ವಾಟ್ಸ್‌ಆ್ಯಪ್‌ನಲ್ಲಿ ದೊಡ್ಡ ಬದಲಾವಣೆ! ಬಳಕೆದಾರರಿಗೆ ಸಿಗಲಿದೆ ಹೊಸ ಪವರ್, ಏನಿದು ನೂತನ ವೈಶಿಷ್ಟ್ಯ ?

WhatsApp Feature Update:ವಾಟ್ಸ್‌ಆ್ಯಪ್‌ಗೆ ಸೇರ್ಪಡೆಯಾಗಲಿರುವ ಹೊಸ ವೈಶಿಷ್ಟ್ಯವೆಂದರೆ 'ಡೋಂಟ್ ಡಿಸ್ಟರ್ಬ್' . ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಡೋಂಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಿದಾಗ, ಅವರು ವಾಟ್ಸ್‌ಆ್ಯಪ್‌ ಕರೆಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ.   

Written by - Ranjitha R K | Last Updated : Sep 26, 2022, 01:54 PM IST
  • ವಾಟ್ಸ್‌ಆ್ಯಪ್‌ ಹೊರತರಲಿದೆ ಹೊಸ ವೈಶಿಷ್ಟ್ಯ
  • ಬಿಡುಗಡೆಗೆ ಸಿದ್ದವಾಗಿದೆ ಹೊಸ ವೈಶಿಷ್ಟ್ಯ
  • ಹೊಸ ವೈಶಿಷ್ಟ್ಯದಿಂದ ಬಳಕೆದಾರರಿಗೆ ಏನು ಪ್ರಯೋಜನ ?
ವಾಟ್ಸ್‌ಆ್ಯಪ್‌ನಲ್ಲಿ  ದೊಡ್ಡ ಬದಲಾವಣೆ! ಬಳಕೆದಾರರಿಗೆ ಸಿಗಲಿದೆ ಹೊಸ ಪವರ್,   ಏನಿದು ನೂತನ ವೈಶಿಷ್ಟ್ಯ ?  title=
whatsapp new features (file photo)

WhatsApp Feature Update : ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಕಡಿಮೆ ಅಂತರದಲ್ಲಿ  ಹೊಸ ಹೊಸ ಅಪ್ಡೇಟ್ ಗಳನ್ನು ತರುತ್ತಿದೆ. ಈ ಅಪ್ಡೇಟ್ ಗಳು ಬಳಕೆದಾರರ ಅನುಭವವನ್ನು ಸುಧಾರಿಸುತ್ತದೆ. ಇದೀಗ ಕಂಪನಿಯು ಮತ್ತೊಂದು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ವೈಶಿಷ್ಟ್ಯವು ಗ್ರಾಹಕರಿಗೆ ಹೊಸ ಅನುಭವವನ್ನೇ ನೀಡಲಿದೆ. 

ಯಾವುದು  ಈ ಹೊಸ ವೈಶಿಷ್ಟ್ಯ ? :
ವಾಟ್ಸ್‌ಆ್ಯಪ್‌ಗೆ ಸೇರ್ಪಡೆಯಾಗಲಿರುವ ಹೊಸ ವೈಶಿಷ್ಟ್ಯವೆಂದರೆ 'ಡೋಂಟ್ ಡಿಸ್ಟರ್ಬ್' . ಈ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ, ಬಳಕೆದಾರರು ಡೋಂಟ್ ಡಿಸ್ಟರ್ಬ್ ಮೋಡ್ ಅನ್ನು ಆನ್ ಮಾಡಿದಾಗ, ಅವರು ವಾಟ್ಸ್‌ಆ್ಯಪ್‌ ಕರೆಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ತುಂಬಾ ಉಪಯುಕ್ತವಾಗಲಿದೆ.

ಇದನ್ನೂ ಓದಿ : ಕೇವಲ 500 ರೂ. ನಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನ್ನು iPhone 14 Pro Max ಗೆ ಬದಲಿಸಿ.!

ವಾಸ್ತವವಾಗಿ, Wabetainfo ನ ಇತ್ತೀಚಿನ ವರದಿಯಲ್ಲಿ, ಈ ಮಿಸ್ಡ್ ಕಾಲ್ ಅಲರ್ಟ್ ವೈಶಿಷ್ಟ್ಯದ ಬಗ್ಗೆ ಮಾಹಿತಿಯು ಮುನ್ನೆಲೆಗೆ ಬಂದಿದೆ. ಇದರಿಂದ ಬಳಕೆದಾರರು ಶೀಘ್ರದಲ್ಲೇ ಈ ವೈಶಿಷ್ಟ್ಯವನ್ನು ಬಳಸಲು ಸಾಧ್ಯವಾಗುತ್ತದೆ  ಎನ್ನಲಾಗಿದೆ. ಇನ್ನು ವಾಟ್ಸ್‌ಆ್ಯಪ್‌ ಶೀಘ್ರದಲ್ಲೇ  'ಡೋಂಟ್ ಡಿಸ್ಟರ್ಬ್' ಮಿಸ್ಡ್ ಕಾಲ್  ಅಲರ್ಟ್  ವೈಶಿಷ್ಟ್ಯವನ್ನು ತರಲಿದೆ. ಈ ಹೊಸ  ಅಪ್ಡೇಟ್ ನಂತರ, ಬಳಕೆದಾರರು 'ಡೋಂಟ್ ಡಿಸ್ಟರ್ಬ್' ಅನ್ನು ಆನ್ ಮಾಡಿದ ನಂತರ ಚಾಟ್‌ನಲ್ಲಿ ವಾಟ್ಸಾಪ್‌ ಮಿಸ್ಡ್ ಕಾಲ್‌ಗಳ ಮಾಹಿತಿಯನ್ನು ಪಡೆಯಬಹುದು. ಈ ಹಿಂದೆ ವಾಟ್ಸಾಪ್‌ನಲ್ಲಿ ಮಿಸ್ಡ್ ಕಾಲ್ ಪಡೆಯುತ್ತಿದ್ದರೂ, ಅದರ ಮಾಹಿತಿಯು ಚಾಟ್‌ನಲ್ಲಿ ಗೋಚರಿಸುತ್ತಿತ್ತು, ಆದರೆ ಹೊಸ  ಅಪ್ಡೇಟ್ ನಂತರ 'ಡೋಂಟ್ ಡಿಸ್ಟರ್ಬ್' ಎಂಬ  ಅಲರ್ಟ್ ಬರುತ್ತದೆ. ಪ್ರಸ್ತುತ, ಈ ವೈಶಿಷ್ಟ್ಯವು  ಟೆಸ್ಟಿಂಗ್  ಹಂತದಲ್ಲಿದೆ. ಈ ವೈಶಿಷ್ಟ್ಯವನ್ನು ಪರುಚಯಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.  

ಇದನ್ನೂ ಓದಿ : ಶೀಘ್ರವೇ ಸಾಧ್ಯವಾಗುವುದು ಏಲಿಯನ್ ಗಳ ಸಂಪರ್ಕ, ವಿಜ್ಞಾನಿಗಳಿಗೆ ಅನ್ಯ ಗ್ರಹದಿಂದ ನಿರಂತರವಾಗಿ ಸಿಗುತ್ತಿದೆ ಸಿಗ್ನಲ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News