ಫ್ಲಿಪ್ಕಾರ್ಟ್ ಸೇಲ್: ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಆರಂಭವಾಗಿದೆ. ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ನೀವು ಐಫೋನ್ ಅಭಿಮಾನಿಗಳಾಗಿದ್ದರೆ ಮತ್ತು ಕಡಿಮೆ ಬಜೆಟ್ನಲ್ಲಿ ಐಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಚಾನ್ಸ್ ಅನ್ನು ಮಿಸ್ ಮಾಡಿಕೊಳ್ಳಬೇಡಿ.
ವಾಸ್ತವವಾಗಿ, ಐಫೋನ್ 14 ರ ಆಗಮನದ ನಂತರ, ಐಫೋನ್ 12 ರ ಬೆಲೆ ಇದ್ದಕ್ಕಿದ್ದಂತೆ ಗಮನಾರ್ಹವಾಗಿ ಕಡಿಮೆ ಆಗಿದೆ. ಅದರಲ್ಲೂ ಫ್ಲಿಪ್ಕಾರ್ಟ್ ಸೇಲ್ನಲ್ಲಿ ನೀವು ಈ ಐಫೋನ್ ಅನ್ನು ಇನ್ನಷ್ಟು ಅಗ್ಗವಾಗಿ ಖರೀದಿಸುವ ಸುವರ್ಣಾವಕಾಶವಿದೆ. ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 12 ಅನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಇದರಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಿದೆ ತಿಳಿಯೋಣ...
ಇದನ್ನೂ ಓದಿ- Flipkart Big Billion Days Sale : 1 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸ್ಮಾರ್ಟ್ ಟಿವಿ : ನಿಮಗಾಗಿ ಭರ್ಜರಿ ಆಫರ್ಗಳು!
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 12 ಕೊಡುಗೆಗಳು ಮತ್ತು ರಿಯಾಯಿತಿಗಳು:
ಐಫೋನ್ 12 ಬೆಲೆ 59,900 ರೂ. ಆದರೆ ಈ ಐಫೋನ್ ಫ್ಲಿಪ್ಕಾರ್ಟ್ನಲ್ಲಿ 53,990 ರೂ.ಗೆ ಲಭ್ಯವಿದೆ. ಫೋನ್ ಮೇಲೆ 5,910 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ಅದರ ನಂತರ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳೂ ಲಭ್ಯವಿವೆ. ಇದರಿಂದಾಗಿ ಫೋನ್ನ ಬೆಲೆ ಗಣನೀಯವಾಗಿ ಕಡಿಮೆಯಾಗುತ್ತದೆ.
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 12 ಬ್ಯಾಂಕ್ ಆಫರ್:
ನೀವು ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 12 ಅನ್ನು ಖರೀದಿಸಲು ಐಸಿಐಸಿಐ ಬ್ಯಾಂಕ್ ಕಾರ್ಡ್ ಅನ್ನು ಬಳಸಿದರೆ, ನೀವು 2,750 ರೂ.ಗಳ ಬಂಪರ್ ರಿಯಾಯಿತಿಯನ್ನು ಪಡೆಯುತ್ತೀರಿ, ಅದರ ನಂತರ ಐಫೋನ್ನ ಬೆಲೆ ರೂ 51,240 ಆಗಿರುತ್ತದೆ. ಅದರ ನಂತರ ಎಕ್ಸ್ಚೇಂಜ್ ಆಫರ್ ಕೂಡ ಇದೆ.
ಇದನ್ನೂ ಓದಿ- ಕೇವಲ 12 ಸಾವಿರ ರೂಪಾಯಿಗಳಲ್ಲಿ ಐಫೋನ್ ಖರೀದಿಸುವ ಅವಕಾಶ, ಏನಿದು ಆಫರ್ ತಿಳಿಯಿರಿ
ಫ್ಲಿಪ್ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಐಫೋನ್ 12 ಎಕ್ಸ್ಚೇಂಜ್ ಆಫರ್:
ಐಫೋನ್ 12 ನಲ್ಲಿ 16,900 ರೂಪಾಯಿಗಳ ವಿನಿಮಯ ಕೊಡುಗೆ ಕೂಡ ಲಭ್ಯವಿದೆ. ನೀವು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ನಿಮಗೆ ಇಷ್ಟು ರಿಯಾಯಿತಿ ಸಿಗುತ್ತದೆ. ಆದರೆ ಫೋನ್ ಉತ್ತಮ ಸ್ಥಿತಿಯಲ್ಲಿದ್ದರೆ ಮತ್ತು ಮಾಡೆಲ್ ಲೇಟೆಸ್ಟ್ ಆಗಿದ್ದರೆ ಮಾತ್ರ 16,900 ರೂ.ಗಳ ವಿನಿಮಯ ರಿಯಾಯಿತಿ ಲಭ್ಯವಿರುತ್ತದೆ. ನೀವು ಈ ಎಲ್ಲಾ ಕೊಡುಗೆಗಳ ಪೂರ್ಣ ಲಾಭವನ್ನು ಪಡೆದರೆ ಐಫೋನ್ನ ಬೆಲೆ 34,340 ರೂ.ಗಳಿಗೆ ಇಳಿಕೆ ಆಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.