"ಒಬ್ಬ ಭಾರತೀಯನ ಅತ್ಯುತ್ತಮ T20 ಇನ್ನಿಂಗ್ಸ್”: ಟೀಂ ಇಂಡಿಯಾದ ಈ ಆಟಗಾರನನ್ನು ಕೊಂಡಾಡಿದ ಗಂಭೀರ್

ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ನ ಮಿಡ್-ಇನ್ನಿಂಗ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಗಂಭೀರ್ ಕಾಮೆಂಟರಿ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ ಸೂರ್ಯ ನಿರ್ಮಿಸಿದ T20I ಇನ್ನಿಂಗ್ಸ್‌ಗಿಂತ ಉತ್ತಮವಾದ T20I ಇನ್ನಿಂಗ್ಸ್ ಅನ್ನು ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.

Written by - Bhavishya Shetty | Last Updated : Oct 31, 2022, 09:55 AM IST
    • ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಉತ್ತಮ ಸ್ಕೋರ್ ಗಳಿಸಲು ಸಹಕರಿಸಿದರು
    • ಮಧ್ಯಮ ಕ್ರಮಾಂಕದ ಬ್ಯಾಟರ್ 40 ಎಸೆತಗಳಲ್ಲಿ 68 ರನ್ ಗಳಿಸಿದರು
    • ಗೌತಮ್ ಗಂಭೀರ್ 'ಭಾರತೀಯರ ಅತ್ಯುತ್ತಮ T20 ಇನ್ನಿಂಗ್ಸ್' ಎಂದು ಬಣ್ಣಿಸಿದ್ದಾರೆ
"ಒಬ್ಬ ಭಾರತೀಯನ ಅತ್ಯುತ್ತಮ T20 ಇನ್ನಿಂಗ್ಸ್”: ಟೀಂ ಇಂಡಿಯಾದ ಈ ಆಟಗಾರನನ್ನು ಕೊಂಡಾಡಿದ ಗಂಭೀರ್ title=
Gautam Gambhir

ಭಾನುವಾರ ನಡೆದ ಗ್ರೂಪ್ 2 ಟಿ 20 ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗದ ದಾಳಿಯು ಭಾರತದ ಅಗ್ರ ಕ್ರಮಾಂಕವನ್ನು ಕೆರಳಿಸಿದ್ದರಿಂದ ಎಲ್ಲಾ ಭರವಸೆ ಕಳೆದುಹೋಗಿದೆ. ಭಾರತವು ಮೊದಲಿಗೆಯೇ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರಂತಹ ಆರಂಭಿಕರನ್ನು ಕಳೆದುಕೊಂಡಿತು. ಆದರೆ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಗೆ ಉತ್ತಮ ಸ್ಕೋರ್ ಗಳಿಸಲು ಸಹಕರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್ 40 ಎಸೆತಗಳಲ್ಲಿ 68 ರನ್ ಗಳಿಸಿದರು. ದಿನೇಶ್ ಕಾರ್ತಿಕ್ ಅವರೊಂದಿಗೆ 6 ನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟವನ್ನು ನಡೆಸಿದರು.

ಇದನ್ನೂ ಓದಿ: INDvsSA T20 World Cup: ಟೀಂ ಇಂಡಿಯಾ ಎದುರು ಗೆದ್ದು ಬೀಗಿದ ಹರಿಣಗಳು: ಭಾರತಕ್ಕೆ ಸೋಲು

ಇವರ ಈ ಅದ್ಭುತ ಆಟವನ್ನು ಕಂಡ ಸಾಕ್ಷಿಯಾದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ 'ಭಾರತೀಯರ ಅತ್ಯುತ್ತಮ T20 ಇನ್ನಿಂಗ್ಸ್' ಎಂದು ಬಣ್ಣಿಸಿದ್ದಾರೆ.

ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ನ ಮಿಡ್-ಇನ್ನಿಂಗ್ಸ್ ಕಾರ್ಯಕ್ರಮದ ಸಂದರ್ಭದಲ್ಲಿ ಗಂಭೀರ್ ಕಾಮೆಂಟರಿ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ ಸೂರ್ಯ ನಿರ್ಮಿಸಿದ T20I ಇನ್ನಿಂಗ್ಸ್‌ಗಿಂತ ಉತ್ತಮವಾದ T20I ಇನ್ನಿಂಗ್ಸ್ ಅನ್ನು ತಾನು ಎಂದಿಗೂ ನೋಡಿಲ್ಲ ಎಂದು ಹೇಳಿದ್ದಾರೆ.

"ಇದು ಬಹುಶಃ ಭಾರತೀಯರ ಅತ್ಯುತ್ತಮ T20 ಇನ್ನಿಂಗ್ಸ್ ಆಗಿದೆ. ವಿಕೆಟ್‌ಗಳು ಉರುಳಿದರೂ ಸಹ ಆ ಪಿಚ್‌ನಲ್ಲಿ ಸಾಧಿಸಲು ಪ್ರಯತ್ನಿಸಿದರು” ಎಂದು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಒಟ್ಟಿಗೆ ಇದ್ದ ಸಮಯದಲ್ಲಿ ಸೂರ್ಯಕುಮಾರ್ ಜೊತೆಗೆ ಆಡಿದ ಭಾರತದ ಮಾಜಿ ಆರಂಭಿಕ ಆಟಗಾರ, ಅಂತಹ ಭವ್ಯವಾದ ಹೊಗಳಿಕೆಯ ಹಿಂದಿನ ಕಾರಣವನ್ನು ವಿವರಿಸಿದರು.

"ನೋಡಿ, ಈ ಹೊಗಳಿಕೆಯ ಹಿಂದೆ ನನ್ನದೊಂದು ಕಾರಣವಿದೆ. ಇಂಗ್ಲೆಂಡ್ ನಲ್ಲಿ ಇತರರು ಆಟವಾಡಲು ಸಂಕಷ್ಟ ಪಡುತ್ತಿದ್ದಾಗ ಈತ ಅವಿಸ್ಮರಣೀಯವಾಗಿ ಆಟವಾಡಿದ್ದಾನೆ. ವೆಸ್ಟ್ ಇಂಡೀಸ್ ವಿರುದ್ಧವೂ ಅದ್ಭುತ ಪ್ರದರ್ಶನ ನೀಡಿದ್ದಾನೆ. ಅವನ ವಯಸ್ಸು 30. ಅವನ ಕೈಯಲ್ಲಿ ಹೆಚ್ಚು ಸಮಯವಿಲ್ಲ. ಅವನನ್ನು ನಂ.3 ನಲ್ಲಿ ಬ್ಯಾಟ್ ಮಾಡಿ, ಅವನ ಫಾರ್ಮ್ ಅನ್ನು ಹೆಚ್ಚು ಮಾಡಿ. ವಿರಾಟ್ ಕೊಹ್ಲಿ ಈಗಾಗಲೆ ತುಂಬಾ ಅನುಭವ ಪಡೆದಿದ್ದಾರೆ. ಅವರು ಇನ್ನೂ ಪರಿಸ್ಥಿತಿಗೆ ಅನುಗುಣವಾಗಿ ನಂ.4 ಗೆ ಬಂದು ಬ್ಯಾಟಿಂಗ್ ಮಾಡಬಹುದು. ನನಗೆ ವೈಯಕ್ತಿಕವಾಗಿ ಸೂರ್ಯ ಇಲ್ಲಿಂದ ವಿಶ್ವಕಪ್ ವರೆಗೆ ನಂ.3 ನಲ್ಲಿ ಬ್ಯಾಟಿಂಗ್ ಮಾಡಬೇಕು ಮತ್ತು ಫಲಿತಾಂಶಗಳು ಹೇಗೆ ಹೋಗುತ್ತವೆ ಎಂಬುದನ್ನು ನೋಡಿ" ಎಂದು ಗಂಭೀರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Yuzvendra Chahal: ಭಾರತ-ಆಫ್ರಿಕಾ ಪಂದ್ಯದ ವೇಳೆ ಅಂಪೈರ್ ಮೇಲೆ ‘ಹಲ್ಲೆ’ ನಡೆಸಿದ ಚಹಾಲ್! ವಿಡಿಯೋ ನೋಡಿ

ಸೂರ್ಯಕುಮಾರ್ ಅವರ 68 ರನ್‌ಗಳ ನೆರವಿನಿಂದ ಭಾರತ ತಂಡ 20 ಓವರ್‌ಗಳಲ್ಲಿ 133 ರನ್‌ಗಳ ಗೌರವಾನ್ವಿತ ಮೊತ್ತವನ್ನು ತಲುಪಿದೆತು. ಆದರೆ ಡೇವಿಡ್ ಮಿಲ್ಲರ್ (59) ಮತ್ತು ಏಡೆನ್ ಮಾರ್ಕ್ರಾಮ್ (52) ಗರಿಷ್ಠ ಸ್ಕೋರಿಂಗ್ ನಿಂದಾಗಿ ಸೌತ್ ಆಫ್ರಿಕಾ ಗೆಲುವು ಸಾಧಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News