Vaibhav Suryavanshi: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
Vaibhav Suryavanshi: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಭಾಗವಹಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ.
ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಮೆಗಾ ಹರಾಜಿನಲ್ಲಿ ಭಾಗವಹಿಸಲು ಒಟ್ಟು 1574 ಮಂದಿ ನೋಂದಣಿ ಮಾಡಿಕೊಂಡಿದ್ದರೆ, ಫ್ರಾಂಚೈಸಿಗಳ ಸೂಚನೆಯಂತೆ ಬಿಸಿಸಿಐ 574 ಮಂದಿಯನ್ನು ಶಾರ್ಟ್ಲಿಸ್ಟ್ ಮಾಡಿದೆ.
ಆದರೆ ಈ ಪಟ್ಟಿಯಲ್ಲಿ 13 ವರ್ಷದ ಬಾಲಕನಿಗೆ ಸ್ಥಾನ ಸಿಕ್ಕಿದೆ. ಮೆಗಾ ಹರಾಜಿಗೆ ಭಾರತದ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಹಾಗಾಗಿ ಐಪಿಎಲ್ ಇತಿಹಾಸದಲ್ಲಿ ಶಾರ್ಟ್ಲಿಸ್ಟ್ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸೂರ್ಯವಂಶಿ ಪಾತ್ರರಾಗಿದ್ದಾರೆ.
ಬಿಹಾರದ ಈ ಹುಡುಗ ರಾಜ್ಯದ ರಣಜಿ ತಂಡದ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾನೆ. 12 ವರ್ಷದವನಿದ್ದಾಗ ಈ ಬಾಲಕ ಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇತಿಹಾಸ ಸೃಷ್ಟಿಸಿದನು.
ಭಾರತೀಯ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿರುವ ಈ ಬಾಲಕನನ್ನು ಫ್ರಾಂಚೈಸಿಗಳು ಖರೀದಿಸುವ ಸಾಧ್ಯತೆ ಇದೆ.ಆಸ್ಟ್ರೇಲಿಯಾ ವಿರುದ್ಧದ ಯೂತ್ ODI ಕಪ್ ನಲ್ಲಿ ವೈಭವ್ ಶತಕ ಬಾರಿಸಿದ್ದರು.
ನವೆಂಬರ್ 24 ಮತ್ತು 25 ರಂದು (ಭಾನುವಾರ ಮತ್ತು ಸೋಮವಾರ) ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ನಡೆಯಲಿದೆ ಎಂದು ವರದಿಯಾಗಿದೆ.
10 ಫ್ರಾಂಚೈಸಿಗಳಲ್ಲಿ 204 ಸ್ಥಾನಗಳಿಗೆ 574 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. 366 ಭಾರತೀಯ ಆಟಗಾರರಿದ್ದರೆ, 208 ವಿದೇಶಿ ಆಟಗಾರರಿದ್ದಾರೆ. ಅಸೋಸಿಯೇಟ್ ನೇಷನ್ಸ್ನ ಇತರ ಮೂವರು ಆಟಗಾರರಿದ್ದಾರೆ.
ಭಾರತದಿಂದ 318 ಅನ್ಕ್ಯಾಪ್ಡ್ ಆಟಗಾರರು ಮತ್ತು 12 ಅನ್ಕ್ಯಾಪ್ಡ್ ವಿದೇಶಿ ಆಟಗಾರರಿದ್ದಾರೆ. 70 ಸಾಗರೋತ್ತರ ಸ್ಲಾಟ್ಗಳು ಲಭ್ಯವಿದೆ.
ಎರಡು ದಿನಗಳ ಮೆಗಾ ಹರಾಜು ಮಧ್ಯಾಹ್ನ 1 ಗಂಟೆಯಿಂದ ಆರಂಭವಾಗಲಿದ್ದು, ಮೆಗಾ ಹರಾಜಿನ ನೇರಪ್ರಸಾರವನ್ನು ನೀವು ಸ್ಟಾರ್ ಸ್ಪೋರ್ಟ್ಸ್ ಅಥವಾ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.