ಕಾಗದವು ದಿನನಿತ್ಯ ಬಳಸುವ ಮುಖ್ಯ ವಸ್ತುಗಳಲ್ಲಿ ಒಂದು.ಇಂದು ಡಿಜಿಟಲ್‌ಯುಗದಿಂದಾಗಿ ಹಲವೆಡೆ ಕಾಗದ ರಹಿತ ವಹಿವಾಟುಗಳು ನಡೆಯುತ್ತಿದ್ದರೂ, ಕಾಗದವಿಲ್ಲದೇ ಜೀವನನ ಡೆಸಲು ಸಾಧ್ಯವಿಲ್ಲ. ದಿನಪತ್ರಿಕೆಗಳಿಂದ ಹಿಡಿದು ಪಠ್ಯಪುಸ್ತಕದ ತನಕ, ಪ್ರತಿದಿನವೂ ಕಾಗದನಮ್ಮಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದರೆ ವಿಶ್ವದಾದ್ಯಂತ ಪ್ರತಿವರ್ಷ ಬರೋಬ್ಬರಿ ೮೫ ಮಿಲಿಟನ್ ಕಾಗದವು ತ್ಯಾಜ್ಯವಾಗಿ ಮಾರ್ಪಾಡಾಗುತ್ತದೆ.
ಸಾಕಷ್ಟು ಪ್ರಮಾಣದಲ್ಲಿ ಕಾಗದ ಪೋಲಾಗುತ್ತಿರುವುದನ್ನು ಗಮನಿಸಿದ ಆರ್ಕಿಡ್ಸ್ ದಿ ಅಂತಾರಾಷ್ಟ್ರೀಯ ಶಾಲೆಯ ೭ನೇ ತರಗತಿಯ ವಿದ್ಯಾರ್ಥಿಕರಣ್, ಇದಕ್ಕೆಪರಿಹಾರವಾಗಿ ಒಂದು ಉಪಾಯವನ್ನು ಕಂಡುಕೊಂಡ.ಶಾಲೆಯಲ್ಲಿ ಮರುಬಳಕೆಯ ಬಗ್ಗೆ ಪ್ರಾಂಶುಪಾಲೆ ಆಡಿದ ಮಾತುಗಳನ್ನು ಆಲಿಸಿ ಪ್ರೇರಣೆಗೊಂಡಕರಣ್, recycling ವಿಧಾನದ ಬಗ್ಗೆ ಅಂತರ್ಜಾಲದಲ್ಲಿ ಜಾಲಾಡುತ್ತಾನೆ.ಸಿಕ್ಕಎಲ್ಲಾ ಮಾಹಿತಿಯನ್ನು ಕ್ರೋಢೀಕರಿಸಿ ಮನೆಯಲ್ಲಿಯೇ ಸರಳವಾಗಿ recycling ಮಾಡಲು ಪ್ರಾರಂಭಿಸುತ್ತಾನೆ.
ವಿಧಾನ:
1. ಕಸದ ಬುಟ್ಟಿಸೇರುವ ಕಾಗದವನ್ನೆಲ್ಲ ಒಟ್ಟುಸೇರಿಸಿ, ಅದನ್ನು ಚಿಕ್ಕದಾಗಿ ಚೂರುಮಾಡಬೇಕು
2. ನಂತರ ಅದನ್ನು ಮಿಕ್ಸಿಂಗ್ ಜಾರ್‌ನಲ್ಲಿ ಹಾಕಿ, ನೀರು, ಗಂಜಿ ನೀರು ಸೇರಿಸಿ ಅರೆಯಬೇಕು
3. ಅರೆದ ಮಿಶ್ರಣವನ್ನು ಎರೆದು ಅದರಲ್ಲಿರುವ ನೀರನ್ನು ಹಿಂಡಿತೆಗೆಯಬೇಕು
4. ತಯಾರಾದ ಕಚ್ಛಾ ಕಾಗದದ ಮಿಶ್ರಣವನ್ನು ನಮಗೆ ಬೇಕಾಗಿರುವ ಆಕೃತಿಗೆ ಹದಮಾಡಬೇಕು
5. ಕನಿಷ್ಟ ಎರಡು ದಿನ ಬಿಸಿಲಲ್ಲಿ ಒಣಗಿಸಿದರೆ Recycled paper ಸಿದ್ಧ
ಇದನ್ನೂ ಓದಿ- ರೇಷನ್ ಕಾರ್ಡ್ ಬಿಗ್ ಅಪ್ಡೇಟ್: 2.4 ಕೋಟಿ ಪಡಿತರ ಚೀಟಿ ರದ್ದು!
ಕಾಗದದ ಮಿಶ್ರಣವನ್ನು ನಮಗೆ ಬೇಕಾದ ಆಕೃತಿಯಿರುವ ಅಚ್ಚಿನಲ್ಲಿ ಹಾಕಿದರೆ, ವಿಧ ವಿಧವಾದ ಆಕಾರದಲ್ಲಿ ಕಾಗದವನ್ನು ತಯಾರಿಸಬಹುದು. ಹಾಗೆಯೇ ಜಾರ್‌ನಲ್ಲಿ ಅರೆಯುವಾಗ ಬಣ್ಣವನ್ನು ಸೇರಿಸಿದರೆ, ಬಣ್ಣದ ಕಾಗದವನ್ನು ಸಿದ್ಧಪಡಿಸಬಹುದು.
ಕರಣ್ Recycled ಪೇಪರ್‌ನಿಂದ ಡ್ರಾಯಿಂಗ್‌ಚಾರ್ಟ್, ಗ್ರೀಟಿಂಗ್ ಕಾರ್ಡ್.ಬುಕ್‌ಮಾರ್ಕ್‌ಗಳನ್ನುತಯಾರಿಸಿದ್ದಾನೆ. ಶಾಲಾ ಚಟುವಟಿಕೆಗಳಲ್ಲಿ ಅಗತ್ಯವಿರುವ ಚಾರ್ಟ್ ಕಾಗದಗಳನ್ನು ಮನೆಯಲ್ಲಿಯೇ ತಯಾರಿಸುತ್ತಾನೆ. ಸ್ನೇಹಿತರ ಜನ್ಮದಿನದಂದು ಅವನ ಕೈಯ್ಯಾರೆ ಗ್ರೀಟಿಂಗ್ ಕಾರ್ಡ್ ತಯಾರಿಸಿ ಸ್ನೇಹಿತರಿಗೆ ಹಂಚುತ್ತಾನೆ. ಅವನ ಶಾಲೆಯಲ್ಲಿ ಸ್ನೇಹಿತರಿಗೂ ಮರುಬಳಕೆ ಮಾಡುವಂತೆ ಪ್ರೇರೇಪಿಸುತ್ತಿದ್ದಾನೆ.
ಇದನ್ನೂ ಓದಿ- Ration Card: ಉಚಿತ ಪಡಿತರ ಪ್ರಯೋಜನಗಳನ್ನು ಪಡೆಯಲು ಈ ಹೊಸ ನಿಯಮಗಳನ್ನು ತಪ್ಪದೇ ತಿಳಿಯಿರಿ
“ ಪ್ರತಿದಿನ ನಾವು ಸಾಕಷ್ಟು ಕಾಗದವನ್ನು ಪೋಲುಮಾಡುತ್ತೇವೆ, ನಮಗೆ ಕೈಲಾದಷ್ಟು ಮರು ಬಳಕೆ ಮಾಡಿದರೆ ಪೋಲಾಗುವುದನ್ನುತಡೆದು ಸಂಪನ್ಮೂಲಗಳ ಸಮಗ್ರ ಬಳಕೆಯನ್ನು ಮಾಡಬಹುದು. ಇದೀಗ ನಾನು ನನ್ನಸಹಪಾಠಿಗಳಿಗೆ ಮರುಬಳಕೆ ಮಾಡಲು ಪ್ರೇರೇಪಿಸುತ್ತಿದ್ದೇನೆ. ಮುಂದೆ ಇನ್ನಷ್ಟು ಜನರಿಗೆ ಈ ವಿಧಾನವನ್ನು ತಿಳಿಸಿ ಅತಿ ಹೆಚ್ಚು ಪ್ರಮಾಣದಲ್ಲಿ Recycling ಮಾಡಬೇಕೆಂಬುದು ನನ್ನ ಗುರಿಯಾಗಿದೆ” ಎನ್ನುತ್ತಾನೆ ಕರಣ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.