Project Cheetah: ಚಿರತೆಯ ಜೊತೆಗಿನ ಫೋಟೋ ಹಂಚಿಕೊಂಡು, ಪ್ರಧಾನಿ ಮೋದಿ ಕಾಲೆಳೆದ ಕಾಂಗ್ರೆಸ್ ಮುಖಂಡ

Project Cheetah: ನಮೀಬಿಯಾದಿಂದ ಬಂದ ಚಿರತೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಪ್ರಧಾನಿಯವರು ಅನಗತ್ಯ ನಾಟಕವಾಡಿದ್ದಾರೆ ಎಂದಿದ್ದಾರೆ.  

Written by - Nitin Tabib | Last Updated : Sep 17, 2022, 03:31 PM IST
  • ಕಾಲದ ಚಕ್ರವು ನಮಗೆ ಭೂತಕಾಲವನ್ನು ಸರಿಪಡಿಸುವ ಮೂಲಕ ಹೊಸ ಭವಿಷ್ಯವನ್ನು ನಿರ್ಮಿಸಲು ಅವಕಾಶವನ್ನು ನೀಡುತ್ತದೆ,
  • ಇಂದು ಅದೃಷ್ಟವಶಾತ್ ನಮ್ಮ ಮುಂದೆ ಅಂತಹುದೇ ಕ್ಷಣವಿದೆ. ದಶಕಗಳ ಹಿಂದೆ ಮುರಿದುಹೋಗಿದ್ದ ಜೀವವೈವಿಧ್ಯದ ಕೊಂಡಿ.
  • ಇಂದು ಮತ್ತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದೆ. ನಮಗೆ ಆ ಒಂದು ಅವಕಾಶ ಸಿಕ್ಕಿದೆ
Project Cheetah: ಚಿರತೆಯ ಜೊತೆಗಿನ ಫೋಟೋ ಹಂಚಿಕೊಂಡು, ಪ್ರಧಾನಿ ಮೋದಿ ಕಾಲೆಳೆದ ಕಾಂಗ್ರೆಸ್ ಮುಖಂಡ  title=
Project Cheetah

Jairam Ramesh On Project Cheetah: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚಿರತೆಗಳನ್ನು ಪ್ರಧಾನಿ ಮೋದಿ ಬಿಡುಗಡೆಗೊಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, "ಕಾಲದ ಚಕ್ರವು ನಮಗೆ ಭೂತಕಾಲವನ್ನು ಸರಿಪಡಿಸುವ ಮೂಲಕ ಹೊಸ ಭವಿಷ್ಯವನ್ನು ನಿರ್ಮಿಸಲು ಅವಕಾಶವನ್ನು ನೀಡುತ್ತದೆ, ಇಂದು ಅದೃಷ್ಟವಶಾತ್ ನಮ್ಮ ಮುಂದೆ ಅಂತಹುದೇ ಕ್ಷಣವಿದೆ. ದಶಕಗಳ ಹಿಂದೆ ಮುರಿದುಹೋಗಿದ್ದ ಜೀವವೈವಿಧ್ಯದ ಕೊಂಡಿ. ಇಂದು ಮತ್ತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದೆ.  ನಮಗೆ ಆ ಒಂದು ಅವಕಾಶ ಸಿಕ್ಕಿದೆ. ಇಂದು ಚಿರತೆಗಳು ಭಾರತದ ಮಣ್ಣಿಗೆ ಮರಳಿವೆ" ಎಂದಿದ್ದಾರೆ

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಕಾಂಗ್ರೆಸ್ ತೀಕ್ಷಣ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಪ್ರಧಾನಿ ಆಡಳಿತಗಳಲ್ಲಿನ ನಿರಂತರತೆಯನ್ನು ಒಪ್ಪಿಕೊಳ್ಳುವುದು ಅಪರೂಪ.  ಪ್ರಾಜೆಕ್ಟ್ ಚೀತಾಗಾಗಿ  25.04.2010 ರಂದು ಕೇಪ್ ಟೌನ್‌ಗೆ ನಾನು ಭೇಟಿ ನೀಡಿರುವುದು ಇತ್ತೀಚಿನ ಉದಾಹರಣೆಯಾಗಿದೆ. ಇಂದು ಪ್ರಧಾನಿ ಅನಗತ್ಯ ಗದ್ದಲ ಸೃಷ್ಟಿಸಿದ್ದಾರೆ. ಇದು ರಾಷ್ಟ್ರೀಯ ಸಮಸ್ಯೆಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. #BharatJodoYatra ನಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನವಾಗಿದೆ" ಎಂದಿದ್ದಾರೆ. 

'ನಾನು ಈ ಪ್ರಾಜೆಕ್ಟ್ ಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ'
ಮುಂದಿನ ಟ್ವೀಟ್‌ನಲ್ಲಿ ಬರೆದುಕೊಂಡಿರುವ ಜೈರಾಮ್ ರಮೇಶ್, "2009-11ರ ಅವಧಿಯಲ್ಲಿ ಹುಲಿಗಳನ್ನು ಪನ್ನಾ ಮತ್ತು ಸರಿಸ್ಕಾಗೆ ಮೊದಲ ಬಾರಿಗೆ ಸ್ಥಳಾಂತರಿಸಿದಾಗ ಅನೇಕ ಜನರು ಆತಂಕ ವ್ಯಕ್ತಪಡಿಸಿದ್ದರು. ಅವು ತಪ್ಪು ಎಂದು ಸಾಬೀತಾಗಿವೆ. ಚೀತಾ ಯೋಜನೆಯಲ್ಲಿಯೂ ಇದೇ ರೀತಿಯ ಮುನ್ಸೂಚನೆಗಳನ್ನು ನೀಡಲಾಗುತ್ತಿದೆ. ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರರು ತುಂಬಾ ಒಳ್ಳೆಯವರಾಗಿದ್ದಾರೆ. ಈ ಯೋಜನೆಗಾಗಿ ನಾನು ನಿಮಗೆ ಶುಭ ಹಾರೈಸುತ್ತೇನೆ!" ಎಂದಿದ್ದಾರೆ.

ಇದನ್ನೂ ಓದಿ-Project Cheetah: ಭಾರತದ ಭೂಮಿಯ ಮೇಲೆ ಚೀತಾಗಳ ವಾಪಸಾತಿ, ಶತಮಾನಗಳ ಹಳೆ ಸಂಬಂಧ ಮರುಸ್ಥಾಪಿಸುವ ಪ್ರಯತ್ನ ಎಂದ ಪ್ರಧಾ

'ಚಿರತೆಗಳ ಪುನರ್ವಾಸಕ್ಕೆ ಅರ್ಥಪೂರ್ಣ ಪ್ರಯತ್ನ ನಡೆಸಲಾಗಿಲ್ಲ'
ತಮ್ಮ ಜನ್ಮದಿನದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ಭಾರತಕ್ಕೆ ತಂದ ಚಿರತೆಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಸ್ವತಃ ಪ್ರಧಾನಿ ಮೋದಿ ಈ ಚಿರತೆಗಳ ಫೋಟೋಗಳನ್ನೂ ಕ್ಲಿಕ್ಕಿಸಿದ್ದಾರೆ. ಚಿರತೆಗಳನ್ನು ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿ ಮಾತನಾಡಿದ್ದಾರೆ.

ಇದನ್ನೂ ಓದಿ-PM Modi Birthday: ರಾಷ್ಟ್ರಪತಿ, ರಾಹುಲ್ ಹಾಗೂ ಅಮಿತ್ ಶಾ ಸೇರಿದಂತೆ ಹಲವು ಗಣ್ಯರಿಂದ ಪ್ರಧಾನಿ ಮೋದಿಗೆ ಶುಭ ಹಾರೈಕೆ

1947ರಲ್ಲಿ ದೇಶದಲ್ಲಿ ಕೊನೆಯ ಮೂರು ಚಿರತೆಗಳು ಮಾತ್ರ ಉಳಿದಿದ್ದಾಗ ಅವುಗಳನ್ನೂ ಬೇಟೆಯಾಡಲಾಯಿತು. 1952ರಲ್ಲಿ ನಾವು ಚೀತಾಗಳ ಸಂತತಿ  ಅಳಿವಿನಂಚಿನಲ್ಲಿವೆ ಎಂದು ಘೋಷಿಸಿದ್ದು ದುರದೃಷ್ಟಕರ, ಆದರೆ ಪುನರ್ವಸತಿಗೆ ಯಾವುದೇ ಅರ್ಥಪೂರ್ಣ ಪ್ರಯತ್ನ ನಡೆದಿಲ್ಲ. ಇಂದು ಸ್ವಾತಂತ್ರ್ಯದ ಅಮೃತ್ ಮಹೋತ್ಸವದ ಕಾಲದಲ್ಲಿ ದೇಶವು ಹೊಸ ಶಕ್ತಿಯೊಂದಿಗೆ ಚಿರತೆಗಳಿಗೆ ಪುನರ್ವಸತಿ ಕಲ್ಪಿಸುವ ಪ್ರಯತ್ನ ಪ್ರಾರಂಭಿಸಿದೆ. ಅಮೃತದಲ್ಲಿ ಸತ್ತವರನ್ನೂ ಪುನರುಜ್ಜೀವನಗೊಳಿಸುವ ಶಕ್ತಿ ಇರುತ್ತದೆ' ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News