ವಿವಾಹಿತರಿಗೆ ಪ್ರತಿ ತಿಂಗಳು ಸಿಗುವುದು 10000 ರೂ. ಪಿಂಚಣಿ!

Atal Pension Yojana New Rules: ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು.  

Written by - Ranjitha R K | Last Updated : Oct 20, 2022, 02:11 PM IST
  • ಅಟಲ್ ಪಿಂಚಣಿ ಯೋಜನೆ ಎಂದರೇನು?
  • ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?
  • ಏನು ಹೇಳುತ್ತದೆ ಹೊಸ ನಿಯಮ
ವಿವಾಹಿತರಿಗೆ ಪ್ರತಿ ತಿಂಗಳು ಸಿಗುವುದು  10000 ರೂ. ಪಿಂಚಣಿ! title=
Atal Pension Yojana New Rules (file photo)

Atal Pension Yojana New Rules: ಭವಿಷ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗದಂತೆ ಇಂದೇ ಸರಿಯಾದ ಯೋಜನೆಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.  ಹೀಗೆ ಹೂಡಿಕೆ ಮಾಡುವಾಗ ಸುರಕ್ಷಿತ ಯೋಜನೆಯನ್ನು ತಮ್ಮದಾಗಿಸಿಕೊಳ್ಳುವುದು ಬಹಳ ಮುಖ್ಯ. ಅಂಥಹ ಸುರಕ್ಷಿತ ಯೋಜನೆಗಳಲ್ಲಿ ಒಂದು  'ಅಟಲ್ ಪಿಂಚಣಿ ಯೋಜನೆ'. ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ಬದಲಾವಣೆಗಳನ್ನು ಸಹ ಮಾಡಲಾಗಿದೆ. ಈ ಯೋಜನೆಯಲ್ಲಿ ಪತಿ-ಪತ್ನಿ ಇಬ್ಬರ ಹೆಸರಿನಲ್ಲಿ ಪ್ರತ್ಯೇಕ ಖಾತೆಗಳನ್ನು ತೆರೆದು ಪ್ರತಿ ತಿಂಗಳು 10,000 ರೂಪಾಯಿ ಪಿಂಚಣಿ ಪಡೆಯಬಹುದು.

ಅಟಲ್ ಪಿಂಚಣಿ ಯೋಜನೆ ಎಂದರೇನು?
ಅಟಲ್ ಪಿಂಚಣಿ ಯೋಜನೆ ಸರ್ಕಾರದ ಯೋಜನೆಯಾಗಿದೆ. ಇದರಲ್ಲಿ, ಮಾಡುವ  ಹೂಡಿಕೆ ಮತ್ತು ಹೂಡಿಕೆ ಮಾಡುವವರ ವಯಸ್ಸನ್ನು ಅವಲಂಬಿಸಿ, ಎಷ್ಟು ಪಿಂಚಣಿ ಸಿಗುತ್ತದೆ ಎಂದು ನಿರ್ಧರಿಸಲಾಗುತ್ತದೆ. ಯೋಜನೆಯಡಿ, ಕನಿಷ್ಟ 1000 ರೂ ಮತ್ತು ಗರಿಷ್ಠ 5000 ರೂ ಮಾಸಿಕ ಪಿಂಚಣಿ ಪಡೆಯಬಹುದು. ಅಲ್ಲದೆ, 2000, 3000 ಮತ್ತು 4000 ರೂಪಾಯಿ ಪಿಂಚಣಿಯನ್ನೂ ಪಡೆಯಬಹುದು. ಇದು ಸಂಪೂರ್ಣ ಸುರಕ್ಷಿತ ಹೂಡಿಕೆಯಾಗಿದೆ.

ಇದನ್ನೂ ಓದಿ : Arecanut Today Price: ರಾಜ್ಯದ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೀಗಿದೆ ನೋಡಿ

ಯಾರು ಹೂಡಿಕೆ ಮಾಡಬಹುದು? :
ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ, ಆರಂಭವಾಯಿತು. ಆಗ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಈ ಯೋಜನೆಯನ್ನು  ಆರಂಭಿಸಲಾಗಿತ್ತು. ನಂತರ ಈ ನಿಯಮವನ್ನು ಬದಲಾಯಿಸಲಾಯಿತು. ಬದಲಾದ ನಿಯಮದ ಅನ್ವಯ, 18 ರಿಂದ 40 ವರ್ಷದವರೆಗಿನ ಭಾರತೀಯ ನಾಗರಿಕರು, ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಯೋಜನೆಯಲ್ಲಿ, 60 ವರ್ಷಗಳ ನಂತರ ಪಿಂಚಣಿ ಪ್ರಾರಂಭವಾಗುತ್ತದೆ. ಆದರೆ ಅಕ್ಟೋಬರ್ 1 ರಿಂದ, ಮತ್ತೆ ಈ ಯೋಜನೆಯ ನಿಯಮ ಬದಲಾಯಿಸಲಾಗಿದೆ.

 ಏನಿದು  ಹೊಸ ನಿಯಮ ? : 
ಹೊಸ ಬದಲಾವಣೆಯ ಅಡಿಯಲ್ಲಿ, ಆದಾಯ ತೆರಿಗೆ ಕಾಯ್ದೆಯಡಿ ಆದಾಯ ತೆರಿಗೆ ಪಾವತಿಸುವ ಯಾವುದೇ ವ್ಯಕ್ತಿ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ತೆರಿಗೆ ಪಾವತಿದಾರರು ಅಕ್ಟೋಬರ್ 1 ರ ನಂತರ ಅಟಲ್ ಪಿಂಚಣಿ ಯೋಜನೆಗಾಗಿ ಖಾತೆಯನ್ನು ತೆರೆದರೆ, ಅವರ ಖಾತೆಯನ್ನು ಮುಚ್ಚಲಾಗುತ್ತದೆ.

ಇದನ್ನೂ ಓದಿ : Apple iPhone 13 ಮೇಲೆ ಭಾರೀ ರಿಯಾಯಿತಿ! ಚಾನ್ಸ್‌ ಮಿಸ್‌ ಮಾಡಿಕೊಳ್ಳಬೇಡಿ

10,000 ಪಿಂಚಣಿ ಪಡೆಯುವುದು ಹೇಗೆ ? :
- ಈ ಯೋಜನೆಯ ಲಾಭವನ್ನು 39 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿ ಪಡೆಯಬಹುದು. 
-30 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಗಂಡ ಮತ್ತು ಹೆಂಡತಿಯಾಗಿದ್ದರೆ, ಅವರು APY ಖಾತೆಗೆ ಪ್ರತಿ ತಿಂಗಳು 577 ರೂ. ಪಾವತಿಸಬೇಕು. 
-ಗಂಡ ಮತ್ತು ಹೆಂಡತಿಯ ವಯಸ್ಸು 35 ವರ್ಷವಾಗಿದ್ದರೆ, ಅವರು ಪ್ರತಿ ತಿಂಗಳು ತಮ್ಮ ಎಪಿವೈ ಖಾತೆಯಲ್ಲಿ 902 ರೂಪಾಯಿಗಳನ್ನು ಹಾಕಬೇಕಾಗುತ್ತದೆ.
- ಖಾತರಿಪಡಿಸಿದ ಮಾಸಿಕ ಪಿಂಚಣಿ ಜೊತೆಗೆ, ಸಂಗಾತಿಗಳಲ್ಲಿ ಒಬ್ಬರು ಮರಣಹೊಂದಿದರೆ, ಬದುಕಿರುವ ಸಂಗಾತಿಯು ಪ್ರತಿ ತಿಂಗಳು ಪಿಂಚಣಿಯೊಂದಿಗೆ 8.5 ಲಕ್ಷ ರೂ. ಸಿಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News