Big Tech Layoffs 2022: ಕೆಲಸದಿಂದ ವಜಾಗೊಂಡ ಸಾವಿರಾರು ಜನ: NRIಗಳ ಪಾಡು ಮುಂದೇನು?

Big Tech Layoffs 2022: ಹೆಚ್ಚಿನ ಸಂಬಳ, ವಿದೇಶಿ ಉದ್ಯೋಗ ಹೀಗೆ ನಾನಾ ಕನಸುಗಳನ್ನು ಹೊತ್ತು ಭಾರತ ಬಿಟ್ಟು ಹೋದವರು ಈಗ ಏನೂ ಮಾಡಲಾಗದೆ ಒದ್ದಾಡುತ್ತಿದ್ದಾರೆ. ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲಸದ ವೀಸಾಗಳಿಗಾಗಿ ಪ್ರಾಯೋಜಕತ್ವ ನೀಡುವವರು ಯಾರೂ ಇಲ್ಲದೆ, ವಿದೇಶದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ.

Written by - Bhavishya Shetty | Last Updated : Nov 24, 2022, 04:42 PM IST
    • ಟೆಕ್ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ
    • ವಿಶೇಷವಾಗಿ ಅನಿವಾಸಿ ಭಾರತೀಯರ ಮೇಲೆ ಭಾರೀ ಪರಿಣಾಮ
    • ಉದ್ಯೋಗಿಗಳಲ್ಲಿ ಉದ್ಯೋಗ ಅಭದ್ರತೆಯ ಭೀತಿ ಕಾಡುವಂತೆ ಮಾಡಿದೆ
Big Tech Layoffs 2022: ಕೆಲಸದಿಂದ ವಜಾಗೊಂಡ ಸಾವಿರಾರು ಜನ: NRIಗಳ ಪಾಡು ಮುಂದೇನು?
Job Layoff

Big Tech Layoffs 2022: ಟ್ವಿಟರ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಮೆಟಾದಂತಹ ಟೆಕ್ ದೈತ್ಯ ಕಂಪನಿಗಳು ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ. ಒಂದು ಕಾಲದಲ್ಲಿ ಕೆಲಸ ಮಾಡಲು ಅತ್ಯಂತ ಅಪೇಕ್ಷಣೀಯ ಸ್ಥಳವಾಗಿದ್ದ ಕಂಪನಿಗಳು ಈಗ ಉದ್ಯೋಗಿಗಳಲ್ಲಿ ಉದ್ಯೋಗ ಅಭದ್ರತೆಯ ಭೀತಿ ಕಾಡುವಂತೆ ಮಾಡಿದೆ. ಈ ದೊಡ್ಡ-ಪ್ರಮಾಣದ ವಜಾಗೊಳಿಸುವಿಕೆಯಿಂದ ಹೆಚ್ಚು ಪರಿಣಾಮ ಬೀರುವವರಲ್ಲಿ ಭಾರತೀಯ ತಂತ್ರಜ್ಞಾನ ವೃತ್ತಿಪರರು, ವಿಶೇಷವಾಗಿ ಅನಿವಾಸಿ ಭಾರತೀಯರು.

ಹೆಚ್ಚಿನ ಸಂಬಳ, ವಿದೇಶಿ ಉದ್ಯೋಗ ಹೀಗೆ ನಾನಾ ಕನಸುಗಳನ್ನು ಹೊತ್ತು ಭಾರತ ಬಿಟ್ಟು ಹೋದವರು ಈಗ ಏನೂ ಮಾಡಲಾಗದೆ ಒದ್ದಾಡುತ್ತಿದ್ದಾರೆ. ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲಸದ ವೀಸಾಗಳಿಗಾಗಿ ಪ್ರಾಯೋಜಕತ್ವ ನೀಡುವವರು ಯಾರೂ ಇಲ್ಲದೆ, ವಿದೇಶದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ. ಸದ್ಯ ಜನರನ್ನು ಕೆಲಸದಿಂದ ತೆಗೆಯುತ್ತಿರುವ ದೇಶಗಳಲ್ಲಿ ಪ್ರಮುಖವಾಗಿರುವುದು ಯುನೈಟೆಡ್ ಸ್ಟೇಟ್ಸ್.

ಇದನ್ನೂ ಓದಿ: NRIಗಳಿಗಾಗಿ ICICI ಪರಿಚರಿಯಿಸಿದೆ ನೂತನ ಉತ್ಪನ್ನ: ಪ್ರಮುಖ ವೈಶಿಷ್ಟ್ಯಗಳನ್ನು ಪರಿಶೀಲಿಸಿ

ತಮ್ಮ ಶಾಶ್ವತ ನಿವಾಸ ಮತ್ತು ಕೆಲಸದ ಪರವಾನಿಗೆಗಳನ್ನು ಪಡೆದವರ ಮೇಲೆ ಕೊಂಚ ಪರಿಣಾಮ ಬೀರದಿದ್ದರೂ, ಇತರರಿಗೆ ಬಹಳಷ್ಟು ಸಮಸ್ಯೆ ಹುಟ್ಟುಹಾಕಿದೆ. ಗ್ರೀನ್ ಕಾರ್ಡ್‌ಗಳಿಗಾಗಿ ದೀರ್ಘಕಾಲದಿಂದ ಕಾಯುತ್ತಿರುವ H-ವೀಸಾ ಮತ್ತು ವಲಸೆಯೇತರ ಕೆಲಸದ ಪರವಾನಗಿ ವೀಸಾ ಹೊಂದಿರುವ ಜನರ ಭವಿಷ್ಯವು ಪ್ರಶ್ನಾರ್ಹವಾಗಿದೆ.

ಏಳು ಲಕ್ಷಕ್ಕೂ ಹೆಚ್ಚು ಅರ್ಜಿದಾರರು ತಮ್ಮ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ಇದು ಸುಲಭದ ಪ್ರಕ್ರಿಯೆಯಾಗಿ ಕಾಣುತ್ತಿಲ್ಲ. ಹೆಚ್ಚಿನವರು ದಶಕಗಳ ಹಿಂದೆ ತಮ್ಮ ವೃತ್ತಿಜೀವನದ ಆರಂಭಕ್ಕೆಂದು ಅಮೆರಿಕಾಗೆ ವಲಸೆ ಬಂದವರು. ಕೆಲಸ, ಸಾಮಾಜಿಕ ಮತ್ತು ಜೀವನಶೈಲಿ ಎಂದು ಅವರು ಈಗಾಗಲೆ ಅಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.

ಭಾರತಕ್ಕೆ ಹಿಂತಿರುಗುವುದು ಅವರ ಮುಂದಿರುವ ಒಂದು ಮಾರ್ಗವಾಗಿರಬಹುದು. ಆದರೆ ಹೀಗೆ ಮಾಡಿದರೆ ಅವರು ಖಂಡಿತವಾಗಿ ಈ ಎರಡು ಅಂಶಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಬಹುದು. ಮೊದಲನೆಯದಾಗಿ, ಹಲವು ವರ್ಷಗಳಿಂದ ಭಾರತದಿಂದ ದೂರವಿದ್ದು, ಈಗ ಭಾರತೀಯ ಜೀವನ ವಿಧಾನಕ್ಕೆ ಹೊಂದಿಕೊಳ್ಳಬೇಕಾಗಿರುವುದು. ಮುಂದೆ, ಭಾರತೀಯ ಕಂಪನಿಗಳು ಅವರಿಗೆ ಉದ್ಯೋಗಗಳನ್ನು ನೀಡಲು ಸಿದ್ಧರಿದ್ದರೂ ಸಹ, ಭಾರತೀಯ ಕಂಪನಿಗಳಲ್ಲಿ ಸಂಭಾವ್ಯ ವೇತನವು US ನಲ್ಲಿ ಅವರು ಪಡೆಯುವದಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇರುತ್ತದೆ. ಅಮೆರಿಕದಲ್ಲಿ ಅತಿ ಹೆಚ್ಚು ವೇತನ ಪಡೆಯುವವರಲ್ಲಿ ಭಾರತೀಯರೇ ಇದ್ದಾರೆ ಎಂಬುದು ಗಮನಾರ್ಹ. ವೇತನದಲ್ಲಿನ ಬದಲಾವಣೆಯು ಅವರು ಒಗ್ಗಿಕೊಂಡಿರುವ ಒಟ್ಟಾರೆ ಉನ್ನತ ಜೀವನಮಟ್ಟವನ್ನು ಮತ್ತಷ್ಟು ರಾಜಿ ಮಾಡುವಂತೆ ಮಾಡಬಹುದು.

US ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಭಾರತೀಯ ಉದ್ಯೋಗಿಗಳಿಗೆ ಅತ್ಯಂತ ಸಾಮಾನ್ಯವಾದ ವೀಸಾ H1-B ಆಗಿದೆ. ಈ ವೀಸಾದಲ್ಲಿರುವವರು ಅನಿಶ್ಚಿತ ಸ್ಥಿತಿಯಲ್ಲಿದ್ದಾರೆ. ಈ ವೀಸಾ ನಿಯಮದಡಿಯಲ್ಲಿ, ಉದ್ಯೋಗಿಗಳನ್ನು ವಜಾಗೊಳಿಸಿದ 60 ದಿನಗಳೊಳಗೆ ಮತ್ತೊಬ್ಬ ಪ್ರಾಯೋಜಕರನ್ನು ಪಡೆಯದಿದ್ದರೆ ಅವರನ್ನು ಗಡಿಪಾರು ಮಾಡಲಾಗುತ್ತದೆ. ಈ ಬಿಗಿಯಾದ ಗಡುವಿನೊಳಗೆ ಹೊಸ ಉದ್ಯೋಗವನ್ನು ಹುಡುಕುವುದು ಮತ್ತು ಅಗತ್ಯ ಕಾರ್ಯವಿಧಾನಗಳು ಮತ್ತು ದಾಖಲೆಗಳನ್ನು ಪೂರ್ಣಗೊಳಿಸುವುದು ಪ್ರಸ್ತುತ ಪರಿಸರದಲ್ಲಿ ಒಂದು ದೊಡ್ಡ ಸವಾಲಾಗಿದೆ.

ಸಿಂಗಾಪುರ, ಕೆನಡಾ ಅಥವಾ ಯುರೋಪಿಯನ್ ದೇಶಗಳಂತಹ ಇತರ ದೇಶಗಳಿಗೆ ವಲಸೆ ಹೋಗುವುದು ಅವರ ಮುಂದಿರುವ ಒಂದು ಆಯ್ಕೆಯಾಗಿರಬಹುದು. ಈ ದೇಶಗಳಲ್ಲಿ ನುರಿತ ಭಾರತೀಯ ತಂತ್ರಜ್ಞರಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ಆದರೆ, ವಾಸ್ತವವೆಂದರೆ ಈ ದೇಶಗಳಲ್ಲಿಯೂ ಸಹ, ಪ್ರಸ್ತುತ ಆರ್ಥಿಕ ವಾತಾವರಣವು ಹೆಚ್ಚು ಸುರಕ್ಷಿತ ಉದ್ಯೋಗ ಭದ್ರತೆಯನ್ನು ಒದಗಿಸುವುದಿಲ್ಲ.

ಸಿಂಗಾಪುರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹೆಚ್ಚಿನ ಟೆಕ್ ಕಂಪನಿಗಳು ಸ್ವಲ್ಪ ಸಮಯದ ಹಿಂದೆ ನೇಮಕಾತಿಯನ್ನು ನಿಲ್ಲಿಸಿದ್ದವು. ಈಗ ವೆಚ್ಚವನ್ನು ಕಡಿತಗೊಳಿಸಲು ವಜಾ ಮಾಡುತ್ತಿದ್ದಾರೆ. ಸಿಂಗಾಪುರ ಮೂಲದ ಕಂಪನಿಗಳು ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ, ಮಾಧ್ಯಮ ವರದಿಗಳು ಸಿಂಗಾಪುರದಲ್ಲಿರುವ ಮೆಟಾದ ಏಷ್ಯಾ-ಪೆಸಿಫಿಕ್ ಪ್ರಧಾನ ಕಛೇರಿಯಲ್ಲಿ 10 ಪ್ರತಿಶತದಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಅಂದಾಜಿಸಿದೆ.

ಇದನ್ನೂ ಓದಿ: NRI: ವೇಗ ಪಡೆದುಕೊಂಡ ವೀಸಾ ಪ್ರಕ್ರಿಯೆ: ಮುಂದಿನ ವರ್ಷದವರೆಗೆ ಸಾಮಾನ್ಯ ಪರಿಸ್ಥಿತಿ ಮುಂದುವರಿಕೆ

ಭಾರತೀಯ ತಂತ್ರಜ್ಞಾನ ಉದ್ಯಮವು ಎನ್‌ಆರ್‌ಐಗಳನ್ನು ಸ್ವಾಗತಿಸಲು ಸಿದ್ಧರಿದ್ದರೂ, ಈ ವಿಷಮ ಪರಿಸ್ಥಿತಿಯಲ್ಲಿ ಎನ್‌ಆರ್‌ಐಗಳು ಭಾರತೀಯ ಕಂಪನಿಗಳಿಗೆ ಮರಳಲು ಸಿದ್ಧರಿದ್ದಾರೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News