IND vs AUS T20i: ಭಾರತ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲೇ ಸೋಲು ಕಂಡ ಟೀಂ ಇಂಡಿಯಾ!

ನಂತರ ಆಗಮಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಕ್ಕೆ ನೆರವಾಗುವ ಭರವಸೆ ನೀಡಿದರು. ಇನ್ನು ಕೆ ಎಲ್ ರಾಹುಲ್ ಕೇವಲ 32 ಬಾಲ್ ಗೆ 55 ರನ್ ಸಿಡಿಸಿದರು.ಈ ಮೂಲಕ ರಾಹುಲ್ ತಮ್ಮ 18ನೇ ಒಡಿಐ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

Written by - Bhavishya Shetty | Last Updated : Sep 20, 2022, 10:50 PM IST
    • ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ಮುಖಾಮುಖಿ
    • ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯ
    • ಮೊದಲ ಪಂದ್ಯದಲ್ಲಿ ಗೆದ್ದು ಬೀಗಿದ ಆಸ್ಟ್ರೇಲಿಯಾ ಪಡೆ
IND vs AUS T20i: ಭಾರತ ವಿರುದ್ಧ ಗೆದ್ದು ಬೀಗಿದ ಆಸ್ಟ್ರೇಲಿಯಾ: ಮೊದಲ ಪಂದ್ಯದಲ್ಲೇ ಸೋಲು ಕಂಡ ಟೀಂ ಇಂಡಿಯಾ! title=
Cricket

ಇಂದು ಮೂರು ಪಂದ್ಯಗಳ T20I ಸರಣಿಯ ಮೊದಲ ಪಂದ್ಯ ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ  ಭಾರತ 20 ಓವರ್ ಗಳಲ್ಲಿ  ಆರು ವಿಕೆಟ್ ನಷ್ಟಕ್ಕೆ 208 ರನ್ ಬಾರಿಸಿದೆ. ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಅಂತಿಮ ಓವರ್ ನಲ್ಲಿ 211 ರನ್ ಗಳಿಸಿ ಗೆಲುವು ಸಾಧಿಸಿತು. 

ಇದನ್ನೂ ಓದಿ:  ICC New Rules: October 1 ರಿಂದ ಕ್ರಿಕೆಟ್ ನ ಈ ನಿಯಮಗಳು ಬದಲಾಗುತ್ತಿವೆ, ಐಸಿಸಿ ಘೋಷಣೆ

ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಭಾರತಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ಈ ಸಂದರ್ಭದಲ್ಲಿ ಭಾರತದ ಆರಂಭಿಕ ಆಟಗಾರರಾಗಿ ರೋಹಿತ್ ಶರ್ಮಾ ಹಾಗೂ ಕೆ ಎಲ್ ರಾಹುಲ್ ಕಣಕ್ಕಿಳಿದರು. ಆದರೆ ರೋಹಿತ್ ಕೇವಲ 9 ಎಸೆತಗಳಲ್ಲಿ 11 ರನ್ ಬಾರಿಸಿ ಔಟಾದರು. ಈ ಬಳಿಕ ಅಂಗಣಕ್ಕೆ ಬಂದ ವಿರಾಟ್ ಕೊಹ್ಲಿ ಸಹ ಕೇವಲ 7 ಎಸೆತಕ್ಕೆ ಎರಡು ರನ್ ಬಾರಿಸಿ ಪೆವಿಲಿಯನ್ ಗೆ ಮರಳಿದರು. ಕೊಹ್ಲಿ ಔಟ್ ಆಗುವ ವೇಳೆಗೆ ಭಾರತ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿತ್ತು.

ನಂತರ ಆಗಮಿಸಿದ ಸೂರ್ಯಕುಮಾರ್ ಯಾದವ್ ಪಂದ್ಯಕ್ಕೆ ನೆರವಾಗುವ ಭರವಸೆ ನೀಡಿದರು. ಇನ್ನು ಕೆ ಎಲ್ ರಾಹುಲ್ ಕೇವಲ 32 ಬಾಲ್ ಗೆ 55 ರನ್ ಸಿಡಿಸಿದರು.ಈ ಮೂಲಕ ರಾಹುಲ್ ತಮ್ಮ 18ನೇ ಒಡಿಐ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಸಾಧನೆ ಮಾಡಿದ್ದಾರೆ.

ಕೆಎಲ್ ರಾಹುಲ್ ಬಳಿಕ ಸೂರ್ಯ ಕುಮಾರ್ ಯಾದವ್ ಸಹ ಪೆವಿಲಿಯನ್ ದಾರಿ ಹಿಡಿದರು. 24 ಬಾಲ್ ಗೆ 46 ರನ್ ಬಾರಿಸಿದ ಯಾದವ್ ಅದ್ಭುತ ಪ್ರದರ್ಶನ ನೀಡಿ ತಂಡಕ್ಕೆ ನೆರವಾದರು. ಸೂರ್ಯ ಕುಮಾರ್ ಯಾದವ್ ಔಟ್ ಆಗುವ ವೇಳೆಗೆ ಟೀಂ ಇಂಡಿಯಾ 131 ರನ್ ಗೆ 4 ವಿಕೆಟ್ ಕಳೆದುಕೊಂಡಿತ್ತು.

ರಾಹುಲ್ ಔಟ್ ಆದ ಬಳಿಕ ಕಣಕ್ಕಿಳಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಉತ್ತಮ ಪ್ರದರ್ಶನ ನೀಡಿದರು. ಆದರೆ ಸೂರ್ಯ ಕುಮಾರ್ ಯಾದವ್ ಬಳಿಕ ಆಗಮಿಸಿದ ಅಕ್ಷರ್ ಪಟೇಲ್ ಕೇವಲ 4 ಬಾಲ್ ಗೆ ಆರು ರನ್ ಬಾರಿಸಿ ಔಟ್ ಆದರು. ಇವರ ನಂತರ ಕ್ರೀಸ್ ಗೆ ಆಗಮಿಸಿದ ದಿನೇಶ್ ಕಾರ್ತಿಕ್ ಪಾಂಡ್ಯಗೆ ಜೊತೆಯಾದರು. ಆದರೆ ಅಂಗಣದಲ್ಲಿ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗದೆ 4 ಬಾಲ್ ಗೆ 6 ರನ್ ಬಾರಿಸಿ ಮರಳಿದರು. ಇದಾದ ನಂತರ ಹರ್ಷಲ್ ಪಟೇಲ್ ಆಗಮಿಸಿ 4 ಬಾಲ್ ಗೆ ಏಳು ರನ್ ಬಾರಿಸಿದರು. ಇನ್ನು ಅಂಗಣದಲ್ಲೇ ಇದ್ದ ಪಾಂಡ್ಯ ಭರ್ಜರಿ ಆಟವಾಡಿದ್ದು, ಕೇವಲ 30 ಎಸೆತಕ್ಕೆ 71 ರನ್ ಬಾರಿಸಿದ್ದಾರೆ. ಒಟ್ಟಾರೆ 20 ಓವರ್ ಗಳಲ್ಲಿ ಭಾರತ ಆರು ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿತ್ತು.

ಇದನ್ನೂ ಓದಿ:  Legends League ಪಂದ್ಯವನ್ನಾಡಲು ಲಖನೌ ತಲುಪಿದ ಮಿಷೆಲ್ ಜಾನ್ಸನ್ ಹೋಟೆಲ್ ಕೋಣೆಗೆ ನುಗ್ಗಿದ ಹಾವು.... ಮುಂದೇನಾಯ್ತು?

ಇನ್ನು ಭಾರತ ನೀಡಿದ ಗೆಲುವಿನ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಪಡೆ 211 ರನ್ ಬಾರಿಸುವ ಮೂಲಕ ಗೆಲುವು ಸಾಧಿಸಿತು.

ಮುಂಬರುವ ಎರಡು ಪಂದ್ಯಗಳು ಸೆಪ್ಟೆಂಬರ್ 23ರಂದು ನಾಗ್ಪುರದಲ್ಲಿ ಮತ್ತು ಸೆಪ್ಟೆಂಬರ್ 25ರಂದು ಹೈದರಾಬಾದ್ ನಲ್ಲಿ ನಡೆಯಲಿವೆ. ಟೀಂ ಇಂಡಿಯಾದಲ್ಲಿ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್ ಮತ್ತು ಯುಜ್ವೇಂದ್ರ ಚಾಹಲ್ ಅದ್ಭುತ ಪ್ರದರ್ಶನ ತೋರಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News