Women Asia Cup 2022: 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ: ಲಂಕಾ ವಿರುದ್ಧ ಟೀಂ ಇಂಡಿಯಾದ ಅಬ್ಬರ ಹೇಗಿತ್ತು ಗೊತ್ತಾ!

ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ ಏಳನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ಆಟಗಾರ್ತಿಯರು ಅದ್ಭುತ ಆಟ ಪ್ರದರ್ಶಿಸಿ ಎಲ್ಲರ ಮನ ಗೆದ್ದರು ಎನ್ನಬಹುದು.

Written by - Bhavishya Shetty | Last Updated : Oct 15, 2022, 03:40 PM IST
    • ಭಾರತೀಯ ಮಹಿಳಾ ತಂಡ ಏಳನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ
    • ಅದ್ಭುತ ಆಟ ಪ್ರದರ್ಶಿಸಿ ಎಲ್ಲರ ಮನ ಗೆದ್ದ ಭಾರತದ ಮಹಿಳಾ ಆಟಗಾರ್ತಿಯರು
    • ಬಾಂಗ್ಲಾದೇಶದ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಫೈಟ್
Women Asia Cup 2022: 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ: ಲಂಕಾ ವಿರುದ್ಧ ಟೀಂ ಇಂಡಿಯಾದ ಅಬ್ಬರ ಹೇಗಿತ್ತು ಗೊತ್ತಾ! title=
Women Asia Cup

ಬಾಂಗ್ಲಾದೇಶದ ಸಿಲ್ಹೆಟ್‌ನಲ್ಲಿರುವ ಸಿಲ್ಹೆಟ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ನಲ್ಲಿ ಟೀಂ ಇಂಡಿಯಾದ ಮಹಿಳೆಯರ ತಂಡ ಭರ್ಜರಿ ಗೆಲುವು ಸಾಧಿಸಿ ಕಪ್ ತನ್ನದಾಗಿಸಿಕೊಂಡಿದೆ. ಏಳನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಆಗಿ ಭಾರತೀಯ ಮಹಿಳಾ ಮಣಿಗಳು ಹೊರಹೊಮ್ಮಿದ್ದಾರೆ.

ಶ್ರೀಲಂಕಾವನ್ನು ಸೋಲಿಸುವ ಮೂಲಕ ಭಾರತೀಯ ಮಹಿಳಾ ತಂಡ ಏಳನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿದೆ. ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ಆಟಗಾರ್ತಿಯರು ಅದ್ಭುತ ಆಟ ಪ್ರದರ್ಶಿಸಿ ಎಲ್ಲರ ಮನ ಗೆದ್ದರು ಎನ್ನಬಹುದು.

ಇದನ್ನೂ ಓದಿ: Team India: ಟೀಂ ಇಂಡಿಯಾದ ಗೆಲುವಿನ ನಾಗಾಲೋಟ: ಆಸ್ಟ್ರೇಲಿಯಾದ ಈ ದಾಖಲೆ ಉಡೀಸ್

ಶನಿವಾರ ಇಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 65 ರನ್‌ ಗಳಿಸಲಷ್ಟೇ ಶಕ್ತವಾಯಿತು. 66 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ ಅತ್ಯಂತ ಸುಲಭವಾಗಿ ಜಯ ಸಾಧಿಸಿತು. ಇನ್ನು ಭಾರತ ಪರ ಸ್ಮೃತಿ ಮಂದಾನ ಅಮೋಘ ಆಟ ಪ್ರದರ್ಶಿಸಿದ್ದಾರೆ.

ಭಾರತ ವಿರುದ್ಧದ ಮಹಿಳಾ ಏಷ್ಯಾಕಪ್‌ನ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಈ ಆಯ್ಕೆ ಅವರನ್ನು ಪೇಚಿಗೆ ಸಿಲುಕುವಂತೆ ಮಾಡಿತ್ತು. ಕಾರಣ ಭಾರತೀಯ ಬೌಲರ್‌ಗಳ ಆಕ್ರಮಣ. ಭಾರತದ ಪರ ರೇಣುಕಾ ಸಿಂಗ್ ಮೂರು ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ್ ರಾಣಾ ತಲಾ ಎರಡು ವಿಕೆಟ್ ಪಡೆದರು. ಶ್ರೀಲಂಕಾ ತಂಡದಿಂದ ಯಾವುದೇ ಮಹಿಳಾ ಆಟಗಾರ್ತಿ ಅದ್ಭುತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಅಂತಿಮ ಪಂದ್ಯಕ್ಕೆ ಶ್ರೀಲಂಕಾ ತಂಡದಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಭಾರತ ತಂಡದಲ್ಲಿ ರಾಧಾ ಯಾದವ್ ಬದಲಿಗೆ ದಯಾಲನ್ ಹೇಮಲತಾ ಮರಳಿದ್ದಾರೆ.

ಎರಡು ತಂಡಗಳು ಇಂತಿವೆ:

ಶ್ರೀಲಂಕಾ: ಚಾಮರಿ ಅಟಪಟ್ಟು, ಹರ್ಷಿತಾ ಸಮರವಿಕ್ರಮ, ಹಾಸಿನಿ ಪೆರೇರಾ, ಅನೌಷ್ಕಾ ಸಂಜೀವಿನಿ, ನೀಲಾಕ್ಷಿ ಡಿ'ಸಿಲ್ವಾ, ಕವಿಶಾ ದಿಲ್ಹಾರಿ, ಮಲ್ಶಾ ಸ್ನೇಹಾನಿ, ಓಷದಿ ರಣಸಿಂಘೆ, ಸುಗಂಧ ಕುಮಾರಿ, ಇನೋಕಾ ರಣವೀರ, ಅಚಿನಿ ಕುಲಸೂರ್ಯ

ಇದನ್ನೂ ಓದಿ: IND vs PAK: 15 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ತೆರಳಲಿದೆ ಟೀಂ ಇಂಡಿಯಾ! ಬಿಸಿಸಿಐ ನೀಡಿದೆಯೇ ಗ್ರೀನ್ ಸಿಗ್ನಲ್?

ಭಾರತ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಸ್ನೇಹ ರಾಣಾ, ರೇಣುಕಾ ಠಾಕೂರ್, ದಯಾಲನ್ ಹೇಮಲತಾ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್‌ವಾಡ್

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News