ನವದೆಹಲಿ: ಶುಕ್ರವಾರದಂದು ಇಂಡೋನೆಷ್ಯಾದಲ್ಲಿ ರಿಕ್ಟರ್ ಮಾಪಕದಲ್ಲಿ 7.5 ಭೂಕಂಪ ಸಂಭವಿಸಿದೆ ಎಂದು ಅಮೆರಿಕಾದ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. ಆದರೆ ತಕ್ಷಣ ಇದುವರೆಗೆ ಸಾವು ನೋವುಗಳ ವರದಿಯಾಗಿಲ್ಲ ಎಂದು ಹೇಳಲಾಗಿದೆ.
ದೇಶದ ಕೇಂದ್ರೀಯ ಸುಲಾವೆಸಿ ದ್ವೀಪದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ.ಇದಕ್ಕೂ ಮೊದಲು ಅದೇ ಪ್ರದೇಶದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪದಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದನು.ಈ ವರ್ಷದ ಆರಂಭದಲ್ಲಿ ಲಾಂಬೊಕ್ ದ್ವೀಪದಲ್ಲಿ ನೂರಾರು ಜನರನ್ನು ಬಲಿ ತೆಗೆದುಕೊಂಡ ಭೂಕಂಪಕ್ಕಿಂತ ಹೆಚ್ಚಿನ ತೀವ್ರತೆ ಇತ್ತು ಎಂದು ಹೇಳಲಾಗಿದೆ.
ಶುಕ್ರವಾರದ ಈ ಭೂಕಂಪನವು ಕೇಂದ್ರ ಸುಲಾವೆಸಿ ಪ್ರಾಂತ್ಯದ ರಾಜಧಾನಿಯಾದ ಪಾಲು ನಗರದ ಉತ್ತರಕ್ಕೆ 78 ಕಿಲೋಮೀಟರ್ ನಲ್ಲಿ ಕೇಂದ್ರೀಕೃತವಾಗಿತ್ತು. ಪಾಲುದಿಂದ ದಕ್ಷಿಣಕ್ಕೆ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಟೊರಾಜ ನಿವಾಸಿ ಲಿಸಾ ಸೊಬಾ ಪಲ್ಲೋನ್ ಭೂಕಂಪನಡ ಅನುಭವಿಸಿದ್ದಾರೆಂದು ಹೇಳಿದ್ದಾರೆ.
2004 ರಲ್ಲಿ ಪಶ್ಚಿಮ ಇಂಡೋನೇಶಿಯಾದ ಸುಮಾತ್ರಾ ತೀರದಲ್ಲಿ ಸುನಾಮಿಯಿಂದಾಗಿ 168,000 ಇಂಡೋನೇಶಿಯಾದ ಜನರನ್ನು ಒಳಗೊಂಡಂತೆ ಹಿಂದೂ ಮಹಾಸಾಗರದ 220,000 ಜನರನ್ನು ಬಲಿತೆಗೆದುಕೊಂಡಿತ್ತು.