Photo Gallery: ರಾಜ್ಯಕ್ಕೆ ಕಾಲಿಟ್ಟ 3D ಕಾಂಕ್ರೀಟ್​ ತಂತ್ರಜ್ಞಾನ..! ಕಟ್ಟಡ ನಿರ್ಮಾಣ ಹೇಗೆಲ್ಲಾ ಇರುತ್ತೆ ಗೊತ್ತಾ?

ರೋಬೊಟಿಕ್​ ತಂತ್ರಜ್ಞಾನದ ಮೂಲಕ ಮಷಿನ್​ನಿಂದಲೇ ಸಂಪೂರ್ಣ ಕೆಲಸ ನಡೆಯುತ್ತಿದ್ದು ಇಡೀ ಕಟ್ಟಡವನ್ನು ಕೇವಲ 45 ದಿನಗಳಲ್ಲಿ ಮುಗಿಸುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ.

 

 

ವಿದೇಶಗಳಲ್ಲಿ ಬಳಕೆಯಾಗ್ತಿದ್ದ ಅತ್ಯಾಧುನಿಕ ಟೆಕ್ನಾಲಜಿ ಇದೀಗ ಕರ್ನಾಟಕ್ಕೂ ಎಂಟ್ರಿ ಕೊಟ್ಟಿದೆ

1 /5

ಈ ಕಟ್ಟಡ ವಿನ್ಯಾಸವನ್ನು ಐಐಟಿ ಮದ್ರಾಸ್ ಮಾನ್ಯ ಮಾಡಿದೆ.ಯಾವುದೇ ರೀತಿಯ ಇಟ್ಟಿಗೆ ಬಳಸದೇ ಕೇವಲ ಸಿಮೆಂಟ್​ ಕಾಂಕ್ರಿಟ್​ ಬಳಕೆಯಿಂದಲೇ ಸಂಪೂರ್ಣ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.  

2 /5

ಇದರ ವಿಶೇಷ ಏನೆಂದರೆ ಕೇವಲ ಐದೇ ಐದು ಜನ ಕೆಲಸಗಾರರು, ಲ್ಯಾಪ್​ಟಾಪ್​ ಬಳಕೆಯಿಂದ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ.

3 /5

ಸುಮಾರು ಒಂದು ಸಾವಿರ ಚದರ ಅಡಿಯಲ್ಲಿ ಈ ಕಟ್ಟಡವನ್ನು ನೂತನ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ.  

4 /5

ಈಗ ಈ ತಂತ್ರಜ್ಞಾನದ ಮೂಲಕ ಇದೆ ಮೊದಲ ಬಾರಿಗೆ ಅಂಚೆ ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ.

5 /5

ಹೌದು, ಬೆಂಗಳೂರಿನ ಹಲಸೂರಿನಲ್ಲಿ 3D ಕಾಂಕ್ರೀಟ್​ ತಂತ್ರಜ್ಞಾನ ಬಳಸಿ ಮೊಟ್ಟ ಮೊದಲ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದು ಈ ಕಟ್ಟಡ ನಿರ್ಮಾಣದ ಹೊಣೆಯನ್ನು ಎಲ್ & ಟಿ ಕಂಪನಿ ಹೊತ್ತಿದೆ.