/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಆಧಾರ್ ಕಾರ್ಡ್:  ಭಾರತದಲ್ಲಿ ಬ್ಯಾಂಕ್‌ನಲ್ಲಿ ಖಾತೆ ತೆರೆಯುವುದರಿಂದ ಹಿಡಿದು ಮೊಬೈಲ್ ಸಿಮ್ ಕಾರ್ಡ್ ಪಡೆಯುವವರೆಗೆ ವಿವಿಧ ರೀತಿಯ ಸರ್ಕಾರಿ ಸಬ್ಸಿಡಿ ಪ್ರಯೋಜನಗಳಿಗಾಗಿ  ಇಂದು ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆ ಆಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಬ್ಯಾಂಕ್ ಖಾತೆಗಳು, ಪ್ಯಾನ್ ಕಾರ್ಡ್‌ಗಳು ಸೇರಿದಂತೆ ಇತರ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರ ಒತ್ತು ನೀಡಿದೆ. ಈ ಮಧ್ಯೆ, ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಎಂಬ ವೈರಲ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ವಾಸ್ತವವಾಗಿ, ಯುಐಡಿಎಐ ಬ್ಯಾಂಕ್ ಖಾತೆಗಳು ಮತ್ತು ಪ್ಯಾನ್ ನೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಮೂಲಕ ನಮ್ಮ ಹಣಕಾಸಿನ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತದೆ ಎಂಬ ಸುದ್ದಿ ವೇಗವಾಗಿ ಹರಿದಾಡುತ್ತಿದೆ. ಈ ಕುರಿತು ಟ್ವೀಟ್ ಮೂಲಕ ಯುಐಡಿಎಐ  ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ- Traffic Rules: ನಿಮ್ಮ ವಾಹನದ ಕೀ ತೆಗೆಯುವ ಅಧಿಕಾರ ಟ್ರಾಫಿಕ್ ಪೊಲೀಸರಿಗಿದೆಯೇ? ಈ 5 ನಿಯಮಗಳು ನಿಮಗೂ ತಿಳಿದಿರಲಿ

ನಾವು (ಯುಐಡಿಎಐ) ಆಧಾರ್ ಕಾರ್ಡ್ ಹೊಂದಿರುವವರ ಹೆಸರು, ವಿಳಾಸ, ಲಿಂಗ, ಜನ್ಮ ದಿನಾಂಕ, ಬೆರಳಚ್ಚುಗಳು, ಐರಿಸ್ ಸ್ಕ್ಯಾನ್ ಮತ್ತು ಮುಖದ ಭಾವಚಿತ್ರವನ್ನು ಹೊಂದಿದ್ದೇವೆ. ಆದರೆ, ಯುಐಡಿಎಐ ಎಂದಿಗೂ ನಿವಾಸಿಗಳ ಯಾವುದೇ ಹಣಕಾಸಿನ ಮಾಹಿತಿ ಅಥವಾ ಡೇಟಾವನ್ನು ಹೊಂದಿರುವುದಿಲ್ಲ ಎಂದು ಯುಐಡಿಎಐ ಟ್ವೀಟ್‌ನಲ್ಲಿ ಸ್ಪಷ್ಟಪಡಿಸಿದೆ. 

ಯುಐಡಿಎಐ ಯಾವುದೇ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವುದಿಲ್ಲ:
ಹಣಕಾಸಿನ ಮಾಹಿತಿ ಮಾತ್ರವಲ್ಲ, ಯುಐಡಿಎಐ ಅಧಾರ್ ಬಳಕೆದಾರರ ಯಾವುದೇ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡುವುದಿಲ್ಲ ಎಂದು ಅದು ಹೇಳಿದೆ. 

ಇದನ್ನೂ ಓದಿ- ಸರ್ಕಾರದ ಹೊಸ ಪ್ಲಾನ್: ಪೆಟ್ರೋಲ್-ಡೀಸೆಲ್‌ನಿಂದ ಎಲ್‌ಪಿಜಿ ಸಿಲಿಂಡರ್‌ಗಳವರೆಗೆ ಎಲ್ಲವೂ ಅಗ್ಗ!

ಆಧಾರ್ ಕಾರ್ಡ್ ಕುರಿತಂತೆ ಯಾವುದೇ ದೂರುಗಳಿದ್ದರೆ ಅಥವಾ ಏನಾದರೂ ಪ್ರಶ್ನೆಗಳಿದ್ದರೆ ಏನು ಮಾಡಬೇಕು?
ಆಧಾರ್‌ಗೆ ಸಂಬಂಧಿಸಿದ ಯಾವುದೇ ದೂರುಗಳು ಅಥವಾ ಪ್ರಶ್ನೆಗಳನ್ನು ನೋಂದಾಯಿಸಲು, ನೀವು 1947 ಗೆ ಕರೆ ಮಾಡಬಹುದು, ಈ ಸಂಖ್ಯೆಯು ಟೋಲ್ ಫ್ರೀ ಸಂಖ್ಯೆಯಾಗಿದೆ. ಇದಲ್ಲದೆ, ನಿಮ್ಮ ಪ್ರಶ್ನೆಗಳು ಅಥವಾ ದೂರುಗಳಿಗಾಗಿ ನೀವು help@uidai.gov.in ಗೆ ಇಮೇಲ್ ಮಾಡಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Does UIDAI track financial transactions of Aadhaar card holders
News Source: 
Home Title: 

ಆಧಾರ್ ಕಾರ್ಡ್ ಹೊಂದಿರುವವರ ಆರ್ಥಿಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತಾ UIDAI?

ಆಧಾರ್ ಕಾರ್ಡ್ ಹೊಂದಿರುವವರ ಆರ್ಥಿಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತಾ UIDAI?
Caption: 
Aadhaar Latest News
Yes
Is Blog?: 
No
Tags: 
Facebook Instant Article: 
Yes
Highlights: 

ಕಳೆದ ಕೆಲವು ವರ್ಷಗಳಲ್ಲಿ, ಬ್ಯಾಂಕ್ ಖಾತೆಗಳು, ಪ್ಯಾನ್ ಕಾರ್ಡ್‌ಗಳು ಸೇರಿದಂತೆ ಇತರ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಲಿಂಕ್ ಮಾಡಲು ಸರ್ಕಾರ ಒತ್ತು ನೀಡಿದೆ. 
 
ಈ ಮಧ್ಯೆ, ಯುಐಡಿಎಐ ಆಧಾರ್ ಕಾರ್ಡ್ ಹೊಂದಿರುವವರ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್ ಮಾಡುತ್ತದೆ ಎಂಬ ವೈರಲ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 
 
ಆದರಿದು ಸತ್ಯವೇ? ಈ ಬಗ್ಗೆ ಯುಐಡಿಎಐ ಏನು ಹೇಳಿದೆ ಎಂದು ತಿಳಿಯಿರಿ.

Mobile Title: 
ಆಧಾರ್ ಕಾರ್ಡ್ ಹೊಂದಿರುವವರ ಆರ್ಥಿಕ ಚಟುವಟಿಕೆಯನ್ನು ಟ್ರ್ಯಾಕ್ ಮಾಡುತ್ತಾ UIDAI?
Yashaswini V
Publish Later: 
No
Publish At: 
Wednesday, September 14, 2022 - 13:01
Created By: 
Yashaswini V
Updated By: 
Yashaswini V
Published By: 
Yashaswini V
Request Count: 
2
Is Breaking News: 
No