Vastu Tips: ಆರ್ಥಿಕ ಅಡಚಣೆ ನಿವಾರಣೆಗೆ ಮನೆಯಲ್ಲಿ ಈ ದೇವರ ವಿಗ್ರಹ ಪ್ರತಿಷ್ಠಾಪಿಸಿ, ಹಣದ ಸುರಿಮಳೆಯಾಗುತ್ತದೆ

ಮನೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸುವಾಗ, ಅದರ ದೃಷ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಬೀಳುವ ಸ್ಥಳದಲ್ಲಿರುವಂತೆ ವಿಶೇಷ ಕಾಳಜಿ ವಹಿಸಬೇಕು.

ನವದೆಹಲಿ: ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತನಾಗಲು ಹಾತೊರೆಯುತ್ತಾನೆ. ಮನುಷ್ಯನಿಗೆ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಬೇಕು. ಆದರೆ, ಇದು ಎಲ್ಲರ ಅದೃಷ್ಟವಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಸ್ತು ಪ್ರಕಾರ ಒಂದಿಷ್ಟು ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಇಟ್ಟರೆ ನೆಮ್ಮದಿಯ ಜೀವನ ನಡೆಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರದೇಶ, ನಗರ, ರಾಜ್ಯ ಅಥವಾ ಪ್ರಪಂಚದ ಶ್ರೀಮಂತ ಜನರಲ್ಲಿ ತಾನು ಇರಬೇಕೆಂದು ಬಯಸುತ್ತಾನೆ. ತಾನು ಯಾವುದೇ ರೀತಿಯಲ್ಲಿ ಬಡತನವನ್ನು ಅನುಭವಿಸಬಾರದು ಮತ್ತು ಹಣದ ಕೊರತೆಯಿಂದ ಬಳಲಬಾರದು ಅನ್ನೋ ಆಸೆ ಇರುತ್ತದೆ. ಯಾವುದೇ ವ್ಯಕ್ತಿ ಬಡತನದ ಮುಖವನ್ನು ನೋಡಲು ಬಯಸುವುದಿಲ್ಲ. ತಮ್ಮ ಜೀವನದ ಬಳಿಕ ತಮ್ಮ ಮಕ್ಕಳ ಬೇಡಿಕೆಗಳನ್ನು ಪೂರೈಸಲು ಅವರು ಬಯಸುತ್ತಾರೆ.

2 /5

ಪ್ರತಿಯೊಬ್ಬ ವ್ಯಕ್ತಿಯು ತನ್ನ ಹೆಂಡತಿಯ ಮನಸ್ಸಿನಲ್ಲಿ ಮೂಡುವ ಆಸೆಯನ್ನು ಈಡೇರಿಸಲು ಬಯಸುತ್ತಾನೆ. ಬೆಲೆಬಾಳುವ ವಸ್ತುವನ್ನು ಮಾರುಕಟ್ಟೆಯಿಂದ ಖರೀದಿಸಿ ಹೆಂಡತಿಗೆ ಅರ್ಪಿಸಿ ಖುಷಿಪಡಿಸಬೇಕು ಅಂತಾ ಕನಸು ಕಂಡಿರುತ್ತಾನೆ. ತನ್ನ ಹೆತ್ತ ತಂದೆ-ತಾಯಿಯನ್ನೂ ಸಂತೋಷವಾಗಿಡಬೇಕೆಂದು ಬಯಸುತ್ತಾನೆ. ಹೀಗಾಗಿ ಹಣ ಗಳಿಸಲು ಹಾತೊರೆಯುತ್ತಾನೆ. ಹೀಗಾಗಿ ಬಡತನ ತಪ್ಪಿಸಲು ಬಯಸಿದರೆ ಕೆಲವು ವಸ್ತುಗಳನ್ನು ಮನೆಯಲ್ಲಿ ಇಡಬೇಕು. ಅವು ಯಾವುವು ಅಂತಾ ತಿಳಿದುಕೊಳ್ಳಿರಿ.

3 /5

ಮನೆಯಲ್ಲಿ ಕೆಲವು ವಸ್ತುಗಳನ್ನು ಇಟ್ಟುಕೊಂಡ ನಂತರ ಬಡತನ ಮನೆಗೆ ಬರುವುದಿಲ್ಲ. ಮೊದಲನೆಯದು ಗಣೇಶ ಮೂರ್ತಿ. ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಮನೆಯಲ್ಲಿ ಯಾವುದೇ ಹೊಸ ಕೆಲಸ  ಪ್ರಾರಂಭಿಸಿದಾಗ, ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ.

4 /5

ಗಣೇಶನನ್ನು ಎಲ್ಲಾ ಅಡೆತಡೆಗಳ ನಾಶಕ ಎಂದು ಪರಿಗಣಿಸಲಾಗುತ್ತದೆ. ಮೊದಲಿಗೆ ಗಣಪತಿಯನ್ನು ಪೂಜಿಸುವುದರಿಂದ ಯಾವ ಕೆಲಸಕ್ಕೂ ವಿಘ್ನ ಬರುವುದಿಲ್ಲ. ನೀವು ಮಾಡುವ ಕೆಲಸದಲ್ಲಿ ಲಾಭ ಮಾತ್ರ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಲ್ಲಿ ಕನಿಷ್ಠ ಒಂದು ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಕು.

5 /5

ಮನೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸುವಾಗ, ಅದರ ದೃಷ್ಟಿ ಮನೆಯ ಮುಖ್ಯ ದ್ವಾರದ ಮೇಲೆ ಬೀಳುವ ಸ್ಥಳದಲ್ಲಿರುವಂತೆ ವಿಶೇಷ ಕಾಳಜಿ ವಹಿಸಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಯು ಮನೆಗೆ ಬೇಗ ಬರುತ್ತಾಳೆ ಮತ್ತು ಮನೆಯಲ್ಲಿ ಹಣದ ಕೊರತೆಯೇ ಇರುವುದಿಲ್ಲ.