ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವು ಅಕ್ಟೋಬರ್ 16 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಆದರೆ ಅಕ್ಟೋಬರ್ 30, 2022 ರಂದು 6.19 ನಿಮಿಷಗಳಲ್ಲಿ ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದೆ.
Mangal Gochar October 2022: ಪ್ರತಿಯೊಂದು ಗ್ರಹವು ಒಂದು ನಿರ್ದಿಷ್ಟ ಸಮಯದಲ್ಲಿ ರಾಶಿಯನ್ನು ಬದಲಾಯಿಸುತ್ತದೆ. ಗ್ರಹಗಳ ಈ ರಾಶಿ ಬದಲಾವಣೆಯು 12 ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಂಗಳವು ಅಕ್ಟೋಬರ್ 16 ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದೆ. ಆದರೆ ಅಕ್ಟೋಬರ್ 30, 2022 ರಂದು 6.19 ನಿಮಿಷಗಳಲ್ಲಿ ಮತ್ತೆ ಹಿಮ್ಮುಖ ಚಲನೆ ಆರಂಭಿಸಲಿದೆ. ಇದರ ಪರಿಣಾಮವು ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ಕಂಡು ಬರುತ್ತದೆ. ಅದರಲ್ಲೂ 5 ರಾಶಿಯವು ಮಂಗಳ ಸಂಕ್ರಮನದಿಂದ ವಿಶೇಷ ಲಾಭವನ್ನು ಪಡೆದುಕೊಳ್ಳಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿಯವರಿಗೆ ಮಂಗಳ ಸಂಕ್ರಮಣವು ವಿಶೇಷ ಲಾಭವನ್ನು ನೀಡಲಿದೆ. ಮಂಗಳ ಮೇಷ ರಾಶಿಯ ಅಧಿಪತಿ. ಸಂಕ್ರಮಣದ ಸಮಯದಲ್ಲಿ, ಮೇಷ ರಾಶಿಯ ಮೂರನೇ ಮನೆಯಲ್ಲಿ ಮಂಗಳವು ಇರುತ್ತದೆ. ಇದು ನಿಮ್ಮ ಜೀವನದಲ್ಲಿ ಬಹಳ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಮಂಗಳ ಗ್ರಹದ ಸಂಚಾರದೊಂದಿಗೆ, ಮೇಷ ರಾಶಿಯವರ ಅದೃಷ್ಟ ಬದಲಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಬಡ್ತಿಯ ಜೊತೆಗೆ ಆದಾಯದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಗಳಿವೆ.
ವೃಷಭ ರಾಶಿಯವರಿಗೆ ಮಂಗಳ ಸಂಚಾರವು ಅಪಾರ ಪ್ರಯೋಜನವನ್ನು ನೀಡುತ್ತದೆ. ವೃಷಭ ರಾಶಿಯವರಿಗೆ ಮಂಗಳವು ಹನ್ನೆರಡನೇ ಮತ್ತು ಏಳನೇ ಮನೆಯ ಅಧಿಪತಿಯಾಗಿದ್ದು ಅಕ್ಟೋಬರ್ 16 ರಂದು ನಿಮ್ಮ ಎರಡನೇ ಮನೆಯಲ್ಲಿ ಮಂಗಳ ಸಾಗಲಿದ್ದಾನೆ. ಈ ಕಾರಣದಿಂದಾಗಿ, ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬರಲಿದೆ. ಈ ಸಮಯದಲ್ಲಿ, ಹೂಡಿಕೆಯ ಮೇಲೆ ಲಾಭ ಇರುತ್ತದೆ. ಆದರೆ ನೀವು ಅನಗತ್ಯ ವೆಚ್ಚಗಳನ್ನು ನಿಯಂತ್ರಿಸಬೇಕಾಗುತ್ತದೆ. ಮಂಗಳನ ದೃಷ್ಟಿ ವೃಷಭ ರಾಶಿಯ ಎಂಟನೇ ಸ್ಥಾನದಲ್ಲಿರುತ್ತದೆ, ಆದ್ದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ.
ಸಿಂಹ ರಾಶಿಯವರಿಗೆ ಮಂಗಳ ಗ್ರಹವು ಯೋಗಕಾರಕವಾಗಿದೆ. ಅಕ್ಟೋಬರ್ 16 ರಂದು ಹನ್ನೊಂದನೇ ಮನೆಯಲ್ಲಿ ಸಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಸಿಂಹ ರಾಶಿಯ ಜನರಿಗೆ ದೊಡ್ಡ ಮಟ್ಟದ ಲಾಭವಾಗಲಿದೆ. ಮಂಗಳ ಸಂಕ್ರಮಣದಿಂದ ಸಿಂಹ ರಾಶಿಯವರಿಗೆ ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ.
ಕನ್ಯಾ ರಾಶಿಯವರಿಗೆ ಮಂಗಳ ಗೋಚರವು ಪ್ರಯೋಜನಕಾರಿಯಾಗಲಿದೆ. ನಾಲ್ಕನೇ ಮನೆಯ ಮೇಲೆ ದೃಷ್ಟಿ ಇರುವುದರಿಂದ ಆಸ್ತಿ ಅಥವಾ ವಾಹನಗಳನ್ನು ಖರೀದಿಸುವ ಸಾಧ್ಯತೆಗಳು ಕಂಡುಬರುತ್ತವೆ. ಆರ್ಥಿಕ ಪ್ರಗತಿಯೊಂದಿಗೆ ವ್ಯಾಪಾರ ಅಥವಾ ಉದ್ಯೋಗದಲ್ಲಿ ಹೊಸ ಅವಕಾಶಗಳು ಸಿಗಲಿವೆ.
ಕುಂಭ ರಾಶಿಯ ತೃತೀಯ ಮತ್ತು ಹತ್ತನೇ ಮನೆಗಳಿಗೆ ಮಂಗಳ ಅಧಿಪತಿ. ಸಂಕ್ರಮಣದ ನಂತರ ಮಂಗಳನು ಐದನೇ ಮನೆಯಲ್ಲಿರುತ್ತಾನೆ. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಶಿಕ್ಷಣ, ಬುದ್ಧಿವಂತಿಕೆ, ಪ್ರೀತಿ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ.ಸಂಕ್ರಮಣದಲ್ಲಿ ಮಂಗಳವು ಧನಾತ್ಮಕತೆಯನ್ನು ನೀಡುತ್ತದೆ.