ಬೆಂಗಳೂರು: ಅಮಾನತು ಶಿಕ್ಷೆಗೆ ಗುರಿಯಾಗಿ ಹೃದಯಾಘಾತದಿಂದ ಕೆ.ಆರ್.ಪುರ ಠಾಣೆ ಇನ್ಸಪೆಕ್ಟರ್ ನಂದೀಶ್ ಧಾರುಣ ಸಾವನ್ನಪ್ಪಿದ್ದರು. ಮೃತ ನಂದೀಶ್ ಮನೆಗೆ ಭೇಟಿ ನೀಡುವ ವೇಳೆ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಮಾತನಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಇನ್ಸ್ಪೆಕ್ಟರ್ ಹುದ್ದೆಗೆ 70-80 ಲಕ್ಷ ವಿಡಿಯೋ ಬಗ್ಗೆ ಎಂಟಿಬಿ ನಾಗರಾಜ್ ಫಸ್ಟ್ ರಿಯಾಕ್ಷನ್ ನೀಡಿದ್ದಾರೆ. ‘ನಾನು ಹೇಳಿರೋದೇ ಬೇರೆ.. ಆ ವಿಡಿಯೋದಲ್ಲಿರೋದೇ ಬೇರೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಅಂತಾ ಲಂಚದ ವಿಡಿಯೋ ಬಗ್ಗೆ ಖುದ್ದು ಸಚಿವರೇ ಸ್ಪಷ್ಟನೇ ಕೊಟ್ಟಿದ್ದಾರೆ.
ಇದನ್ನೂ ಓದಿ: "ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ"
‘ನಂದೀಶ್ ಸಾವಿನ ಬಳಿಕ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಹೋಗಿದ್ದೆ. ನಂದೀಶ್ ಸಾವಿನಿಂದ ನನ್ನ ಮನಸ್ಸಿಗೆ ಬಹಳ ನೋವಾಗಿತ್ತು. ಹೀಗಾಗಿ ಅವರ ಪತ್ನಿ, ಮಕ್ಕಳು ಮತ್ತು ತಂದೆ-ತಾಯಿಗೆ ಧೈರ್ಯ ತುಂಬಲು ಹೋಗಿದ್ದೆ. ಆಗ ಮಾರ್ಗದಲ್ಲಿ ಕಾರ್ಯಕರ್ತರು ಮಾತನಾಡಿದ್ದನ್ನು ಕೇಳಿಸಿಕೊಂಡಿದ್ದೆ. ಇನ್ಸ್ಪೆಕ್ಟರ್ ಹುದ್ದೆಗೆ 70 ಲಕ್ಷ, 80 ಲಕ್ಷ ಖರ್ಚು ಮಾಡಿಬಿಟ್ಟಿದ್ದಾನೆ. ಅಮಾನತಾದ ಬಳಿಕ ಆ ದುಡ್ಡು ಹೇಗಪ್ಪ ವಾಪಸ್ ತೆಗೆದುಕೊಳ್ಳಬೇಕು ಅನ್ನೋ ಟೆನ್ಶನ್ ನಂದೀಶ್‍ಗೆ ಇತ್ತು. ಹೀಗಾಗಿ ಆತ ಹೃದಯಾಘಾತದಿಂದ ಸಾವನ್ನಪ್ಪಿರಬೇಕು ಅಂತಾ ಕಾರ್ಯಕರ್ತರು ಮಾತನಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ನಾನು ಯಾಕೆ ಟೆನ್ಶನ್ ಮಾಡ್ಕೋಬೇಕಾಗಿತ್ತು. 70-80 ಲಕ್ಷ ಕೊಟ್ಟು ಬಂದು ಇಲ್ಲಿ ಏನು ಮಾಡಲು ಆಗುತ್ತೆ? ಯಾಕ್ರಿ ಹೀಗೆ ಮಾಡಿಕೊಂಡ್ರು’ ಅಂತಾ ಅಷ್ಟೇ ಹೇಳಿದ್ದೆ.
‘ಯಾರಿಗೆ ಯಾರು ಲಂಚ ಕೊಟ್ರು ಅನ್ನೋದು ನಮಗೆ ಗೊತ್ತಿಲ್ಲ. ನಾನು ಹೇಳಿದ್ದೇ ಒಂದು, ಸುದ್ದಿ ಆಗಿದ್ದೇ ಮತ್ತೊಂದು. ಇಂತಹ ಸಣ್ಣ ವಿಷಯಕ್ಕೆ ಆಯುಕ್ತರು ಅಮಾನತು ಮಾಡಿದ್ದು ತಪ್ಪು. ಮೃತರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿಗೆ ಕೋರಲಾಗಿದೆ’ ಅಂತಾ ಎಂಟಿಬಿ ಇದೇ ವೇಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ: Raichur: ದೇವರ ದರ್ಶನ ವಿಚಾರಕ್ಕೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಿರಿಕ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ