Pro Kabaddi Season 9 : ಪ್ರೊ ಕಬಡ್ಡಿ ಲೀಗ್ನ ಆಯೋಜಕರು ಸೀಸನ್ 9 ರ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಪ್ರೊ ಕಬಡ್ಡಿ ಸೀಸನ್ 9 ಅಕ್ಟೋಬರ್ 7 ರಿಂದ ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ವಿವೋ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 9 ಹಿಂದೆಂದಿಗಿಂತಲೂ ದೊಡ್ಡದಾಗಿದೆ ಮತ್ತು ಅತ್ಯುತ್ತಮವಾಗಿರಲಿದೆ. ಅಭಿಮಾನಿಗಳು ಕಬಡ್ಡಿ ಆಕ್ಷನ್ ನೋಡಲು ಕಾಯುತ್ತಿದ್ದಾರೆ, ಸ್ಟಾರ್ ಸ್ಪೋರ್ಟ್ಸ್, vivo ಪ್ರೊ ಕಬಡ್ಡಿ ಲೀಗ್ನ ಅಧಿಕೃತ ಪ್ರಸಾರಕವಾಗಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಭಾರತದಾದ್ಯಂತದ ಅಭಿಮಾನಿಗಳು ಪಂದ್ಯಾವಳಿಯನ್ನು ಲೈವ್ ಮತ್ತು ಎಕ್ಸ್ಕ್ಲೂಸಿವ್ ವೀಕ್ಷಿಸಬಹುದು.
ಇದನ್ನೂ ಓದಿ : IND vs AUS: ಮೊಹಾಲಿ ಪಂದ್ಯದ ಸೋಲಿಗೆ ಯಾರು ಹೊಣೆ? ಈ ವೇಗಿ ಮೇಲೆ ಗವಾಸ್ಕರ್ ಗರಂ!
ಸೀಸನ್ 8 ರ ರಿಟರ್ನಿಂಗ್ ಚಾಂಪಿಯನ್ಗಳಾದ ದಬಾಂಗ್ ಡೆಲ್ಲಿ ಕೆಸಿ ಮತ್ತು ಯು ಮುಂಬಾ ಫೈಟ್ ಜೊತೆ ಸೀಸನ್ 9 ಪ್ರಾರಂಭವಾಗಲಿದೆ. ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ವಿರುದ್ಧ ತೆಲುಗು ಟೈಟಾನ್ಸ್ ಹಾಗೂ ಮೂರನೇ ಪಂದ್ಯದಲ್ಲಿ ಯುಪಿ ಯೋಧಾಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಸೆಣಸಲಾಡಲಿದ್ದಾರೆ.
Mark your 🗓️ & gear up for the #vivoProKabaddi extravaganza! pic.twitter.com/taMRs1Hi5K
— ProKabaddi (@ProKabaddi) September 21, 2022
ಆರಂಭಿಕ ಮೂರು ದಿನಗಳಲ್ಲಿ ಟ್ರಿಪಲ್ ಹೆಡರ್ಗಳೊಂದಿಗೆ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. 66 ಪಂದ್ಯಗಳಿಗೆ ಬಿಡುಗಡೆಯಾದ ವೇಳಾಪಟ್ಟಿಯಲ್ಲಿ, ಪ್ರತಿಯೊಂದು ಪಂದ್ಯವು ವಿಶಿಷ್ಟವಾಗಿದೆ ಮತ್ತು ಮೊದಲ 2 ದಿನಗಳಲ್ಲಿ, ಎಲ್ಲಾ 12 ತಂಡಗಳು ಆಡುವ ಆಟವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ಸಿಗುತ್ತದೆ. ಎರಡನೇ ಭಾಗದ ವೇಳಾಪಟ್ಟಿಯನ್ನು ಅಕ್ಟೋಬರ್, 2022 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು.
#BengalWarriors #BengaluruBulls #DabangDelhiKC #GujaratGiants #HaryanaSteelers #JaipurPinkPanthers #PatnaPirates #PuneriPaltan #TamilThalaivas #TeluguTitans #UMumba #UPYoddhas pic.twitter.com/PSv0RJNW8x
— ProKabaddi (@ProKabaddi) September 21, 2022
ಪಿಕೆಎಲ್ ಸೀಸನ್ 9 ರ ವೇಳಾಪಟ್ಟಿಯ ಕುರಿತು ಮಾತನಾಡಿದ ಲೀಗ್ನ ಕಮಿಷನರ್ ಅನುಪಮ್ ಗೋಸ್ವಾಮಿ, ಪಿಕೆಎಲ್ ಸೀಸನ್ 9 ವಿಶ್ವದ ಅತ್ಯುತ್ತಮ ಕಬಡ್ಡಿಯ ಹೈ-ವೋಲ್ಟೇಜ್ ಪಂದ್ಯಳನ್ನು ನಡೆಸಲು ಸಜ್ಜಾಗಿದೆ. ಬೆಂಗಳೂರು, ಪುಣೆ ಮತ್ತು ಹೈದರಾಬಾದ್ ಮೂರು ಆಯ್ದ ನಗರಗಳಾದ್ಯಂತ ಕ್ರೀಡಾ ಪ್ರೇಮಿಗಳು ಕಬಡ್ಡಿಯನ್ನು ಎಂಜಾಯ್ ಮಾಡಬಹುದು ಎಂದರು.
🚨 ℙ𝔸ℝ𝕋 𝟙 𝕆𝔽 𝕋ℍ𝔼 𝕊𝔼𝔸𝕊𝕆ℕ 𝟡 𝕊ℂℍ𝔼𝔻𝕌𝕃𝔼 🚨
📍 Shree Kanteerava Indoor Stadium, Bengaluru
📍 Shree Shiv Chhatrapati Sports Complex, Balewadi, Pune pic.twitter.com/4Mne3j2lgV— ProKabaddi (@ProKabaddi) September 21, 2022
ಇದನ್ನೂ ಓದಿ : IND vs AUS T20i: ಭಾರತ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲೇ ಸೋಲು ಕಂಡ ಟೀಂ ಇಂಡಿಯಾ!
ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ 9 ರ ಆಟಗಾರರ ಹರಾಜಿನಲ್ಲಿ 'ಹೈ-ಫ್ಲೈಯರ್' ಪವನ್ ಸೆಹ್ರಾವತ್, ವಿಕಾಶ್ ಕಾಂಡೋಲಾ, ಗುಮಾನ್ ಸಿಂಗ್, ಪರ್ದೀಪ್ ನರ್ವಾಲ್, 'ಸುಲ್ತಾನ್' ಫಜಲ್ ಅತ್ರಾಚಲಿ, ಮೊಹಮ್ಮದ್ ನಬಿಬಕ್ಷ್ ಮುಂತಾದ ಕಬಡ್ಡಿ ತಾರೆಗಳನ್ನು ದಾಖಲೆಯ ಮೊತ್ತಕ್ಕೆ ತಂಡಗಳು ಪಡೆದುಕೊಂಡಿವೆ. ಈ ಬಾರಿ ಬೆಂಗಳೂರು ಬುಲ್ಸ್ ತನ್ನ ತವರಿನಲ್ಲೇ ಹೆಚ್ಚಿನ ಪಂದ್ಯಗಳನ್ನು ಆಡಲಿದೆ. 2019ರಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆದಿದ್ದವು. ಆದರೆ ಕಳೆದ ಆವೃತ್ತಿಯು ಸಂಪೂರ್ಣವಾಗಿ ಬೆಂಗಳೂರಲ್ಲೇ ಖಾಸಗಿ ಹೋಟೆಲ್ನ ಆವರಣದಲ್ಲಿ ನಡೆದಿತ್ತು. ಆದರೆ ಪ್ರೇಕ್ಷಕರಿಗೆ ಕೊರೊನಾ ಕಾರಣದಿಂದ ಅವಕಾಶ ಕಲ್ಪಿಸಿರಲಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.