ಬೆಂಗಳೂರು: ಕ್ರೆಡಿಟ್ ಸ್ಕೋರ್ ವ್ಯಕ್ತಿಯ ಕ್ರೆಡಿಟ್ ಇತಿಹಾಸವನ್ನು ಸೂಚಿಸುತ್ತದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ನೀವು ಬ್ಯಾಂಕ್ ಸಾಲ ಪಡೆಯುವುದು ಸಹ ಸುಲಭವಾಗುತ್ತದೆ. ಕ್ರೆಡಿಟ್ ಸ್ಕೋರ್ ಕೆಟ್ಟದಾಗಿದ್ದರೆ, ಸಾಲ ಪಡೆಯಲು ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಗ್ರಾಹಕರ ಉತ್ತಮ ಕ್ರೆಡಿಟ್ ಸ್ಕೋರ್ ಸಾಲದಾತನಿಗೆ ಅವನ ಹಣ ಮುಳುಗುವುದಿಲ್ಲ ಎಂದು ಭರವಸೆ ನೀಡುತ್ತದೆ. ಈ ಸಂದರ್ಭದಲ್ಲಿ ಸಾಲವು ಸುಲಭವಾಗಿ ಅನುಮೋದನೆ ಪಡೆಯುತ್ತದೆ. ಆದಾಗ್ಯೂ, ಸಿಬಿಲ್ ಸ್ಕೋರ್ ಆಧಾರದ ಮೇಲೆ ಮಾತ್ರವೇ ಸಾಲವನ್ನು ಅನುಮೋದಿಸಲಾಗುತ್ತದೆ ಎಂಬುದು ಇದರ ಅರ್ಥವಲ್ಲ.
ವಾಸ್ತವವಾಗಿ, ನಿಮ್ಮ ಸಿಬಿಲ್ ಸ್ಕೋರ್ ಸಾಲದ ಅನುಮೋದನೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು 300 ರಿಂದ 900 ರ ನಡುವೆ ನಿಗದಿಪಡಿಸಲಾಗಿದೆ. ಸಾಮಾನ್ಯವಾಗಿ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕಾಟ್ ಅನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ- ರೇಷನ್ ಕಾರ್ಡ್ ಬಿಗ್ ಅಪ್ಡೇಟ್: 2.4 ಕೋಟಿ ಪಡಿತರ ಚೀಟಿ ರದ್ದು!
ನೀವೂ ಸಹ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿರಬೇಕು ಎಂದು ಬಯಸಿದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಪ್ರಯೋಜನಗಳೇನು ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ.
ಈ 4 ಅಂಶಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತವೆ:
* ಸ್ಟೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಅನಿಲ್ ಕುಮಾರ್ ಮಿಶ್ರಾ ಅವರ ಪ್ರಕಾರ, ನೀವು ಸಾಲ ಅಥವಾ ಕ್ರೆಡಿಟ್ ಕಾರ್ಡ್‌ನಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯದಲ್ಲಿ ಪಾವತಿಸಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನೀವು ಲೋನ್ ತೆಗೆದುಕೊಂಡ ನಂತರ ಸಮಯಕ್ಕೆ ಸರಿಯಾಗಿ ಇಎಂಐಗಳನ್ನು ಪಾವತಿಸಿದರೆ ಮತ್ತು ಲೋನನ್ನು ಪೂರ್ಣವಾಗಿ ಮರುಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ.
* ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಒಟ್ಟು ಕ್ರೆಡಿಟ್ ಮಿತಿಯಲ್ಲಿ ನೀವು ಬಳಸುವ ಶೇಕಡಾವಾರು ಮೊತ್ತವನ್ನು ಕ್ರೆಡಿಟ್ ಬಳಕೆ ಎಂದು ಕರೆಯಲಾಗುತ್ತದೆ. ಕ್ರೆಡಿಟ್ ಬಳಕೆಯ ಅನುಪಾತವು 30% ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಇದು ನಿಮ್ಮ ಕ್ರೆಡಿಟ್ ಮೇಲಿನ ಅವಲಂಬನೆಯು ತುಂಬಾ ಹೆಚ್ಚಿಲ್ಲ ಎಂಬ ಸಂದೇಶವನ್ನು ಕಳುಹಿಸುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮಗೊಳ್ಳುತ್ತದೆ.
* ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವೆಂದರೆ ಕ್ರೆಡಿಟ್ ಮಿಕ್ಸ್ ಅಂದರೆ ನೀವು ಎಷ್ಟು ಸುರಕ್ಷಿತ (ಕಾರ್ ಲೋನ್, ಹೋಮ್ ಲೋನ್, ಚಿನ್ನದ ಸಾಲ) ಮತ್ತು ಅಸುರಕ್ಷಿತ ಸಾಲಗಳನ್ನು (ವೈಯಕ್ತಿಕ ಸಾಲ, ಕ್ರೆಡಿಟ್ ಕಾರ್ಡ್) ಹೊಂದಿರುವಿರಿ. ಇವೆಲ್ಲದರ ಅನುಪಾತವನ್ನು ಕ್ರೆಡಿಟ್ ಮಿಕ್ಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ, ಎರಡಕ್ಕಿಂತ ಹೆಚ್ಚು ಅಸುರಕ್ಷಿತ ಸಾಲಗಳನ್ನು ತೆಗೆದುಕೊಳ್ಳಬಾರದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹದಗೆಡಿಸುತ್ತದೆ.
* ನಿಮ್ಮ ಮೊದಲ ಕ್ರೆಡಿಟ್ (ಕ್ರೆಡಿಟ್ ಕಾರ್ಡ್ ಅಥವಾ ಸಾಲ) ದಿನಾಂಕದಿಂದ ಕ್ರೆಡಿಟ್ ವಯಸ್ಸನ್ನು ಎಣಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ವಯಸ್ಸು ಹೆಚ್ಚಾದಷ್ಟೂ ನಿಮ್ಮ ವಿಶ್ವಾಸಾರ್ಹತೆ ಹೆಚ್ಚುತ್ತದೆ ಮತ್ತು ಅದು ನಿಮ್ಮ ಸ್ಕೋರ್‌ಗೆ ಉತ್ತಮವಾಗಿರುತ್ತದೆ. ಸಾಮಾನ್ಯವಾಗಿ, ಕ್ರೆಡಿಟ್ ಖಾತೆಗಳು 3 ವರ್ಷ ಅಥವಾ ಅದಕ್ಕಿಂತ ಹೆಚ್ಚು ಹಳೆಯದಿದ್ದರೆ ಅವರಿಗೆ ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ- Debit-Credit ಕಾರ್ಡ್ ಗಮನಕ್ಕೆ : ಅ.1 ರಿಂದ ಬದಲಾಗಲಿವೆ ಈ ನಿಯಮಗಳು
ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವ ಪ್ರಯೋಜನಗಳು:-
>> ಸಾಲ ಪಡೆಯುವುದು ಸುಲಭವಾಗುತ್ತದೆ.
>> ಕೈಗೆಟುಕುವ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.
>> ದೀರ್ಘಾವಧಿಯವರೆಗೆ ಸಾಲವನ್ನು ಪಡೆಯಬಹುದು.
>> ನಿಮ್ಮ ಸಾಲದ ವಿನಂತಿಯನ್ನು ಶೀಘ್ರದಲ್ಲೇ ಅನುಮೋದಿಸಬಹುದು.
>> ಲೋನ್ ಪ್ರೊಸೆಸಿಂಗ್ ಶುಲ್ಕಗಳು ಮತ್ತು ಇತರ ಶುಲ್ಕಗಳಲ್ಲಿ ನೀವು ರಿಯಾಯಿತಿಯನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.