ರಾಯಚೂರು: ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಕಿರಿಕ್ ಆಗಿದೆ. ದೇವರ ದರ್ಶನ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರು ಕ್ಯಾತೆ ತೆಗೆದಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ದಾಂಬ್ಳೆ ನಾಯಕ್ ತಾಂಡಾದಲ್ಲಿ ನಡೆದಿದೆ.
ದೇವರ ದರ್ಶನ ವಿಚಾರವಾಗಿ ನಡೆದ ಜಗಳದಲ್ಲಿ ಜೆಡಿಎಸ್ ಮಹಿಳಾ ನಾಯಕಿ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಕಟ್ಟೆ ದೇವರ ದರ್ಶನಕ್ಕೆ ತೆರಳಿದ್ದ ದೇವದುರ್ಗ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಭವನೀಯ ಅಭ್ಯರ್ಥಿ ಕರಿಯಮ್ಮ ಆ್ಯಂಡ್ ಟೀಂ ಜೊತೆಗೆ ಬಿಜೆಪಿ ಕಾರ್ಯಕರ್ತರು ಕ್ಯಾತೆ ತೆಗೆದಿದ್ದಾರೆ.
ಲಂಬಾಣಿ ಭಾಷೆಯಲ್ಲಿ ಅವಾಚ್ಯ ಶಬ್ದದಿಂದ ನಿಂದಿಸಿ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು ಆರೋಪ ಮಾಡಲಾಗಿದೆ. ಗ್ರಾಮ ಪಂಚಾಯತ್ ಸದಸ್ಯ ಮತ್ತು ಬಿಜೆಪಿ ಕಾರ್ಯಕರ್ತ ವೆಂಕಟೇಶ ಮತ್ತು ತಂಡದ ವಿರುದ್ಧ ಹಲ್ಲೆಯ ಆರೋಪ ಮಾಡಲಾಗಿದೆ. ಈ ಘಟನೆ ಖಂಡಿಸಿ ಕರಿಯಮ್ಮ & ಕುಟುಂಬಸ್ಥರು ಧರಣಿ ನಡೆಸಿದ್ದಾರೆ. ಕರಿಯಮ್ಮ ಕುಟುಂಬಸ್ಥರಿಗೆ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ʼಪುನೀತ್ ಉಪಗ್ರಹ ವರ್ಕ್ ಸ್ಟೇಷನ್ʼಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಆರೋಪ
ಘಟನೆ ಬಗ್ಗೆ ಮಾತನಾಡಿರುವ ಜೆಡಿಎಸ್ ಸಂಭವನೀಯ ಅಭ್ಯರ್ಥಿ ಕರಿಯಮ್ಮ, ನಾವು ಇಂದು ದಾಂಬ್ಳೆ ತಾಂಡದ ಕಟ್ಟೆ ದೇವರ ದರ್ಶನಕ್ಕೆ ಬಂದಿದ್ದೇವು. ನಮ್ಮ ಕುಟುಂಬಸ್ಥರು ಮತ್ತು ನಮ್ಮ ಜೆಡಿಎಸ್ ಕಾರ್ಯಕರ್ತರು ದೇವರ ದರ್ಶನಕ್ಕೆ ಬಂದಾಗ ಬಿಜೆಪಿ ಕಾರ್ಯಕರ್ತರು ಸುಖಾಸುಮ್ಮನೆ ಕ್ಯಾತೆ ತೆಗೆದು ಜಗಳ ಮಾಡಿದ್ದಾರೆ. ನಮ್ಮ ಗಾಡಿಗೆ ಜೆಡಿಎಸ್ ಬಾವುಟ ಇರುವುದನ್ನು ಕಂಡು ನಮಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ’ ಅಂತಾ ಹೇಳಿದ್ದಾರೆ.
ಗ್ರಾಪಂ ಸದಸ್ಯ ವೆಂಕಟೇಶ ಎಂಬ ವ್ಯಕ್ತಿ ನಮ್ಮನ್ನು ನಿಂದಿಸಿದ್ದಾರೆ. ಏಕಾಏಕಿ ಬಂದು ನೀವು ಇಲ್ಲಿಗೆ ಯಾಕೆ ಬಂದ್ರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ನಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ನಮ್ಮ ಗಾಡಿಗೆ ಸಹ ಹಾನಿ ಮಾಡಿದ್ದಾರೆ. ಕೆಲ ಯುವಕರಿಂದ ಕಾರಲ್ಲಿದ್ದ ನನ್ನ ಮಗಳ ಕೈ ಹಿಡಿದು ದೌರ್ಜನ್ಯ ನಡೆದಿದೆ’ ಅಂತಾ ಆರೋಪಿಸಿದ್ದಾರೆ.
ಇದನ್ನೂ ಓದಿ: "ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಮತ್ತೊಮ್ಮೆ ರುಜುವಾತಾಗಿದೆ"
ಬಿಜೆಪಿಯವರು ಮಾತ್ರ ಇಲ್ಲಿಗೆ ಬರಬೇಕು ಎಂದು ನಮಗೆ ಧಮ್ಕಿ ಹಾಕಲಾಗಿದೆ. ಜೆಡಿಎಸ್ ಕಾರ್ಯಕರ್ತರಾದ ಶಿವು ಮತ್ತು ರಾಜು ಎಂಬುವವರ ಮೇಲೆ ಹಲ್ಲೆಯಾಗಿದೆ. ನನ್ನ ಮಗಳ ಮೊಬೈಲ್ ಕಿತ್ತುಕೊಂಡು ಕೈಹಿಡಿದು ಎಳೆದಾಡಿದ್ದಾರೆ. ಈ ಘಟನೆಗೆ ಸ್ಥಳೀಯ ಶಾಸಕ ಶಿವನಗೌಡ ನಾಯ್ಕ್ ಕುಮ್ಮಕ್ಕು ನೀಡಿದ್ದಾರೆ. ಭಂಜಾರ ಸಮಾವೇಶ ಸಹಿಸಲಾರದೆ ಈ ರೀತಿಯಾಗಿ ದೌರ್ಜನ್ಯ ನಡೆಸಲಾಗಿದೆ ಎಂದು ಕರಿಯಮ್ಮ ಆರೋಪಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ