Amazon Great Freedom Festival Sale: ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಇಂದಿನಿಂದ ಆರಂಭವಾಗಿದೆ. ಈ ಸೇಲ್‌ನಲ್ಲಿ ನೀವು ನಿಮ್ಮ ಮೆಚ್ಚಿನ ಉತ್ಪನ್ನಗಳನ್ನು ಅಗ್ಗವಾಗಿ ಖರೀದಿಸಬಹುದು. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಇಲ್ಲಿದೆ ಅದ್ಭುತ ಕೊಡುಗೆಗಳು.
Amazon Great Freedom Festival Sale: ದೇಶದ ಅತಿದೊಡ್ಡ ಮತ್ತು ನೆಚ್ಚಿನ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಅಮೆಜಾನ್ ಗ್ರೇಟ್ ಫ್ರೀಡಮ್ ಫೆಸ್ಟಿವಲ್ ಸೇಲ್ ಇಂದು ಆರಂಭವಾಗಿದೆ. ಅಮೆಜಾನ್‌ನಲ್ಲಿ ಇಂದು ಅಂದರೆ ಆಗಸ್ಟ್ 6, 2022 ರಂದು ಈ ಸೇಲ್ ಆರಂಭವಾಗಿದ್ದು ಆಗಸ್ಟ್ 10, 2022 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ನೀವು ನಿಮ್ಮ ಮೆಚ್ಚಿನ ಉತ್ಪನ್ನಗಳನ್ನು ಅಗ್ಗವಾಗಿ ಖರೀದಿಸಬಹುದು. ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಮತ್ತು ನಿಮ್ಮ ಬಜೆಟ್ ಕಡಿಮೆ ಇದ್ದರೆ, ನಾವು ನಿಮಗಾಗಿ ಐದು ಉತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳನ್ನು ತಂದಿದ್ದೇವೆ. ಇದರಲ್ಲಿ ನೀವು ಕೈಗೆಟುಕುವ ಬೆಲೆಯಲ್ಲಿ ಉನ್ನತ ಬ್ರಾಂಡ್‌ಗಳಿಂದ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
OnePlus Nord CE 2 Lite 5G: OnePlus ನಿಂದ 6ಜಿಬಿ ರಾಮ್ ಮತ್ತು 128ಜಿಬಿ ಸ್ಟೋರೇಜ್ ಹೊಂದಿರುವ ಈ 5ಜಿ ಫೋನ್ ಅನ್ನು ರೂ. 19,999 ಬದಲಿಗೆ ರೂ 18,9.99 ಗೆ ಮಾರಾಟ ಮಾಡಲಾಗುತ್ತಿದೆ. ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಮೂಲಕ ಇನ್ನೂ ಸಾವಿರಾರು ಹಣವನ್ನು ಉಳಿಸಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನಿಂದ 12,750 ರೂಪಾಯಿಗಳ ರಿಯಾಯಿತಿಯನ್ನು ಕಾಣಬಹುದು. ಒಟ್ಟಾರೆಯಾಗಿ, ಈ ಫೋನ್ ಅನ್ನು 7,249 ರೂ.ಗೆ ತೆಗೆದುಕೊಳ್ಳಬಹುದು.
Samsung Galaxy M33 5G: 24,999 ರೂಗ.ಳ ಈ Samsung 5G ಸ್ಮಾರ್ಟ್‌ಫೋನ್ ಅನ್ನು 18,999 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. 6ಜಿಬಿ ರಾಮ್ , 128ಜಿಬಿ ಸ್ಟೋರೇಜ್ ಮತ್ತು 6000mAh ಬ್ಯಾಟರಿ ಹೊಂದಿರುವ ಈ ಫೋನ್ ಅನ್ನು ಖರೀದಿಸಲು ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿದರೆ, ನೀವು 3 ಸಾವಿರ ರೂಪಾಯಿಗಳನ್ನು ಉಳಿಸಬಹುದು ಮತ್ತು ಎಕ್ಸ್‌ಚೇಂಜ್ ಆಫರ್‌ನಿಂದ 12,750 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಈ ರೀತಿಯಾಗಿ ನೀವು ಈ ಫೋನ್ ಅನ್ನು 3,249 ರೂ.ಗೆ ಖರೀದಿಸಬಹುದು.
Redmi Note 11 Pro + 5G: ನೀವು 6ಜಿಬಿ ರಾಮ್, 128ಜಿಬಿ ಸಂಗ್ರಹಣೆ ಮತ್ತು 67W ಟರ್ಬೊ ಚಾರ್ಜ್ ಬೆಂಬಲದೊಂದಿಗೆ ಈ 5ಜಿ ಸ್ಮಾರ್ಟ್‌ಫೋನ್ ಅನ್ನು ರೂ 18,999 ಕ್ಕೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ ರೂ. 24,999 ಆಗಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಒಂದು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಪಡೆಯುತ್ತಾರೆ ಮತ್ತು ಹಳೆಯ ಫೋನ್‌ಗೆ ಬದಲಾಗಿ ಅದನ್ನು ಖರೀದಿಸುವ ಮೂಲಕ 14,750 ರೂ.ಗಳನ್ನು ಉಳಿಸಬಹುದು. ಅಂದರೆ ಈ ಫೋನ್ ಅನ್ನು ರೂ. 3,249 ಗೆ ಖರೀದಿಸಬಹುದು.
iQOO Z6 5G: ರೂ. 20,990 ರ ಈ 5G ಸ್ಮಾರ್ಟ್‌ಫೋನ್ ಅನ್ನು ರೂ 16,999 ಕ್ಕೆ ತೆಗೆದುಕೊಳ್ಳಬಹುದು. ಬ್ಯಾಂಕ್ ಆಫರ್ ಮೂಲಕ ಒಂದು ಸಾವಿರ ರೂಪಾಯಿ, ಕೂಪನ್ ಡಿಸ್ಕೌಂಟ್ ಮೂಲಕ ಒಂದು ಸಾವಿರ ರೂಪಾಯಿ ಮತ್ತು ಎಕ್ಸ್ ಚೇಂಜ್ ಆಫರ್ ಸಹಾಯದಿಂದ 12,750 ರೂಪಾಯಿಗಳನ್ನು ಉಳಿಸಬಹುದು. ಒಟ್ಟಾರೆಯಾಗಿ, ನೀವು ಈ ಫೋನ್ ಅನ್ನು ರೂ 2,249 ಕ್ಕೆ ಖರೀದಿಸಬಹುದು.
Oppo A74 5G: Oppo ನ ಈ 5G ಸ್ಮಾರ್ಟ್‌ಫೋನ್‌ನ ಬೆಲೆ 20,990 ರೂ ಆಗಿದೆ. ಆದರೆ ಇದನ್ನು ಅಮೆಜಾನ್ ಮಾರಾಟದಲ್ಲಿ 14,990 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಎಸ್‌ಬಿಐ ಕಾರ್ಡ್ ಬಳಸಿ ರೂ. 750 ಮತ್ತು ಎಕ್ಸ್‌ಚೇಂಜ್ ಆಫರ್‌ನೊಂದಿಗೆ ರೂ 12,750 ಉಳಿಸಬಹುದು. ಈ ರೀತಿಯಾಗಿ, ನೀವು ಈ ಸ್ಮಾರ್ಟ್‌ಫೋನ್ ಅನ್ನು 1,490 ರೂ.ಗಳಿಗೆ ಖರೀದಿಸಬಹುದಾಗಿದೆ.