Aditi Rao Hydari and Siddharth: ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ನಾಯಕ ಸಿದ್ಧಾರ್ಥ್ ಅವರು ಅದಿತಿ ರಾವ್ ಹೈದರಿ ಅವರನ್ನು ಮದುವೆಯಾಗಿದ್ದು, ಸೆಪ್ಟಂಬರ್ 16 ರಂದು ಇಬ್ಬರ ವಿವಾಹ ಸಮಾರಂಭವು ಕುಟುಂಬ ಸದಸ್ಯರು ಮತ್ತು ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದು ಮುಗಿದಿದೆ.
ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ನಾಯಕ ಸಿದ್ಧಾರ್ಥ್ ಅವರು ಅದಿತಿ ರಾವ್ ಹೈದರಿ ಅವರನ್ನು ಮದುವೆಯಾಗಿದ್ದು, ಸೆಪ್ಟಂಬರ್ 16 ರಂದು ಇಬ್ಬರ ವಿವಾಹ ಸಮಾರಂಭವು ಕುಟುಂಬ ಸದಸ್ಯರು ಮತ್ತು ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದು ಮುಗಿದಿದೆ.
ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಪ್ರೀತಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದ್ದಾರೆ. ರಹಸ್ಯವಾಗಿ ಪರಸ್ಪರ ಡೇಟಿಂಗ್ ಮಾಡಿದ್ದ ಈ ಜೋಡಿ ಸೆಪ್ಟೆಂಬರ್ 16, 2024 ರಂದು ಖಾಸಗಿಯಾಗಿ ಕುಟುಂಬದ ಸಮ್ಮುಕದಲ್ಲಿ ಸಪ್ತಪದಿ ತುಳಿದಿದ್ದಾರೆ.
ತೆಲಂಗಾಣದ ವನಪರ್ತಿ ಜಿಲ್ಲೆಯ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ವಿವಾಹವಾದ ಈ ಜೋಡಿ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
ಸಿದ್ಧಾರ್ಥ್ ಮತ್ತು ಅದಿತಿ ತಮ್ಮ ಮದುವೆಗೆ ಕೆಲವು ದಿನಗಳ ಮೊದಲು ವೋಗ್ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಅದಿತಿ ರಾವ್ ಹೈದರಿ ಬೆಳಿಗ್ಗೆ ಏನು ಮಾಡುತ್ತಾಳೆ ಎಂದು ಸಿದ್ಧಾರ್ಥ್‌ನನ್ನು ಕೇಳಿದಾಗ, ಅದಿತಿ ಒಪ್ಪಿಗೆಯಿಲ್ಲದೆ ಬಯಸಿದಂತೆ ತನ್ನನ್ನು ತನಗೆ ಇಷ್ಟ ಇಲ್ಲದಿದ್ದರೂ ಬೇಗನೇ ಎಬ್ಬಿಸುತ್ತಾಳೆ ಎಂದು ಉತ್ತರಿಸಿದ್ದಾರೆ.
ನಂತರ ತಮ್ಮ ಉತ್ತರವನ್ನು ಸಮರ್ತಿಸಿಕೊಂಡ ಸಿದ್ಧಾರ್ಥ್ "ನನಗೆ ಇಷ್ಟ ಇಲ್ಲದೆ ಇದ್ದರೂ ಸಹ ಮುಂಜಾನೆ ಬೇಗ ಎಚ್ಚರವಾಗುತ್ತೇನೆ, ನನ್ನ ಈ ಕಣ್ಣಿರನ್ನು ನೋಡಿ ಖುಷಿ ಪಡುವ ವ್ಯಕ್ತಿ ಅಂದರೆ ಪ್ರಪಂಚದ ಮೇಲೆ ಅಧಿತಿ ಒಬ್ಬಳೆ" ಎಂದು ಹೇಳಿದ್ದಾರೆ.
ಅದಿತಿ ಮದುವೆಯ ದಿನದಂದು ಬನಾರಸ್ ಟಿಶ್ಯೂ ದುಪಟ್ಟಾದೊಂದಿಗೆ ಕೈಯಿಂದ ನೇಯ್ದ ಮಹೇಶ್ವರಿ ಟಿಶ್ಯೂ ಲೆಹೆಂಗಾವನ್ನು ಧರಿಸಿದ್ದರು, ಪ್ರಖ್ಯಾತ ವಿನ್ಯಾಸಕ ಸಬ್ಯಸಾಚಿ ಮುಖರ್ಜಿಯವರ ಪರಂಪರೆಯ ಜವಳಿ ಸಂಗ್ರಹದಿಂದ ಈ ಉಡುಗೆಯನ್ನು ತಯಾರಿಸಲಾಗಿತ್ತು.
ಅದಿತಿ ತನ್ನ ಉಡುಪನ್ನು ಸಬ್ಯಸಾಚಿ ಹೆರಿಟೇಜ್ ಜ್ಯುವೆಲ್ಲರಿಯೊಂದಿಗೆ ಮ್ಯಾಚ್ ಮಾಡಿದ್ದರು. ಆಕೆಯ ಪತಿ ಸಿದ್ಧಾರ್ಥ್ ಕೈಯಿಂದ ತಯಾರಿಸಿದ ಬನಾರಸ್ ಧೋತಿ ಮತ್ತು ರೇಷ್ಮೆ ಕುರ್ತಾ ಧರಿಸಿ ಇಬ್ಬರು ಮೇಡ್ ಫಾರ್ ಈಚ್ ಅದರ್ ಎಂಬಂತೆ ಮಿಂಚಿದರು.