ಮನೆಯ ಮಹಾಲಕ್ಷ್ಮಿಗೆ ದೀಪಿಕಾ-ರಣವೀರ್‌ ಇಟ್ಟ ಹೆಸರೇನು? ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್‌ ಜೋಡಿ ಮಗಳ ಹೆಸರು ವೈರಲ್‌

Deepika ranveer daughter name: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8 ರಂದು ಬೆಳಗ್ಗೆ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅಭಿಮಾನಿಗಳು ಸ್ಟಾರ್‌ ಜೋಡಿ ತಮ್ಮ ಮಗಳಿಗೆ ಏನೆಂದು ಹೆಸರಿಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

1 /10

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗಳನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8 ರಂದು ಬೆಳಗ್ಗೆ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅಭಿಮಾನಿಗಳು ಸ್ಟಾರ್‌ ಜೋಡಿ ತಮ್ಮ ಮಗಳಿಗೆ ಏನೆಂದು ಹೆಸರಿಡಲಿದ್ದಾರೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

2 /10

ದೀಪಿಕಾ ಮತ್ತು ರಣವೀರ್ ತಮ್ಮ ಮನೆಗೆ ಲಕ್ಷ್ಮಿ ಬಂದಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹೀಗಿರುವಾಗ ಈ ಜೋಡಿಯ ಅಭಿಮಾನಿಗಳು ಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. 

3 /10

ಅದೇ ಸಮಯದಲ್ಲಿ, ದಂಪತಿಗಳು ತಮ್ಮ ಮುದ್ದಾದ ಮಗಳಿಗೆ ಏನೆಂದು ಹೆಸರಿಡಲಿದ್ದಾರೆ ಎಂಬ ಊಹಾಪೋಹವೂ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಆರಂಭವಾಗಿದೆ. 

4 /10

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇನ್ನು ಮುಂದೆ ಹೆಸರುಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಏಕೆಂದರೆ ನೆಟಿಜನ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮುದ್ದಾದ ಹೆಸರುಗಳನ್ನು ಸೂಚಿಸಿದ್ದಾರೆ. ರಣವೀರ್ ಮತ್ತು ದೀಪಿಕಾ ಹೆಸರನ್ನು ಸೇರಿಸಿ ಬಹುತೇಕ ಅಭಿಮಾನಿಗಳು ತಮ್ಮ ಮಗಳ ಹೆಸರನ್ನು 'ರವಿಕಾ' ಎಂದು ಸೂಚಿಸಿದ್ದಾರೆ.

5 /10

ಇದು ತುಂಬಾ ಮುದ್ದಾದ ಹೆಸರು ಮತ್ತು ಜನರು ಕೂಡ ಈ ಹೆಸರನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಆದಾಗ್ಯೂ, ದಂಪತಿಗಳು ಈಗ ಯಾವ ಹೆಸರನ್ನು ಇಡುತ್ತಾರೆ, ಎಂಬುದನ್ನು ಕಾಲವಷ್ಟೆ ನಿರ್ಧರಿಸಲಿದೆ.

6 /10

ಈ ವರ್ಷ ಫೆಬ್ರವರಿ 28 ರಂದು ದೀಪಿಕಾ ಪಡುಕೋಣೆ ತಾನು ಗರ್ಭಿಣಿಯಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಹಿಂದೆ ನಟಿ ಬಾಡಿಗೆ ತಾಯ್ತನದ ಮೂಲಕ ತನ್ನ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾನದಲ್ಲಿ ಕೇಳಿಬಂದಿದ್ದವು.

7 /10

ನಟಿ ಫೇಕ್‌ ಬೇಬಿ ಬಂಬ್‌ ಧರಿಸಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಿದ್ದರು. ವಾರಕ್ಕೆ ಮುಂಚೆಯಷ್ಟೆ ದೀಪಿಕಾ ಪಡಯಕೋಣೆ ಹಾಗೂ ರಣವೀರ್‌ ಜೋಡಿ ಪ್ರೆಗ್ನೆಂಸಿ ಫೋಟೋ ಶೂಟ್‌ ಮೂಲಕ ಫೇಕ್‌ ಸುದ್ದಿ ಹಬ್ಬಿಸುತ್ತಿದ್ದವರ ಬಾಯಿ ಮುಚ್ಚಿಸಿದ್ದರು. 

8 /10

ನಟಿಗೆ ಸೆಪ್ಟೆಂಬರ್ 28 ರಂದು ಹೆರಿಗೆಯಾಗಬೇಕಿತ್ತು ಆದರೆ ಇದ್ದಕ್ಕಿದ್ದಂತೆ ನಟಿ ಸೆಪ್ಟೆಂಬರ್‌ 07ರಂದು ಆಸ್ಪತ್ರೆಗೆ ತರೆಳಿದ್ದು. ಸೆಪ್ಟೆಂಬರ್‌ 08ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

9 /10

ವರದಿಗಳನ್ನು ನಂಬುವುದಾದರೆ, ದೀಪಿಕಾ ಪಡುಕೋಣೆ ತನ್ನ ಮೊದಲ ಮಗುವಿನ ಜನನದ ನಂತರ ಸ್ವಲ್ಪ ಸಮಯದವರೆಗೆ ಚಲನಚಿತ್ರಗಳಿಂದ ವಿರಾಮ ತೆಗೆದುಕೊಂಡು ತನ್ನ ಮಗಳೊಂದಿಗೆ ಸಮಯ ಕಳೆಯಲಿದ್ದಾರೆ.

10 /10

2025 ರಲ್ಲಿ ಚಲನಚಿತ್ರಗಳಿಗೆ ಮರಳುತ್ತಾರೆ ಎಂಬುದು ಸುದ್ದಿ ಕೇಳಿಬರುತ್ತಿದೆ. ಪ್ರಸ್ತುತ, ರಣವೀರ್ ಮತ್ತು ದೀಪಿಕಾ ತಮ್ಮ ಮಗಳ ಮೊದಲ ನೋಟವನ್ನು ಯಾವಾಗ ಹಂಚಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.