ಪೆಟ್ರೋಲ್, ಡೀಸೆಲ್​ ಬೆಲೆ ರೂ. 2.50 ಇಳಿಸಿದ ಕೇಂದ್ರ; ಈ ಕ್ಷಣದಿಂದಲೇ ಪರಿಷ್ಕೃತ ದರ ಜಾರಿ

ತೈಲ ಬೆಲೆ ಇಳಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಪೆಟ್ರೋಲಿಯಂ ಮೇಲಿನ ಅಬಕಾರಿ ಸುಂಕ ರೂ. 2.50 ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

Last Updated : Oct 4, 2018, 05:06 PM IST
ಪೆಟ್ರೋಲ್, ಡೀಸೆಲ್​ ಬೆಲೆ ರೂ. 2.50 ಇಳಿಸಿದ ಕೇಂದ್ರ; ಈ ಕ್ಷಣದಿಂದಲೇ ಪರಿಷ್ಕೃತ ದರ ಜಾರಿ title=

ನವದೆಹಲಿ: ದೇಶದ ಜನತೆಗೆ ಇದೀಗ ಸಂತಸದ ಸುದ್ದಿ. ತೈಲ ಬೆಲೆ ಗಗನಕ್ಕೇರಿದ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಕೇಂದ್ರ ಸರ್ಕಾರ ಇದೀಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ಗೆ 2.50 ರೂ. ಇಳಿಕೆ ಮಾಡಿದೆ. 

ಕೇಂದ್ರ ಸಚಿವರಾದ ಅರುಣ್​ ಜೇಟ್ಲಿ, ಧರ್ಮೇಂದ್ರ ಪ್ರಧಾನ್​ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಉಪಸ್ಥಿತಿಯಲ್ಲಿ ಈ ಸಂಬಂಧ ತುರ್ತು ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್​ ಮತ್ತು ಡೀಸೆಲ್​ಗಳ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ಇಳಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. 

ಅಷ್ಟೇ ಅಲ್ಲದೆ, ಕೇಂದ್ರ ಸರ್ಕಾರ ರೂ. 2.50 ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳೂ ಇಂಧನ ಸುಂಕವನ್ನು ಕಡಿಮೆ ಮಾಡುವಂತೆ ಕೇಂದ್ರ ಮನವಿ ಮಾಡಿದೆ. ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸರ್ಕಾರ 2 ರೂ. ಕಡಿಮೆ ಮಾಡಿತ್ತು. ಈ ಮೂಲಕ ಒಟ್ಟಾರೆ ರೂ. 4.50 ರೂ ಪೆಟ್ರೋಲ್​ ಮತ್ತು ಡೀಸೆಲ್​ಗೆ ಕಡಿಮೆಯಾದಂತಾಗಿದೆ. 

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ದಾಖಲೆಯ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಚ್ಛಾತೈಲ ದರ ದಾಖಲೆ ಏರಿಕೆಯಾಗಿದೆ. ಅಮೆರಿಕ ಬಡ್ಡಿದರವನ್ನು ಶೇ.3.2ರಷ್ಟು ಏರಿಕೆ ಮಾಡಿದೆ ಎಂದು ಜೇಟ್ಲಿ ಬೆಲೆ ಏರಿಕೆಯ ಕಾರಣವನ್ನು ತಿಳಿಸಿದರು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ ಸಭೆಯ ನಿರ್ಧಾರಗಳ ಬಗ್ಗೆ ತಿಳಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲ ದರ ದಾಖಲೆಯ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಚ್ಛಾತೈಲ ದರ ದಾಖಲೆ ಏರಿಕೆಯಾಗಿದೆ. ಅಲ್ಲದೆ, ಕಚ್ಛಾತೈಲ ದರ ಏರಿಕೆಯಿಂದ ಜಾಗತಿಕ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ತೈಲ ಬೆಲೆ ಇಳಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಪೆಟ್ರೋಲಿಯಂ ಮೇಲಿನ ಅಬಕಾರಿ ಸುಂಕ ರೂ. 2.50 ಇಳಿಕೆ ಮಾಡಲು ನಿರ್ಧರಿಸಿದ್ದೇವೆ" ಎಂದರು.

ಮುಂದುವರೆದು ಮಾತನಾಡಿದ ಅವರು, ತಕ್ಷಣದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು, ಬೆಲೆ ಇಳಿಕೆಯಿಂದ ಕೇಂದ್ರ ಸರ್ಕಾರಕ್ಕೆ 25 ಸಾವಿರ ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಅರುಣ್ ಜೇಟ್ಲಿ ಹೇಳಿದರು.

Trending News