Domino's Pizzaದಲ್ಲಿ ಗಾಜಿನ ತುಂಡು ಪತ್ತೆ! ಫೋಟೋ ವೈರಲ್ ಸ್ಪಷ್ಟನೆ ಕೊಟ್ಟ ಕಂಪನಿ

Glass in Pizza: ಡೊಮಿನೊಸ್‌ ಪಿಜ್ಜಾದಲ್ಲಿ ಗಾಜಿನ ತುಂಡು ಪತ್ತೆಯಾಗಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದಂತೆ, ಕಂಪನಿಯು ಈ ಬಗ್ಗೆ ಸ್ಪಷ್ಟನೆ ನೀಡಿದೆ. 

Written by - Chetana Devarmani | Last Updated : Oct 11, 2022, 04:10 PM IST
  • ಡೊಮಿನೊಸ್‌ ಪಿಜ್ಜಾದಲ್ಲಿ ಗಾಜಿನ ತುಂಡು ಪತ್ತೆ
  • ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌
  • ಫೋಟೋ ವೈರಲ್ ಸ್ಪಷ್ಟನೆ ಕೊಟ್ಟ ಕಂಪನಿ
Domino's Pizzaದಲ್ಲಿ ಗಾಜಿನ ತುಂಡು ಪತ್ತೆ! ಫೋಟೋ ವೈರಲ್ ಸ್ಪಷ್ಟನೆ ಕೊಟ್ಟ ಕಂಪನಿ title=
ಡೊಮಿನೊಸ್‌ ಪಿಜ್ಜಾ

Glass in Domino's Pizza: ಆನ್‌ಲೈನ್ ಆಹಾರ ವಿತರಣಾ ವ್ಯವಸ್ಥೆಯಲ್ಲಿ ಪಿಜ್ಜಾ ಕೂಡ ಬಹಳ ಪ್ರಸಿದ್ಧವಾಗಿದೆ. ಪಿಜ್ಜಾ ಪ್ರಿಯರು ಮನೆಯಲ್ಲಿ ಕುಳಿತಾಗ, ಕಚೇರಿಯಲ್ಲಿ ಕೆಲಸ ಮಾಡುವಾಗ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಮ್ಮ ಬಯಕೆ ಈಡೇರಿಸಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅವರು ನಿರಾಶೆಯನ್ನು ಅನುಭವಿಸಬೇಕಾಗುತ್ತದೆ. ಇಂತಹದೊಂದು ಪ್ರಕರಣ ಮುಂಬೈನಲ್ಲಿಯೂ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಆನ್‌ಲೈನ್ ಆರ್ಡರ್ ಮೂಲಕ ಡೊಮಿನೋಸ್‌ನಿಂದ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಆದರೆ ಅದನ್ನು ತೆರೆದಾಗ ಅದರಲ್ಲಿ ಕೆಲವು ಗಾಜಿನ ತುಂಡುಗಳು ದೊರೆತಿವೆ. ಇದನ್ನು ಕಂಡು ಬೆಚ್ಚಿಬಿದ್ದಿದ್ದಾರೆ. 

ಇದನ್ನೂ ಓದಿ : Viral Video : 20 ವರ್ಷದ ಯುವತಿಯನ್ನು ಮದುವೆಯಾದ ಬಚ್ಚು ಬಾಯಿ ಮುದುಕನ ಖುಷಿ ನೋಡಿ..

ಆರ್ಡರ್ ಮಾಡಿದ ಪಿಜ್ಜಾದಲ್ಲಿ ಗಾಜಿನ ತುಂಡುಗಳು! 

ವಾಸ್ತವವಾಗಿ ಮಾಧ್ಯಮ ವರದಿಗಳ ಪ್ರಕಾರ, ಈ ಘಟನೆ ಮುಂಬೈನಲ್ಲಿ ನಡೆದಿದೆ. ಟ್ವಿಟರ್‌ನಲ್ಲಿ, ಅರುಣ್ ಕೊಲ್ಲೂರಿ ಎಂಬ ವ್ಯಕ್ತಿ ಪಿಜ್ಜಾ ಔಟ್‌ಲೆಟ್‌ನಿಂದ ಮಾರಾಟವಾದ ಪಿಜ್ಜಾದ ಚಿತ್ರವನ್ನು ಪೋಸ್ಟ್ ಮಾಡಿದ್ದು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಪಿಜ್ಜಾದಲ್ಲಿ ಗಾಜಿನ ತುಂಡುಗಳು ಕಂಡುಬಂದಿವೆ ಎಂದು ಹೇಳಿದ್ದಾರೆ. ಆದಾಗ್ಯೂ, ಅವರ ಟ್ವೀಟ್ ಔಟ್ಲೆಟ್ ಅಥವಾ ವಿತರಣೆಯ ದಿನಾಂಕವನ್ನು ಉಲ್ಲೇಖಿಸಿಲ್ಲ. ಈ ಟ್ವೀಟ್ ಮೂಲಕ ಅವರು ಮುಂಬೈ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

 

 

ಈ ಟ್ವೀಟ್‌ಗೆ ಮುಂಬೈ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ :

ಅಷ್ಟೇ ಅಲ್ಲ, ಮುಂಬೈ ಪೊಲೀಸರಿಗೆ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಟ್ಯಾಗ್ ಮಾಡಿ ಡೊಮಿನೋಸ್ ಪಿಜ್ಜಾದಲ್ಲಿ 2 ರಿಂದ 3 ಗಾಜಿನ ತುಂಡುಗಳು ಪತ್ತೆಯಾಗಿವೆ ಎಂದು ಬರೆದುಕೊಂಡಿದ್ದಾರೆ. ಇದರ ನಂತರ, ಮುಂಬೈ ಪೊಲೀಸರು ಮತ್ತೊಮ್ಮೆ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ, ಯಾವುದೇ ಕಾನೂನು ಪರಿಹಾರವನ್ನು ಪಡೆಯುವ ಮೊದಲು ಡೊಮಿನೋಸ್ ಕಸ್ಟಮರ್ ಕೇರ್‌ಗೆ ಕಂಪ್ಲೇಂಟ್‌ ಬರೆಯಲು ಸಲಹೆ ನೀಡಿದ್ದಾರೆ.

ಇದನ್ನೂ ಓದಿ : Viral Video: ನಾಗರ ಹಾವು ಮೊಟ್ಟೆ ಇಡುವ ವಿಡಿಯೋ ವೈರಲ್‌.!

ಸದ್ಯ ಈ ವಿಚಾರವಾಗಿ ಡೊಮಿನೋಸ್ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಅದರ ಗುಣಮಟ್ಟದ ತಂಡವು ಪಿಜ್ಜಾ ಔಟ್ಲೆಟ್ ಅನ್ನು ಪರಿಶೀಲಿಸಿದೆ. ಆದರೆ ಯಾವುದೇ ನ್ಯೂನತೆ ಕಂಡುಬಂದಿಲ್ಲ ಎಂದು ಅವರು ಹೇಳಿದರು. ಪ್ರಸ್ತುತ, ಪ್ರಕರಣದ ಸತ್ಯಾಸತ್ಯತೆಗಳನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಸಾಮಾಜಿಕ ಮಾಧ್ಯಮದ ಮೂಲಕ ಬಾಧಿತ ಗ್ರಾಹಕರನ್ನು ಸಂಪರ್ಕಿಸಿದೆ. ಇದರೊಂದಿಗೆ ಪ್ರಕರಣದ ತನಿಖೆಗೆ ಆದೇಶ ನೀಡಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News