ಈ ಮೈತ್ರಿಯು ಕುಂಭ ರಾಶಿಯಲ್ಲಿ 30 ವರ್ಷಗಳ ನಂತರ ಸಂಭವಿಸುತ್ತದೆ. ಇದು ಮೂರು ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಪ್ರಗತಿಯ ಬಾಗಿಲು ತೆರೆಯಲಿವೆ.
ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಯಾವುದೇ ಗ್ರಹದ ಸಾಗಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಅಂಥಹ ಒಂದು ಮೈತ್ರಿ ಬುಧ ಮತ್ತು ಶನಿಯ ನಡುವೆ ರೂಪುಗೊಳ್ಳಲಿದೆ. ಜನವರಿ 17 ರಂದು ಶನಿಯು ತನ್ನದೇ ಆದ ಕುಂಭ ರಾಶಿಯನ್ನು ಪ್ರವೇಶಿಸಿತ್ತು. ಮತ್ತೊಂದೆಡೆ, ಕುಂಭದಲ್ಲಿ ಬುಧ ಸಂಕ್ರಮಣದಿಂದಾಗಿ, ಬುಧ ಮತ್ತು ಶನಿಯ ಸಂಯೋಗ ನಡೆಯಲಿದೆ. ಈ ಮೈತ್ರಿಯು ಕುಂಭ ರಾಶಿಯಲ್ಲಿ 30 ವರ್ಷಗಳ ನಂತರ ಸಂಭವಿಸುತ್ತದೆ. ಇದು ಮೂರು ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಪ್ರಗತಿಯ ಬಾಗಿಲು ತೆರೆಯಲಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
30 ವರ್ಷಗಳ ಬಳಿಕ ಕುಂಭ ರಾಶಿಯಲ್ಲಿ ಬುಧ ಮತ್ತು ಶನಿಯ ಸಂಯೋಗ ಸಂಭವಿಸುತ್ತದೆ. ಇದು ಮೂರು ರಾಶಿಯವರ ಜೀವನದಲ್ಲಿ ಸಂಪತ್ತು ಮತ್ತು ಪ್ರಗತಿಯ ಬಾಗಿಲು ತೆರೆಯಲಿವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬುಧ ಮತ್ತು ಶನಿಯ ಸಂಯೋಜನೆಯು ಈ ರಾಶಿಯ ಜನರಿಗೆ ಮಂಗಳಕರವಾಗಿರುತ್ತದೆ. ಈ ಮೈತ್ರಿಯು ಮೇಷ ರಾಶಿಯ 11 ನೇ ಮನೆಯಲ್ಲಿ ರಚನೆಯಾಗಲಿದೆ. ಇದನ್ನು ಆದಾಯ ಮತ್ತು ಲಾಭದ ಮನೆ ಎಂದು ಕರೆಯಲಾಗುತ್ತದೆ. ಮೇಷ ರಾಶಿಯ ಜನರ ಆದಾಯದಲ್ಲಿ ಅಪಾರ ಲಾಭವಾಗಲಿದೆ. ಹಿಂದೆ ಮಾಡಿದ ಕೆಲಸದ ಲಾಭ ಈ ಸಂದರ್ಭದಲ್ಲಿ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಮತ್ತು ವ್ಯವಹಾರದಲ್ಲಿ ಅದೃಷ್ಟ ಕೈ ಹಿಡಿಯಲಿದೆ.
ವೃಷಭ ರಾಶಿಯವರಿಗೆ ಶನಿ ಮತ್ತು ಬುಧ ಸಂಯೋಜನೆಯು ತುಂಬಾ ಪ್ರಯೋಜನಕಾರಿಯಾಗಲಿದೆ. ವೃತ್ತಿ ಮತ್ತು ವ್ಯವಹಾರದ ದೃಷ್ಟಿಯಿಂದ ಈ ಮೈತ್ರಿಯನ್ನು ಮಂಗಳಕರವೆಂದು ಹೇಳಲಾಗುತ್ತದೆ. ಸಂಕ್ರಮಣದ ಜಾತಕದ ಕರ್ಮದ ಮನೆಯಲ್ಲಿ ಈ ಮೈತ್ರಿಯು ಸಂಭವಿಸಲಿದೆ. ವ್ಯವಹಾರದಲ್ಲಿ ಅಪಾರ ಲಾಭವಾಗುವುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಈ ಸಮಯದಲ್ಲಿ ತಂದೆಯ ಸಹಕಾರ ದೊರೆಯಲಿದೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಮೈತ್ರಿಯು ಮಿಥುನ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಅದೃಷ್ಟದ ಸ್ಥಳದಲ್ಲಿ ಈ ಮೈತ್ರಿಯಾಗುತ್ತಿದೆ. ಹಾಗಾಗಿ ಅದೃಷ್ಟವು ಸದಾ ನಿಮ್ಮೊಂದಿಗೆ ಇರುತ್ತದೆ. ಈ ಸಮಯದಲ್ಲಿ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು ಸಿಗಲಿದೆ. ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಕೈಗೊಳ್ಳುವ ಪ್ರಯಾಣ ಭವಿಷ್ಯದಲ್ಲಿ ಉತ್ತಮ ಫಲ ನೀಡಲಿದೆ. ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)