ರಾಹುಲ್ ಗಾಂಧಿಯವರನ್ನು ರಾವಣನ ರೀತಿ ಚಿತ್ರಿಸಿ ಟೀಕಿಸಿರುವ ಬಿಜೆಪಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವೇಣುಗೋಪಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ರಾಹುಲ್ ಗಾಂಧಿಯವರನ್ನು ಬಿಜೆಪಿ ರಾವಣನಿಗೆ ಹೋಲಿಸಿದ ನಾಚಿಕೆಗೇಡಿನ ಗ್ರಾಫಿಕ್ ಅನ್ನು ಖಂಡಿಸಲು ಯಾವುದೇ ಪದಗಳಿಲ್ಲ'ವೆಂದು ಕಿಡಿಕಾರಿದ್ದಾರೆ.
ಹೊಸ ಸಂಸತ್ ಭವನದ ನಿರ್ಮಾಣದ ಕುರಿತು ಶನಿವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹೊಸ ಸಂಕೀರ್ಣವನ್ನು ಮೋದಿ ಮಲ್ಟಿಪ್ಲೆಕ್ಸ್ ಅಥವಾ ಮೋದಿ ಮ್ಯಾರಿಯೆಟ್ ಎಂದು ಕರೆಯಬೇಕು ಎಂದು ಹೇಳಿದ್ದಾರೆ.
ನಿಜವಾದ ಡಬಲ್ ಇಂಜಿನ್ ಎಂದರೆ ಒಂದು ಇಂಜಿನ್ ಆರ್ಥಿಕ ವಿಕಾಸಕ್ಕೆ ಇರಬೇಕು ಆಗ ಅದಕ್ಕೆ ಡಬಲ್ ಇಂಜಿನ್ ಸರ್ಕಾರ ಎಂದು ಹೇಳಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
Indian Stock Market Big Update: ಅಡಾಣಿ ಗ್ರೂಪ್ ಕುರಿತು ಹಿಂಡೇನ್ ಬರ್ಗ್ ರಿಸರ್ಚ್ ವರದಿ ಬಿಡುಗಡೆ ಮಾಡಿದ ಹಿನ್ನೆಲೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದ್ದು, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಮುಳುಗಿಹೋಗಿವೆ.
Poltics On Cheetah: ಭಾರತಕ್ಕೆ ತರಿಸಿಕೊಳ್ಳಲಾದ 8 ಚಿರತೆಗಳ ಕುರಿತು ಭುಗಿಲೆದ್ದ ರಾಜಕೀಯ ನಿಲ್ಲುವ ಮಾತೇ ಎತ್ತುತ್ತಿಲ್ಲ. ಮೊದಲು ಜೈರಾಮ್ ರಮೇಶ್, ನಂತರ ಕನ್ಹಯ್ಯಾ ಕುಮಾರ್ ಬಳಿಕ ಇದೀಗ ಮಲ್ಲಿಕಾರ್ಜುನ್ ಖರ್ಗೆ ಕೂಡ ಚಿರತೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
Project Cheetah: ನಮೀಬಿಯಾದಿಂದ ಬಂದ ಚಿರತೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶನ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಪ್ರಧಾನಿಯವರು ಅನಗತ್ಯ ನಾಟಕವಾಡಿದ್ದಾರೆ ಎಂದಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ತಾನು ಸ್ಪರ್ಧಿಸಿದ್ದ ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ, ನಾಲ್ಕು ಸ್ಥಾನಗಳಿಗಾಗಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ಒಂದರಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ಇನ್ನೊಂದೆಡೆಗೆ ಗೆಲ್ಲಲು ಸೂಕ್ತ ನಂಬರ್ ಇಲ್ಲದಿದ್ದರೂ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದ ಜೆಡಿಎಸ್ ಪಕ್ಷವು ಗೆಲುವು ಸಾಧಿಸುವಲ್ಲಿ ವಿಫಲವಾಗಿದೆ.
ಎನ್ಆರ್ಸಿ ಕಾಂಗ್ರೆಸ್ಸಿನ ಸೃಷ್ಟಿ, ಆದರೆ ಈಗ ಅದನ್ನು ಬಿಜೆಪಿ ಸಮಾಜವನ್ನು ಧ್ರುವೀಕರಿಸಲು ಬಳಸುತ್ತಿದೆ. ಈಗಿನ ಮಸೂದೆ ದೇಶದ ಸಾಂವಿಧಾನಿಕ ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜೈರಾಮ್ ರಮೇಶ್ ಬುಧವಾರ ಹೇಳಿದ್ದಾರೆ.
ದೆಹಲಿ ಕೋರ್ಟ್ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕ್ಯಾರವಾನ್ ಮ್ಯಾಗಜಿನ್ ಸಂಪಾದಕ ಮತ್ತು ವರದಿಗಾರನ ಮೇಲೆ ಎನ್ಎಸ್ಎ ಅಜಿತ್ ದೋವಲ್ ಅವರ ಪುತ್ರ ವಿವೇಕ್ ಸಲ್ಲಿಸಿದ ಮಾನನಷ್ಟ ಮೊಕದ್ದಮೆ ವಿಚಾರವಾಗಿ ಸಮನ್ಸ್ ಜಾರಿ ಮಾಡಿದೆ.ಆದ್ದರಿಂದ ಅವರು ಎಪ್ರಿಲ್ 25 ರಂದು ಕೋರ್ಟ್ ಎದುರು ಹಾಜರಾಗಬೇಕಾಗಿದೆ.
"ಕರ್ನಾಟಕದ ಚುನಾವಣೆಯ ನಂತರ ರಾಹುಲ್ ಗಾಂಧಿಯವರ ತುರ್ತು ನಿರ್ಧಾರಗಳು ಕೆಲವೊಮ್ಮೆ ಕಾಂಗ್ರೆಸ್ ನಲ್ಲಿ ಅಚ್ಚರಿಯನ್ನು ಉಂಟು ಮಾಡಿದ್ದವು. ಈ ಬಾರಿ ಇಡೀ ದೇಶದಲ್ಲೆಡೆ ಕಾಂಗ್ರೆಸ್ ಪಕ್ಷವು ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಸಹಿತ ಮಹಾಮೈತ್ರಿ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ."
By accepting cookies, you agree to the storing of cookies on your device to enhance site navigation, analyze site usage, and assist in our marketing efforts.