Dream Interpretation: ನಿಮ್ಮ ಕನಸಲ್ಲೂ ಇವುಗಳನ್ನು ಕಂಡಿದ್ದರೆ, ಭವಿಷ್ಯದಲ್ಲಿ ಬಹು ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರ್ಥ

ಕೆಲವು ಕನಸುಗಳು ಒಳ್ಳೆಯ ಮತ್ತು ಸಕಾರಾತ್ಮಕ ವಿಷಯಗಳನ್ನು ಸೂಚಿಸುತ್ತವೆ.  ಆದರೆ ಕೆಲವು ಕನಸುಗಳು ಅಸಹ್ಯ ಮತ್ತು ಭಯಾನಕವಾಗಿರುತ್ತದೆ.  

ನವದೆಹಲಿ : ನಿದ್ರೆಯಲ್ಲಿ ಕನಸು ಕಾಣದವರು ಯಾರೂ ಇರಲಿಕ್ಕಿಲ್ಲ. ಕೆಲವೊಂದು ಕನಸುಗಳು ನಮಗೆ ನೆಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವೊಮ್ಮೆ ನಾವು ಏನು ಕನಸು ಕಂಡಿದ್ದೆವು ಎನ್ನುವುದನ್ನು ಮರೆತು ಬಿಡುತ್ತೇವೆ. ಕನಸಿನ ಶಾಸ್ತ್ರ ಅಥವಾ ಸ್ವಪ್ನ ಶಾಸ್ತ್ರವನ್ನು ನಂಬುವುದಾದರೆ ,  2 ರೀತಿಯ ಕನಸುಗಳಿವೆ. ಒಂದು ಉತ್ತಮ ಭವಿಷ್ಯದ ಮತ್ತು ಸಕಾರಾತ್ಮಕ ವಿಷಯಗಳತ್ತ ಗಮನಹರಿಸಿದರೆ, ಇನ್ನೊಂದು ನಕಾರಾತ್ಮಕ ವಿಷಯಗಳನ್ನು ಸೂಚಿಸುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /5

ನಿಮ್ಮ ಕನಸಿನಲ್ಲಿ ನೀವು ಬೆಕ್ಕನ್ನು ನೋಡಿದ್ದರೆ, ಅದನ್ನು ಶುಭ ಎಂದು ಕರೆಯಲಾಗುವುದಿಲ್ಲ. ಈ ರೀತಿಯ ಕನಸು ಕೆಟ್ಟ ಸಮಯಗಳನ್ನು ಸೂಚಿಸುತ್ತದೆ.  ಭವಿಷ್ಯದಲ್ಲಿ ಯಾರಾದರೂ ನಿಮಗೆ ದ್ರೋಹ ಮಾಡಲಿದ್ದಾರೆ ಎನ್ನುವುದನ್ನು ಕೂಡಾ ಇದು ಸೂಚಿಸುತ್ತದೆ. 

2 /5

ಕನಸಿನಲ್ಲಿ ಭೂಕಂಪದ ದೃಶ್ಯವನ್ನು ನೋಡಿದರೆ, ಅದನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಕನಸು ಕಾಣುವುದರಿಂದ ನಿಮ್ಮ ಮಗುವಿಗೆ ಭವಿಷ್ಯದಲ್ಲಿ ಕೆಲವು ರೀತಿಯ ಸಮಸ್ಯೆಗಳಾಗಬಹುದು ಎನ್ನಲಾಗುತ್ತದೆ. 

3 /5

 ಕನಸಿನಲ್ಲಿ  ಮದುವೆಯ ದಿಬ್ಬಣವನ್ನು ನೋಡುವುದು ಅಥವಾ ಡೋಲು ನಗಾರಿ ಬಾರಿಸುವುದನ್ನು ನೋಡುವುದು ಸಹ ಒಳ್ಳೆಯದಲ್ಲ. ಈ ರೀತಿಯ ಕನಸು ನಿಮ್ಮ ಜೀವನದಲ್ಲಿ ಮುಂಬರುವ ಸಮಯದಲ್ಲಿ ಒಂದು ರೀತಿಯ ತೊಂದರೆ ಅಥವಾ ಬಿಕ್ಕಟ್ಟು ಸಂಭವಿಸಲಿದೆ ಎಂದು ಸೂಚಿಸುತ್ತದೆ.

4 /5

ಒಣಗಿದ ಉದ್ಯಾನವನ್ನು ನೋಡಿದರೆ, ಅದು ಕೂಡಾ ಎದುರಾಗಬಹುದಾದ ಗಂಭೀರ ಸಮಸ್ಯೆಗಳನ್ನು ಗೋಚರಿಸುತ್ತದೆ. 

5 /5

ಕನಸಿನಲ್ಲಿ ಇರುವೆಗಳು ಅಥವಾ ಕೀಟಗಳನ್ನು ನೋಡುವುದು ಸಹ ಭವಿಷ್ಯದಲ್ಲಿ ಎದುರಾಗಬಹುದಾದ ನೋವಿನ ದಿನಗಳನ್ನು ತೋರಿಸುತ್ತದೆ. ಇನ್ನು ಕನಸಿನಲ್ಲಿ ಎಷ್ಟು ಪ್ರಮಾಣದಲ್ಲಿ ಕೀಟಗಳನ್ನು ನೋಡುತ್ತಿರೋ ನೋವು ಅಷ್ಟೇ ಪ್ರಮಾಣದಲ್ಲಿರುತ್ತದೆ ಎಂದರ್ಥ. 

You May Like

Sponsored by Taboola