NRI: ಗಣರಾಜ್ಯೋತ್ಸವದಂದು 2012ರ ಎನ್ಆರ್ಐ ಅಪಹರಣ ಪ್ರಕರಣದ ಅಪರಾಧಿಗಳ ಬಿಡುಗಡೆ

NRI News: ಮಲಿಕ್ ಮತ್ತು ಈ ಐದು ಮಂದಿ ಸೇರಿ, 2012ರ ಏಪ್ರಿಲ್‌ನಲ್ಲಿ ಚಂಡೀಗಢದ ಸೆಕ್ಟರ್ 18 ನಲ್ಲಿರುವ ಮನೆಯಿಂದ ಕೆನಡಾದ ನವನೀತ್ ಸಿಂಗ್ ಚಾಥಾ ಎಂಬ ಎನ್‌ಆರ್‌ಐ ಅನ್ನು ಅಪಹರಿಸಿದ್ದರು. ಬಳಿಕ ಕುರುಕ್ಷೇತ್ರದ ಫಾರ್ಮ್‌ಹೌಸ್‌ನಲ್ಲಿ ಬಂಧಿಸಿ, ಕೆನಡಾದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಹಣದ ಬೇಡಿಕೆಯಿಡುವಂತೆ ಒತ್ತಾಯಿಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಪೊಲೀಸರು ಚಾಥಾ ಅವರನ್ನು ರಕ್ಷಿಸಿತು.

Written by - Bhavishya Shetty | Last Updated : Jan 28, 2023, 10:17 PM IST
    • 2012ರ ಕುಖ್ಯಾತ ಎನ್‌ಆರ್‌ಐ ಅಪಹರಣ ಪ್ರಕರಣದ ಅಪರಾಧಿ ಪರ್ದೀಪ್ ಮಲಿಕ್
    • ಐವರನ್ನು ಬುರೈಲ್‌ನ ಮಾಡೆಲ್ ಜೈಲಿನಿಂದ 74 ನೇ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡಲಾಗಿದೆ
    • ಕೆನಡಾದ ನವನೀತ್ ಸಿಂಗ್ ಚಾಥಾ ಎಂಬ ಎನ್‌ಆರ್‌ಐ ಅನ್ನು ಅಪಹರಿಸಿದ್ದರು
NRI: ಗಣರಾಜ್ಯೋತ್ಸವದಂದು 2012ರ ಎನ್ಆರ್ಐ ಅಪಹರಣ ಪ್ರಕರಣದ ಅಪರಾಧಿಗಳ ಬಿಡುಗಡೆ title=
NRI Kidnapping Case 2012

NRI News: 2012ರ ಕುಖ್ಯಾತ ಎನ್‌ಆರ್‌ಐ ಅಪಹರಣ ಪ್ರಕರಣದ ಅಪರಾಧಿ ಪರ್ದೀಪ್ ಮಲಿಕ್ (42) ಸೇರಿದಂತೆ ಐವರನ್ನು ಬುರೈಲ್‌ನ ಮಾಡೆಲ್ ಜೈಲಿನಿಂದ 74 ನೇ ಗಣರಾಜ್ಯೋತ್ಸವ ದಿನದಂದು ಬಿಡುಗಡೆ ಮಾಡಲಾಗಿದೆ. ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಶಿಕ್ಷೆಯನ್ನು ರದ್ದುಪಡಿಸಿದ ನಂತರ ಇತರ ನಾಲ್ವರು ಅಪರಾಧಿಗಳಾದ ನೀರಜ್ (2018 ರ ಕೊಲೆ ಯತ್ನ ಪ್ರಕರಣದಲ್ಲಿ ಅಪರಾಧಿ), ಸುಖದೇವ್ ಸಿಂಗ್ (2011 ರ ಕಳ್ಳತನ ಪ್ರಕರಣ, ಫೋರ್ಜರಿ, ವಂಚನೆ ಪ್ರಕರಣದ ಅಪರಾಧಿ), ರೂಪಿಂದರ್ ಕೌರ್ (2015 ರ ಹಿಂಬಾಲಿಸುವುದು, ಕಿರುಕುಳ ಮತ್ತು ಕ್ರಿಮಿನಲ್ ಪಿತೂರಿಯ ಪ್ರಕರಣದ ಅಪರಾಧಿ) ಮತ್ತು ರೀಂಟು (2018 ರ ಸ್ನ್ಯಾಚಿಂಗ್ ಪ್ರಕರಣದ ಅಪರಾಧಿ)ವನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Budget 2023: ಈ ಬಾರಿಯ ಬಜೆಟ್ ಮೇಲಿದೆ NRIಗಳ ಕಣ್ಣು: ಈ ಬೇಡಿಕೆಗಳು ಈಡೇರುತ್ತಾ?

ಮಲಿಕ್ ಮತ್ತು ಈ ಐದು ಮಂದಿ ಸೇರಿ, 2012ರ ಏಪ್ರಿಲ್‌ನಲ್ಲಿ ಚಂಡೀಗಢದ ಸೆಕ್ಟರ್ 18 ನಲ್ಲಿರುವ ಮನೆಯಿಂದ ಕೆನಡಾದ ನವನೀತ್ ಸಿಂಗ್ ಚಾಥಾ ಎಂಬ ಎನ್‌ಆರ್‌ಐ ಅನ್ನು ಅಪಹರಿಸಿದ್ದರು. ಬಳಿಕ ಕುರುಕ್ಷೇತ್ರದ ಫಾರ್ಮ್‌ಹೌಸ್‌ನಲ್ಲಿ ಬಂಧಿಸಿ, ಕೆನಡಾದಲ್ಲಿರುವ ತನ್ನ ಸಹೋದರನಿಗೆ ಕರೆ ಮಾಡಿ ಹಣದ ಬೇಡಿಕೆಯಿಡುವಂತೆ ಒತ್ತಾಯಿಸಿದ್ದರು. ಬಳಿಕ ಕೇವಲ 24 ಗಂಟೆಯಲ್ಲಿ ಪೊಲೀಸರು ಚಾಥಾ ಅವರನ್ನು ರಕ್ಷಿಸಿತು.

ಚಾಥಾ ಅವರು ಕೆನಡಾದ ಬ್ರಾಂಪ್ಟನ್‌ನಲ್ಲಿ ಅಂಗಡಿಯೊಂದನ್ನು ನಡೆಸುತ್ತಿದ್ದರು. ಸೆಕ್ಟರ್ 18 ರಲ್ಲಿ ಅವರ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದರು. ಅಪರಾಧ ವಿಭಾಗದ ತಂಡವು ಅಪಹರಣಕಾರರಿಂದ 12.5 ಲಕ್ಷ ರೂ., 300 ಕೆನಡಾದ ಡಾಲರ್, ಹೋಂಡಾ ಅಕಾರ್ಡ್ ಕಾರನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಇನ್ಮುಂದೆ ಸುಲಭವಾಗಿ ಸಿಗಲಿದೆ US Visa: ಬಿಡೆನ್ ಸರ್ಕಾರದಿಂದ ಭಾರತೀಯರಿಗೆ ಗುಡ್ ನ್ಯೂಸ್

ಸೆಪ್ಟೆಂಬರ್ 2016 ರಲ್ಲಿ ಸೆಕ್ಟರ್ 43ರ ಜಿಲ್ಲಾ ನ್ಯಾಯಾಲಯಗಳು, ಮಲಿಕ್ ಮತ್ತು ಇತರರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಜೂನ್ 2020ರಲ್ಲಿ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಪರಿವರ್ತಿಸಿತು. ಸದ್ಯ ಐವರು ತಮ್ಮ ಶಿಕ್ಷೆಯ ಶೇ.75 ರಷ್ಟು ಭಾಗವನ್ನು ಪೂರೈಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News