Guinness Book Of World Records: ಯಾವುದೇ ಕೆಲಸವನ್ನು ಮಾಡುವ ಮೊದಲು ಅದರಲ್ಲಿಯೂ ವಿಶೇಷವಾಗಿ ಭಾರತೀಯರು ಖಂಡಿತವಾಗಿಯೂ ಆ ಕೆಲಸ ಆರಂಭಿಸಲು ಯಾವ ದಿನ ಉತ್ತಮ ದಿನ ಎಂಬುದನ್ನುಯೋಚಿಸುತ್ತಾರೆ. ಕೆಲವರು ಸೋಮವಾರ, ಮತ್ತಿತರರು ಗುರುವಾರ ಅಥವಾ ಇನ್ನಾವುದೇ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಿ, ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ. ಆದರೆ ಇತ್ತೀಚಿಗೆ ವಿಶ್ವದ ಅತಿ ದೊಡ್ಡ ದಾಖಲೆ ಪುಸ್ತಕವು ವಾರದ ಅತ್ಯಂತ ಕೆಟ್ಟ ದಿನ ಯಾವುದು ಎಂಬುದನ್ನು ದಾಖಲಿಸಿಕೊಂಡಿದೆ.
ವಾರದ ಕೆಟ್ಟ ದಿನ ಎಂದರೆ ಅದು ಸೋಮವಾರ
ಇಲ್ಲಿ ವಿಶೇಷತೆ ಎಂದರೆ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರದಂದು ಟ್ವೀಟ್ ಮಾಡುವ ಮೂಲಕ ಜನರನ್ನು ಆಶ್ಚರ್ಯಗೊಳಿಸಿದ್ದು, ವಾರದ ಕೆಟ್ಟ ದಿನ ಯಾವುದು ಎಂದು ಹೇಳಿದೆ. ಈ ಟ್ವೀಟ್ ನಲ್ಲಿ ಸೋಮವಾರದ ದಿನಕ್ಕೆ ವಾರದ ಅತ್ಯಂತ ಕೆಟ್ಟ ದಿನದ ದಾಖಲೆಯನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇವೆ ಎಂದು ಹೇಳಿದೆ. ಇದಾದ ಬಳಿಕ ಏನಾಯಿತು ಎಂಬ ಗೊಂದಲಕ್ಕೆ ಜನರು ಒಳಗಾಗಿದ್ದಾರೆ.
ಇದನ್ನೂ ಓದಿ-Viral Video: ಆತ್ಮಹತ್ಯೆ ಮಾಡಿಕೊಳ್ಳಲು ಎತ್ತರ ಕಟ್ಟಡದ ಕಿಟಕಿ ಏರಿ ಕುಳಿತ ಯುವತಿ...ನಂತರ ನಡೆದಿದ್ದೇನು ನೀವೇ ನೋಡಿ
ಗಿನ್ನೆಸ್ ಪುಸ್ತಕನಲ್ಲಿ ಏಕೆ ಹೀಗೆ ಹೇಳಲಾಗಿದೆ?
ವಾಸ್ತವದಲ್ಲಿ ಸೋಮವಾರದ ಸರದಿ ಶನಿವಾರ ಮತ್ತು ಭಾನುವಾರದ ನಂತರ ಬರುತ್ತದೆ, ಅಂದರೆ ಇದು ಎರಡು ರಜಾದಿನಗಳ ನಂತರ ಬರುತ್ತದೆ. ಈ ದಿನದಂದು ಜನರು ಕಚೇರಿ ಅಥವಾ ಇತರ ಕೆಲಸದ ಸ್ಥಳಗಳಿಗೆ ಹೋಗಲು ಸೋಮಾರಿತನವನ್ನು ಅನುಭವಿಸುತ್ತಾರೆ. ಅಷ್ಟೇ ಅಲ್ಲ, ಸೋಶಿಯಲ್ ಮೀಡಿಯಾದಲ್ಲಿ ಸೋಮವಾರ ಅತ್ಯಂತ ಕೆಟ್ಟ ದಿನ ಎಂದು ಅನೇಕ ಬಾರಿ ಜನರು ಬರೆಯುತ್ತಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಗಿನ್ನಿಸ್ ಬುಕ್ ಈ ರೀತಿ ಬರೆದಿದೆ.
we're officially giving monday the record of the worst day of the week
— Guinness World Records (@GWR) October 17, 2022
ಇದನ್ನೂ ಓದಿ-Smoking Bird Viral Video: ಬಾಯಿಯಿಂದ ಹೊಗೆ ಬಿಡುವ ಇಂತಹ ಪಕ್ಷಿಯನ್ನು ಎಲ್ಲಾದರೂ ನೋಡಿದ್ದೀರಾ?
ಗಿನ್ನಿಸ್ ಬುಕ್ ನ ಈ ಟ್ವೀಟ್ ಗೆ ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ
ಈ ಟ್ವೀಟ್ ಪ್ರಕಟಗೊಂಡ ನಂತರ, ವಿಶ್ವಾದ್ಯಂತ ಟ್ವಿಟರ್ ಬಳಕೆದಾರರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಗಿನ್ನೆಸ್ ಪುಸ್ತಕ ಅದು ಯಾವ ದಿನ ಎಂದು ನಿಖರವಾಗಿ ಹೇಳಿದೆ ಎಂದು ಕೆಲವರು ಹೇಳುತ್ತಿದ್ದರೆ, ಉಳಿದವರು ಗಿನ್ನಿಸ್ ಪುಸ್ತಕವು ಸಂಪೂರ್ಣವಾಗಿ ಜನರ ನಾಡಿಮಿಡಿತವನ್ನು ಅರಿತಿದೆ ಎಂದು ಕೆಲವರು ಬರೆಯುತ್ತಿದ್ದಾರೆ. ಆದರೆ, ಗಿನ್ನೆಸ್ ಬುಕ್ ಈ ಟ್ವೀಟ್ ಅನ್ನು ಕೇವಲ ತಮಾಷೆಗಾಗಿ ಮಾಡಿದ್ದು, ಜನರು ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.