NRI news: ಜಗತ್ತಿನ 6 ಗಲ್ಫ್ ರಾಷ್ಟ್ರಗಳಲ್ಲಿ 88.8 ಲಕ್ಷ ಭಾರತೀಯರೇ… ಅದರಲ್ಲೂ ಹೆಚ್ಚು ವಲಸಿಗರಿರೋದು ಈ ದೇಶದಲ್ಲಿ!

Indian expatriates in six Gulf countries: ನಾಗ್ಪುರ ಮೂಲದ ಅಭಯ್ ಕೋಲಾರ್ಕರ್ ಅವರು ಆರ್‌’ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯವು ಈ ವಿವರಗಳನ್ನು ಬಹಿರಂಗಪಡಿಸಿದೆ.

Written by - Bhavishya Shetty | Last Updated : Aug 3, 2023, 01:21 PM IST
    • ಶೇ.66ರಷ್ಟು ಅನಿವಾಸಿ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ
    • ರಾಜ್ಯದಲ್ಲಿ ಅನಿವಾಸಿ ಭಾರತೀಯರ ಸಂಖ್ಯೆ 12.8 ಲಕ್ಷ ಇದ್ದಾರೆ
    • 88.8 ಲಕ್ಷ ಮಂದಿಯಲ್ಲಿ ಹೆಚ್ಚಿನವರು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂಗಿದ್ದಾರೆ
NRI news: ಜಗತ್ತಿನ 6 ಗಲ್ಫ್ ರಾಷ್ಟ್ರಗಳಲ್ಲಿ 88.8 ಲಕ್ಷ ಭಾರತೀಯರೇ… ಅದರಲ್ಲೂ ಹೆಚ್ಚು ವಲಸಿಗರಿರೋದು ಈ ದೇಶದಲ್ಲಿ! title=
Indian expatriates in six Gulf countries

NRI news: ಶೇ.66ರಷ್ಟು ಅನಿವಾಸಿ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಇತ್ತೀಚೆಗೆ ಬಹಿರಂಗಪಡಿಸಿದೆ. 210 ದೇಶಗಳಲ್ಲಿ ಒಟ್ಟು 1.34 ಕೋಟಿ ವಲಸಿಗರಿದ್ದು, ಅದರಲ್ಲಿ 88.8 ಲಕ್ಷ ಮಂದಿ ಆರು ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ ಎಂದು ವಿವರಿಸಿದೆ. 

ಇದನ್ನೂ ಓದಿ: Kolkata: 21 ದಿನದ ನವಜಾತ ಶಿಶುವನ್ನು 4 ಲಕ್ಷಕ್ಕೆ ಮಾರಿದ ತಾಯಿ..!

ನಾಗ್ಪುರ ಮೂಲದ ಅಭಯ್ ಕೋಲಾರ್ಕರ್ ಅವರು ಆರ್‌’ಟಿಐ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯವು ಈ ವಿವರಗಳನ್ನು ಬಹಿರಂಗಪಡಿಸಿದೆ. 88.8 ಲಕ್ಷ ಮಂದಿಯಲ್ಲಿ ಹೆಚ್ಚಿನವರು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂಗಿದ್ದಾರೆ ಎಂದು ಹೇಳಲಾಗಿದೆ. ಈ ದೇಶದಲ್ಲಿ ಒಟ್ಟು 34.1 ಲಕ್ಷ ಜನರು ವಾಸಿಸುತ್ತಿದ್ದಾರೆ.

ಸೌದಿ ಅರೇಬಿಯಾ (25.9 ಲಕ್ಷ), ಕುವೈತ್ (10.2 ಲಕ್ಷ), ಓಮನ್ (7.7 ಲಕ್ಷ), ಕತಾರ್ (7.4 ಲಕ್ಷ) ಮತ್ತು ಬಹ್ರೇನ್ (3.3 ಲಕ್ಷ) ನಂತರದ ಸ್ಥಾನದಲ್ಲಿವೆ. ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರ ಸಂಖ್ಯೆಗಿಂತ ಪಿಐಒ (Person of Indian Origin) ಗಳ ಸಂಖ್ಯೆ ಹೆಚ್ಚಿರುವುದು ಗಮನಾರ್ಹ.

ಇದನ್ನೂ ಓದಿ: ರೈಲು ಡಿಕ್ಕಿಯಾಗಿ ಸತ್ತ ಕೋತಿಗೆ ಹಿಂದೂ ವಿಧಿಯಂತೆ ಅಂತಿಮ ಸಂಸ್ಕಾರ! ಸಮಾಧಿ ಸ್ಥಳದಲ್ಲಿ ಮಂದಿರ ನಿರ್ಮಿಸಲು ಸಿದ್ಧತೆ

ಪಿಐಒಗಳ ಪೈಕಿ ಅಮೆರಿಕದ ನಂತರ ಮಲೇಷ್ಯಾ (27.6 ಲಕ್ಷ), ಮ್ಯಾನ್ಮಾರ್ (20 ಲಕ್ಷ), ಶ್ರೀಲಂಕಾ (16 ಲಕ್ಷ) ಮತ್ತು ಕೆನಡಾ (15.1 ಲಕ್ಷ) ಇವೆ. ಅಮೆರಿಕದ ನಂತರ ಅತಿ ಹೆಚ್ಚು ಅನಿವಾಸಿ ಭಾರತೀಯರನ್ನು ಹೊಂದಿರುವ ದೇಶಗಳ ವಿಷಯಕ್ಕೆ ಬಂದರೆ ಯುಕೆ (3.5 ಲಕ್ಷ), ಆಸ್ಟ್ರೇಲಿಯಾ (2.4 ಲಕ್ಷ), ಮಲೇಷ್ಯಾ (2.2 ಲಕ್ಷ), ಕೆನಡಾ (1.7 ಲಕ್ಷ) ಇದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News