ಭಾರತಕ್ಕೆ ಮತ್ತೆ ಮರಳುತ್ತಿದ್ದಾರೆ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರು! ಕಾರಣ ಮಾತ್ರ ಶಾಕಿಂಗ್..

NRI News: ಸ್ಟಾರ್ಟಪ್ ವಲಯದ ಪ್ರಾಬಲ್ಯ, ಹೂಡಿಕೆ ಅವಕಾಶಗಳು ಮತ್ತು ಆರ್ಥಿಕ ಸ್ಥಿರತೆಯಿಂದಾಗಿ, ವಿದೇಶದಲ್ಲಿ ವಾಸಿಸುವ ಹೆಚ್ಚಿನ ಎನ್‌’ಆರ್‌’ಐಗಳು ಈಗ ನಿವೃತ್ತಿಯ ನಂತರ ದೇಶವನ್ನು ತೊರೆದು ಭಾರತದಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ.

Written by - Bhavishya Shetty | Last Updated : Sep 7, 2023, 01:54 PM IST
    • ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ.
    • ಎನ್‌’ಆರ್‌’ಐಗಳು ಈಗ ನಿವೃತ್ತಿಯ ನಂತರ ವಿದೇಶವನ್ನು ತೊರೆದು ಭಾರತದಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ
    • ಐದು ದೇಶಗಳಲ್ಲಿ ವಾಸಿಸುವ 60 ಪ್ರತಿಶತ ಭಾರತೀಯರು ಈ ರೀತಿ ಹೇಳಿಕೊಂಡಿದ್ದಾರೆ.
ಭಾರತಕ್ಕೆ ಮತ್ತೆ ಮರಳುತ್ತಿದ್ದಾರೆ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರು! ಕಾರಣ ಮಾತ್ರ ಶಾಕಿಂಗ್.. title=
NRI news

NRI news: ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ. ವಿಶ್ವ ಬ್ಯಾಂಕ್‌’ನಿಂದ ಹಿಡಿದು ಐಎಂಎಫ್‌’ವರೆಗೆ ವಿವಿಧ ಸಂಸ್ಥೆಗಳು ದೇಶದ ಪ್ರಗತಿಯನ್ನು ಶ್ಲಾಘಿಸಿದ್ದು, ಈ ಬೆಳವಣಿಗೆ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸ್ಟಾರ್ಟಪ್ ವಲಯದ ಪ್ರಾಬಲ್ಯ, ಹೂಡಿಕೆ ಅವಕಾಶಗಳು ಮತ್ತು ಆರ್ಥಿಕ ಸ್ಥಿರತೆಯಿಂದಾಗಿ, ವಿದೇಶದಲ್ಲಿ ವಾಸಿಸುವ ಹೆಚ್ಚಿನ ಎನ್‌’ಆರ್‌’ಐಗಳು ಈಗ ನಿವೃತ್ತಿಯ ನಂತರ ದೇಶವನ್ನು ತೊರೆದು ಭಾರತದಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ. ಈ ಬಗ್ಗೆ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ, ಐದು ದೇಶಗಳಲ್ಲಿ ವಾಸಿಸುವ 60 ಪ್ರತಿಶತ ಭಾರತೀಯರು ಈ ರೀತಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಭಾರತೀಯ ಸಿನಿರಂಗದಲ್ಲಿ 4000 ಕೋಟಿ ರೂ, ಸಂಭಾವನೆ ಪಡೆದ ನಟಿ ಯಾರು ಗೊತ್ತಾ? ಐಶ್ವರ್ಯಾ, ದೀಪಿಕಾ ಅಲ್ಲ!

ಭಾರತದ ಆರ್ಥಿಕತೆಯು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಕೊರೊನಾ ಸಾಂಕ್ರಾಮಿಕದ ನಂತರ, ಭಾರತವು ವೇಗವಾಗಿ ಚಲಿಸುತ್ತಿದೆ. ದೇಶದ ನಿವಾಸಿಗಳು ಮತ್ತು ಎನ್‌ಆರ್‌ಐಗಳಿಗೆ ಆರ್ಥಿಕ ಸ್ಥಿರತೆಯನ್ನು ನಿರ್ಮಿಸುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಹೆಚ್ಚಿನ ಜನರು ನಿವೃತ್ತಿಯ ನಂತರ ಭಾರತದಲ್ಲಿ ನೆಲೆಸಲು ಯೋಜಿಸುತ್ತಿದ್ದಾರಂತೆ.

ಎನ್‌ ಆರ್‌ ಐಗಳ ಮೇಲೆ ಕೇಂದ್ರೀಕೃತವಾಗಿರುವ ಫಿನ್‌’ಟೆಕ್ ಪ್ಲಾಟ್‌ಫಾರ್ಮ್ ಎಸ್‌ ಬಿ ಎನ್‌ ಆರ್‌ ಐ ಈ ಸಮೀಕ್ಷೆಯನ್ನು ನಡೆಸಿದೆ.

SBNRI ಸಮೀಕ್ಷೆಯು ನಿರ್ದಿಷ್ಟವಾಗಿ ಐದು ದೇಶಗಳಲ್ಲಿ ನೆಲೆಸಿರುವ ಭಾರತೀಯರು ನಿವೃತ್ತಿಯ ನಂತರ ಭಾರತಕ್ಕೆ ಮರಳಲು ಯೋಚಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಈ ದೇಶಗಳಲ್ಲಿ ಆಸ್ಟ್ರೇಲಿಯಾ, ಕೆನಡಾ, ಯುಎಸ್, ಯುಕೆ ಮತ್ತು ಸಿಂಗಾಪುರ ಸೇರಿವೆ, ಅಲ್ಲಿ ಕನಿಷ್ಠ 60 ಪ್ರತಿಶತ NRI ಗಳು ತಮ್ಮ ನಿವೃತ್ತಿ ಯೋಜನೆಗಳ ಭಾಗವಾಗಿ ಭಾರತಕ್ಕೆ ಮರಳಲು ಯೋಜಿಸುತ್ತಿದ್ದಾರೆ.

ಅಂಕಿಅಂಶಗಳನ್ನು ಪ್ರಸ್ತುತಪಡಿಸಿರುವ ಫಿನ್‌ ಟೆಕ್ ಪ್ಲಾಟ್‌ಫಾರ್ಮ್ ತನ್ನ ವರದಿಯಲ್ಲಿ ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲಿ ವಾಸಿಸುತ್ತಿರುವ ಶೇಕಡಾ 80 ರಷ್ಟು ಅನಿವಾಸಿ ಭಾರತೀಯರು, ಬ್ರಿಟನ್‌’ನಲ್ಲಿ (ಯುಕೆ) ವಾಸಿಸುತ್ತಿರುವ ಶೇಕಡಾ 70 ರಷ್ಟು ಎನ್‌’ಆರ್‌’ಐಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ (ಯುಎಸ್‌ಎ) ವಾಸಿಸುವ ಶೇಕಡಾ 75 ರಷ್ಟು ಎನ್‌ಆರ್‌ಐಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಉದಯ ನಿಧಿ ಸ್ಟಾಲಿನ್ ಹೇಳಿಕೆಗೆ ಕಾಂಗ್ರೆಸ್ ನಿಲುವು ಸ್ಪಷ್ಟಪಡಿಸಲಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಭಾರತದ ಉದಯೋನ್ಮುಖ ಆರ್ಥಿಕ ದೃಶ್ಯ ಮತ್ತು ಹೆಚ್ಚು ಆಕರ್ಷಕ ಹೂಡಿಕೆಯ ಅವಕಾಶಗಳು ಸಾಗರೋತ್ತರ ಭಾರತೀಯರಿಗೆ, ವಿಶೇಷವಾಗಿ ಆಸ್ಟ್ರೇಲಿಯಾ, ಸಿಂಗಾಪುರ್, ಯುಎಸ್ಎ, ಯುಕೆ ಮತ್ತು ಕೆನಡಾದಂತಹ ದೇಶಗಳಲ್ಲಿ ವಾಸಿಸುವ ಎನ್‌ಆರ್‌ಐಗಳನ್ನು ಆಕರ್ಷಿಸಿವೆ ಎಂದು ಸಮೀಕ್ಷೆ ತೋರಿಸುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News