ನವದೆಹಲಿ: ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 73.77ರೂ. ಕುಸಿತ ಕಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತೀಯ ರೂಪಾಯಿ ಮೌಲ್ಯ ಕುಸಿತ ಕಂಡಿಲ್ಲ. ಆದರೆ, ಕುಸಿಯುವಂತೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
#Breaking: Rupee slips to 73.77
It's not breaking - it's Broken.#Rupee
— Rahul Gandhi (@RahulGandhi) October 4, 2018
ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಈ ಇಳಿಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಕಂಗಾಲಾಗುವಂತೆ. ಷೇರು ಮಾರುಕಟ್ಟೆ 604 ಅಂಕಗಳ ಕುಸಿತದೊಂದಿಗೆ ಆರಂಭವಾಗಿದ್ದು, ದಿನದ ವಹಿವಾಟು ಆರಂಭವಾದಾಗ 73.34 ಆಗಿದ್ದ ರುಪಾಯಿ ಮೌಲ್ಯ ಕೆಲವೇ ಹೊತ್ತಿನಲ್ಲಿ 73.77ಕ್ಕೆ ತಲುಪಿದೆ.
ಭಾರತದ ರುಉಪಾಯಿ ಮೌಲ್ಯ ಕುಸಿಯುತ್ತಿರುವ ಬಗ್ಗೆ ಪ್ರಧಾನಿ ಮೌನವಾಗಿರುವುದನ್ನು ಬುಧವಾರ ಪ್ರಶ್ನಿಸಿದ್ದ ರಾಹುಲ್ ಗಾಂಧಿ, ಪ್ರಧಾನಿ ಮೌನ ಮುರಿಯುವವರೆಗೂ ಇಂಧನ ಮತ್ತು ತೈಲ ಬೆಲೆ ಏರಿಕೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಲೇ ಇರುತ್ತಾರೆ ಎಂದು ಗುಡುಗಿದ್ದರು.