಮೋದಿಸಿದ್ದಾರೆ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ತಾವಕರ್ ಹೇಳಿದ್ದಾರೆ.

40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಪಕ್ಷವೊಂದು ಕನಿಷ್ಠ ನಾಲ್ವರು ಶಾಸಕರನ್ನು ಹೊಂದಿರಬೇಕು. ಆಮ್ ಆದ್ಮಿ ಪಕ್ಷವು ಇಬ್ಬರು ಶಾಸಕರನ್ನು ಹೊಂದಿದ್ದರೆ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ರೆವಲ್ಯೂಷನರಿ ಗೋವಾ ಪಕ್ಷವು ತಲಾ ಒಬ್ಬ ಶಾಸಕರನ್ನು ಹೊಂದಿದೆ.

ಮತ್ತೊಂದೆಡೆ, ಗೋವಾದಲ್ಲಿ ಕಾಂಗ್ರೆಸ್ ತನ್ನ ಎಂಟು ಶಾಸಕರು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡ ನಂತರ ಬಿಜೆಪಿ 'ಭಾರತ್ ಜೋಡೋ ಯಾತ್ರೆ'ಯ ಯಶಸ್ಸಿನಿಂದ ಹತಾಶವಾಗಿದೆ ಎಂದು ಆರೋಪಿಸಿದೆ ಮತ್ತು ಈ ಯಾತ್ರೆಯಿಂದ ಗಮನವನ್ನು ಬೇರೆಡೆ ಸೆಳೆಯಲು 'ಆಪರೇಷನ್ ಮಡ್' ಅನ್ನು ಪ್ರಾರಂಭಿಸಲಾಗಿದೆ. ಬಿಜೆಪಿಯ ಈ ಕ್ಷುಲ್ಲಕ ತಂತ್ರಗಳನ್ನು ಕಾಂಗ್ರೆಸ್ ಜಯಿಸಲು ಸಾಧ್ಯವಾಗುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.

ಇದನ್ನೂ ಓದಿ : video : ಹುಡುಗಿಯನ್ನು ಇಂಪ್ರೆಸ್ ಮಾಡಲು ಹುಡುಗ ಮಾಡಿಬಿಟ್ಟನಾ ಈ ಕೆಲಸ

ಕಾಂಗ್ರೆಸ್ ತೊರೆದಿದ ಶಾಸಕರ ಲಿಸ್ಟ್ 

ದಿಗಂಬರ್ ಕಾಮತ್, ಮೈಕೆಲ್ ಲೋಬೋ, ದೇಲಿಲಾ ಲೋಬೋ, ರಾಜೇಶ್ ಫಲ್ದೇಸಾಯಿ, ಕೇದಾರ್ ನಾಯ್ಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸಿಯೋ ಸಿಕ್ವೇರಾ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಕಾಂಗ್ರೆಸ್ ತೊರೆದ ಎಂಟು ಶಾಸಕರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News