ವಾತ್ಸಾಯನನ ಕಾಮಸೂತ್ರದ ಪ್ರಕಾರ ಮದುವೆಯಾಗುವ ಗಂಡಿಗೆ ಇದು ಇರಲೇಬೇಕಂತೆ!! ಏನದು ಅಂತಾ ನೋಡಿ

Vatsayana's Kamasutra: ವಾತ್ಸಾಯನ ಮಹರ್ಷಿಗಳ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ವಿಶ್ವಪ್ರಸಿದ್ಧ ʼಕಾಮಸೂತ್ರʼ ಕೃತಿಯನ್ನು ಬರೆದ ಇವರ ಪ್ರಕಾರ, ಮದುವೆಯಾಗ ಬಯಸುವ ವ್ಯಕ್ತಿಗೆ ಕೆಲವು ಗುಣಗಳು ಇರಬೇಕಂತೆ. ಆ ಗುಣಗಳು ಯಾವುವು ಎಂದು ತಿಳಿಯಿರಿ... 

Vatsayana's Kamasutra: ʼಕಾಮಸೂತ್ರʼದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತೇ ಇರುತ್ತದೆ. ಮಹರ್ಷಿ ವಾತ್ಸಾಯನ ಬರೆದ ಈ ಮಹಾನ್‌ ಗ್ರಂಥ ಭಾರತವಲ್ಲದೇ ವಿದೇಶದಲ್ಲಿಯೂ ತುಂಬಾ ಜನಪ್ರಿಯತೆಯನ್ನ ಗಳಿಸಿದೆ. ದಾಂಪತ್ಯ ಸುಖದ ಬಗ್ಗೆ ಈ ಗ್ರಂಥದಲ್ಲಿ ವಾತ್ಸಾಯನ ಮಹರ್ಷಿಗಳು ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದ್ದಾರೆ. ಮದುವೆಯಾಗುವ ಹುಡುಗನಿಗೆ ಏನಿರಬೇಕು? ಎಂಬುದರ ಬಗ್ಗೆ ಅವರು ವಿವರವಾಗಿ ಬರೆದಿದ್ದಾರೆ. ವಾತ್ಸಾಯನನ ಕಾಮಸೂತ್ರದ ಪ್ರಕಾರ, ಮದುವೆಯಾಗುವ ಗಂಡಸಿಗೆ ಏನು ಇರಬೇಕು? ಅನ್ನೋದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ...  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಯಾವುದೇ ವ್ಯಕ್ತಿ ಮದುವೆಯಾಗುವ ಮೊದಲು ತಾನು ಸಾಂಸಾರಿಕ ಬದುಕಿಗೆ ಫಿಟ್‌ ಹೌದೋ ಅಲ್ಲವೋ ಎಂಬುದನ್ನ ಖಚಿತಪಡಿಸಿಕೊಂಡಿರಬೇಕು. ಅಂದರೆ ಹೆಂಡತಿಗೆ ದೈಹಿಕ ಸುಖ ಕೊಡಲು, ಆಕೆಯಿಂದ ಅದನ್ನು ಪಡೆಯಲು ಆತ ಸಮರ್ಥನಾಗಿರಬೇಕಂತೆ. ಆತನ ಲೈಂಗಿಕತೆ ಸ್ಪಷ್ಟವಾಗಿರಬೇಕು ಅಂದರೆ ಆತ ನಪುಂಸಕನಾಗಿರಬಾರದು, ಸಲಿಂಗಕಾಮಿ ಆಗಿರಬಾರದು, ವಿಕೃತಕಾಮಿಯೂ ಆಗಿರಬಾರದಂತೆ. 

2 /6

ರಾಜರ ಕಾಲದಲ್ಲಿ ರಾಜಕುಮಾರರಿಗೆ ಲೈಂಗಿಕ ಶಿಕ್ಷಣ ನೀಡಲು ಪಂಡಿತರನ್ನು, ಸಖಿಯರನ್ನು ನೇಮಿಸುತ್ತಿದ್ದರು. ಮದುವೆಗುವ ಮೊದಲೇ ಅವರಿಗೆ ಸಾಕಷ್ಟು ಲೈಂಗಿಕತೆಯ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಇತರರಿಗೆ ಆ ಅವಕಾಶ ಇರಲಿಲ್ಲ. ಹೀಗಾಗಿ ಆತ ತನ್ನ ಗೆಳೆಯರಿಂದಲೇ ಅದನ್ನೆಲ್ಲ ಕೇಳಿ ತಿಳಿದಿರಬೇಕಾಗುತ್ತಿತ್ತು. ಆಚಾರ್ಯ ಚಾಣಕ್ಯರು ಸಹ ʼಹಿರಿಯ ಗೆಳೆಯʼರಿಂದ ಸೂಕ್ತ ಲೈಂಗಿಕ ತಿಳುವಳಿಕೆ ಪಡೆಯಬೇಕು ಎಂದು ಹೇಳುತ್ತಾರೆ. 

3 /6

ವಿವಾಹ ಮಾಡಿಕೊಳ್ಳುವ ಯಾವುದೇ ಪುರುಷ ಮಾನಸಿಕವಾಗಿ ಅದಕ್ಕೆ ಸಜ್ಜಾಗಿರಬೇಕು. ಸಂಸಾರಕ್ಕೆ ಹೊಸ ಸದಸ್ಯೆ ಸೇರಿಸಲು, ಪತ್ನಿಯನ್ನ ತನ್ನ ಬದುಕಿನ ಪ್ರಮುಖ ಭಾಗವಾಗಿ ಮಾಡಿಕೊಳ್ಳಲು ಸಿದ್ಧವಾಗಿರಬೇಕು. ಹೆಂಡತಿಯನ್ನು ತನ್ನ ಸಮಾನ ವ್ಯಕ್ತಿಯಾಗಿ ಪರಿಗಣಿಸಬೇಕು. ಆಕೆಯ ಮೇಲೆ ಅಧಿಕಾರವನ್ನು ಹೇರಬಾರದು. ಆತ ವಿಕೃತಕಾಮಿ ಆಗಿರಬಾರದು. ಸಮಾಜ ಒಪ್ಪುವ ರೀತಿಯ ಲೈಂಗಿಕ ಸುಖವನ್ನು ಬಯಸುವವನಾಗಿರಬೇಕು. ಮದುವೆಗೆ ಮೊದಲೇ ವೇಶ್ಯೆಯರ ಬಳಿ ಹೋಗಿ ಲೈಂಗಿಕ ಕಾಯಿಲೆಗಳನ್ನು ಅಂಟಿಸಿಕೊಂಡಿರಬಾರದು. 

4 /6

ʼಉದ್ಯೋಗಂ ಪುರುಷ ಲಕ್ಷಣಂʼ ಎನ್ನುತ್ತಾನೆ ಚಾಣಕ್ಯ. ದುಡಿಯುವ ಸಾಮರ್ಥ್ಯವಿದ್ದು, ಕೆಲಸ ಮಾಡಿ ಹಣ ಸಂಪಾದಿಸುವವನನ್ನು ಮಾತ್ರ ಹೆಣ್ಣು ಇಷ್ಟಪಡುತ್ತಾಳೆ. ಮೂರು ಹೊತ್ತೂ ಓತ್ಲಾ ಹೊಡೆಯುವ, ʼಭೂಮಿಗೆ ಭಾರ ಕೂಳಿಗೆ ದಂಡʼ ಅನ್ನೋ ಗಾದೆ ಮಾತಿನಂತೆ ಇರುವ ಯಾರನ್ನೂ ಆಕೆ ಇಷ್ಟಪಡುವುದಿಲ್ಲ. ದುಡಿದು ತನ್ನನ್ನೂ ಮತ್ತು ಮಕ್ಕಳನ್ನೂ ಸಾಕುವ ಸಾಮರ್ಥ್ಯ ಆತನಲ್ಲಿ ಇದೆಯಾ ಅಂತಾ ಪ್ರತಿಯೊಬ್ಬ ಹೆಣ್ಣು ನೋಡುತ್ತಾಳೆ. ಇಂದು ಸ್ವತಃ ಹೆಣ್ಣುಮಕ್ಕಳೇ ದುಡಿಯುತ್ತಿದ್ದಾರೆ. ಆದರೆ ಗಂಡಿಗೆ ದುಡಿಯುವ ಸಾಮರ್ಥ್ಯ ಅತಿಮುಖ್ಯವಾಗಿರುತ್ತದೆ.  

5 /6

ಚಾಣಕ್ಯನ ಪ್ರಕಾರ ಪತಿ-ಪತ್ನಿಯರ ಸಂಬಂಧದಲ್ಲಿ ಸಮರ್ಪಣಾ ಭಾವ ಇರಬೇಕು. ಸಾಂಗತ್ಯದಲ್ಲಿ ಬದ್ಧತೆಯ ಭಾವನೆ ಇಲ್ಲದಿದ್ದರೆ ಸಂಪರ್ಕದ ಮಾಧುರ್ಯವು ಗಟ್ಟಿಯಾಗುವುದಿಲ್ಲ. ಗಂಡ-ಹೆಂಡತಿ ಬದ್ಧತೆಯ ಭಾವನೆ ಹೊಂದಿರುವಾಗ, ಅವರು ಪರಸ್ಪರರ ನ್ಯೂನತೆಗಳನ್ನು ಕಡೆಗಣಿಸುತ್ತಾರೆಂದು ಚಾಣಕ್ಯ ಹೇಳುತ್ತಾನೆ. ಅಂದರೆ ಶರಣಾಗತ ಆಗಲು ಪುರುಷ ಸಿದ್ಧನಿರಬೇಕು. ತನ್ನ ಪ್ರೀತಿಯನ್ನು ನಿವೇದಿಸುವಾಗ ಆತ ಆಕೆಯ ಮುಂದೆ ಮಂಡಿಯೂರಲೇಬೇಕು!

6 /6

ಪುರುಷನ ಹಿನ್ನೆಲೆಯನ್ನೂ ಪ್ರತಿಯೊಬ್ಬ ಹೆಣ್ಣುಮಗಳು ಗಮನಿಸುತ್ತಾಳಂತೆ. ಅಂದರೆ ಆತನ ಮನೆತನಕ್ಕೆ ಗೌರವ ಇದೆಯಾ? ಆತನಿಗೆ ಎಷ್ಟು ಆಸ್ತಿ ಇದೆ? ಆತನ ತಂದೆ-ತಾಯಿ ಹೇಗಿರುತ್ತಾರೆ? ಅವರ ಮನೆ ಹೇಗಿದೆ? ಸಂಬಳ ಎಷ್ಟು? ಬಂಧುಗಳು ಹೇಗಿದ್ದಾರೆ? ಅವರ ಮನೆತನದ ಬಗ್ಗೆ ಸಮಾಜದಲ್ಲಿ ಗೌರವ ಇದೆಯೋ ಇಲ್ಲವೋ? ಈ ರೀತಿ ಎಲ್ಲವನ್ನೂ ಗಮನಿಸುತ್ತಾರಂತೆ.